Actor Darshan: ದರ್ಶನ್ ಬೇಲ್ ಕ್ಯಾನ್ಸಲ್‌ಗೆ ಫ್ಯಾನ್ಸ್ ಕಾರಣಾನಾ? ಸುಪ್ರೀಂ ಕೋರ್ಟ್ ಆದೇಶದ 64ನೇ ಪುಟದಲ್ಲೇನಿದೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ (Actor Darshan) ಇದೀಗ ಮತ್ತೆ ಜೈಲು ಸೇರಿದ್ದು, ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದಾರೆ. ದರ್ಶನ್ ಜಾಮೀನು ರದ್ಧತಿಗೆ ಕಾರಣವೇನು ಎಂಬುದನ್ನು ಹೈ ಕೋರ್ಟ್ ನ್ಯಾಯವಾದಿ ಸಹನಾ ಗೋಪಾಲ್ ಅವರು ತಿಳಿಸಿದ್ದಾರೆ.


ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ (Actor Darshan) ಇದೀಗ ಮತ್ತೆ ಜೈಲು ಸೇರಿದ್ದು, ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದಾರೆ. ಹೈ ಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಬೇಲ್ ಅರ್ಜಿಯನ್ನು ವಜಾಗೊಳಿಸಿತ್ತು. ಸರ್ಕಾರದ ಪರ ವಕೀಲರು ಹಲವು ಅಂಶಗಳನ್ನು ಕೋರ್ಟ್ ಮುಂದಿಟ್ಟಿದ್ದು, ಜಾಮೀನು ರದ್ಧತಿಗೆ ಅದೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ವಿಶ್ವವಾಣಿಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಹೈ ಕೋರ್ಟ್ ನ್ಯಾಯವಾದಿ ಸಹನಾ ಗೋಪಾಲ್ ಅವರು ದರ್ಶನ್ ಅಭಿಮಾನಿಗಳ ಕುರಿತು ಕೆಲ ಅಂಶಗಳನ್ನು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ 4000 ಸಾವಿರ ಪುಟಗಳ ಚಾರ್ಜಶೀಟ್ ಹಾಗೂ 260 ಕ್ಕೂ ಅಧಿಕ ಸಾಕ್ಷಗಳನ್ನು ಸಲ್ಲಿಸಲಾಗಿತ್ತು. ಹೀಗಾಗಿ ವಿಚಾರಣೆಗೆ ದೀರ್ಘಾವಧಿ ಬೇಕಾಗುವುದು. ಈ ಮಧ್ಯೆ ಆರೋಪಿಗಳು ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಹುದು ಎಂದು ಸರ್ಕಾರದ ಪರ ವಕೀಲ ವಾದ ಮಾಡಿದ್ದರು. ಇದನ್ನೂ ಕೂಡ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅಷ್ಟೇ ಅಲ್ಲದೆ ಹೈಕೋರ್ಟ್ ಯಾವೆಲ್ಲ ಅಂಶಗಳನ್ನು ಪರಿಗಣಿಸಿಲ್ಲವೋ, ಅದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಅಪರಾಧದ ಸ್ವರೂಪವನ್ನು ನ್ಯಾಯಾಲಯ ಗಮನಿಸಿದೆ. ಅಷ್ಟೇ ಅಲ್ಲದೆ, ದರ್ಶನ್ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರೋ ಸಾಧ್ಯತೆಗಳು ಹೆಚ್ಚಿದೆ. ಸಾಕ್ಷಿದಾರನ್ನು ಭೇಟಿ ಮಾಡಿ ಪ್ರಾಸಿಕ್ಯೂಷನ್ ವಿರುದ್ಧವಾಗಿ ಹೇಳಿಕೆ ನೀಡಬಹುದು, ಆರೋಪಿಗಳು ಪ್ರಭಾವ ಬಳಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ, ಪೊಲೀಸರು ಕೋರ್ಟ್‌ಗೆ ಸರಿಯಾದ ಸಾಕ್ಷಿ, ಟೆಕ್ನಿಕಲ್ ಎವಿಡೆನ್ಸ್, ಕಾಲ್ ರೆಕಾರ್ಡ್, ಲೋಕೆಶನ್ ಡಿಟೇಲ್ಸ್ ಒದಗಿಸಿದ್ದು ಬೇಲ್ ರದ್ದು ಮಾಡಲು ಪ್ರಮುಖ ಕಾರಣವಾಗಿದೆ.
ಇನ್ನು ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನ ಕುರಿತು ಮಾತನಾಡಿದ್ದ ನ್ಯಾಯಮೂರ್ತಿಗಳು, ದರ್ಶನ್ ಆರೋಗ್ಯದ ನೆಪ ಹೇಳಿ ದರ್ಶನ್ ಜಾಮೀನು ಪಡೆದುಕೊಂಡಿದ್ದರು. ಇದಾದ ಕೆಲವು ದಿನ ಅವರು ಆಸ್ಪತ್ರೆಯಲ್ಲಿದ್ದರು. ನಂತರ ಯಾವುದೇ ಆಪರೇಷನ್ ಮಾಡಿಸಿಕೊಂಡಿರಲಿಲ್ಲ, ಅಷ್ಟೇ ಅಲ್ಲದೆ, ಸಿನಿಮಾ ಶೂಟಿಂಗ್‌ಗೆ ವಿದೇಶಕ್ಕೆ ತೆರಳಿದ್ದರು. ಇದು ಕೂಡ ಬೇಲ್ ರದ್ದು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಸುದ್ದಿಯನ್ನೂ ಓದಿ: Actor Darshan: ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಶಿಫ್ಟ್?; ಆರೋಪಿಗಳ ಸ್ಥಳಾಂತರಕ್ಕೆ ಮುಂದಾದ ಜೈಲು ಅಧಿಕಾರಿಗಳು
ಮತ್ತೊಂದು ಇನ್‌ಟರೆಸ್ಟಿಂಗ್ ವಿಚಾರವೆಂದರೆ, ದರ್ಶನ್ ಬೇಲ್ ಕ್ಯಾನ್ಸ್‌ಲ್ ಆಗುವುದಕ್ಕೆ ಆತನ ಅಭಿಮಾನಿಗಳೂ ಕಾರಣ. ಹೌದು, ದರ್ಶನ್ ಅಭಿಮಾನಿಗಳ ಅತೀರೇಕದ ವರ್ತನೆ ಕುರಿತು 64 ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಈತ ಹೆಚ್ಚಿನ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದು, ಈತನಿಗೆ ಬೇಲ್ ನೀಡಿದರೆ ಅಪರಾಧ ಕೃತ್ಯ ಮಾಡಿದವರಿಗೆ ಇದು ತಪ್ಪಾದ ಸಂದೇಶವನ್ನು ರವಾನಿಸುತ್ತದೆ. ಇದು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಭಯ ಮತ್ತು ಗೌರವವನ್ನು ಕಡಿಮೆ ಮಾಡಬಹದು ಎಂದು ಸುಪ್ರೀಂ ತಿಳಿಸಿದೆ.