ನೀವು ಈಗಲೂ ವರ್ಜಿನ್ ಇದ್ದೀರಾ? ಸಲ್ಮಾನ್ ಖಾನ್‌ಗೆ ನೇರವಾಗಿ ಪ್ರಶ್ನಿಸಿದ ಕರಣ್ ಜೋಹರ್!
ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ ಅವರ ಜನಪ್ರಿಯ ಶೋ ಕಾಫಿ ವಿಥ್ ಕರಣ್ ನ 9ನೇ ಸೀಸನ್ ನಾಳೆಯಿಂದ ಪ್ರಸಾರವಾಗಲಿದೆ. ವಿಶೇಷವೆಂದರೆ, ಈ ಹೊಸ ಸೀಸನ್‌ನ ಮೊದಲ ಸಂಚಿಕೆಯ ಅತಿಥಿಯಾಗಿ ಬಾಲಿವುಡ್‌ನ ಸುಲ್ತಾನ್ ಸಲ್ಮಾನ್ ಖಾನ್ ಆಗಮಿಸಿದ್ದಾರೆ. ಶೋ ಆರಂಭಕ್ಕೂ ಮುನ್ನ ಬಿಡುಗಡೆಯಾಗಿರುವ ಪ್ರೋಮೋದಲ್ಲಿ, ಕರಣ್ ಜೋಹರ್ ಅವರು ಕೇಳಿರುವ ಪ್ರಶ್ನೆ ಸಲ್ಮಾನ್ ಖಾನ್ ಅವರನ್ನು ಮುಜುಗರಕ್ಕೀಡು ಮಾಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಮುಂಬೈ: ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಟಾಕ್ ಶೋಗಳಲ್ಲಿ ಒಂದಾದ ಕಾಫಿ ವಿತ್ ಕರಣ್ (Koffee With Karan) ನಾಳೆಯಿಂದ ಅಧಿಕೃತವಾಗಿ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಸುಮಾರು ಎರಡು ದಶಕಗಳ ಕಾಲ ಸೆಲೆಬ್ರೆಟಿಗಳ ವೈಯಕ್ತಿಕ ಗುಟ್ಟುಗಳನ್ನು, ರಹಸ್ಯಗಳನ್ನು ನೇರವಾಗಿ ಪ್ರಶ್ನಿಸಿ ಸಾಕಷ್ಟು ಸದ್ದು ಮಾಡಿದ್ದ ಶೋ ಸಾವಿರಾರು ಪ್ರೇಕ್ಷಕರನ್ನು ಸೆಳೆದಿತ್ತು. ಈ ಬಾರಿಯ ಮೊದಲ ಎಪಿಸೋಡ್‌ಗೆ ಬಾಲಿವುಡ್ ಸುಲ್ತಾನ್ ನಟ ಸಲ್ಮಾನ್ ಖಾನ್ (Salman Khan) ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದು, ಇದಕ್ಕೆ ಸಂಬಂಧಿಸಿದ ಪ್ರೋಮೊ ಒಂದನ್ನು ತಂಡ ಹಂಚಿಕೊಂಡಿದೆ. ಈ ಪ್ರೋಮೊದಲ್ಲಿ ಕರಣ್ ಜೋಹರ್, ʼʼನೀವು ಈಗಲೂ ವರ್ಜಿನ್ ? ಎಂದು ಸಲ್ಮಾನ್ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕರಣ್ ಅವರ ಈ ಕಸಿಬಿಸಿ ಪ್ರಶ್ನೆಗೆ ಸಲ್ಮಾನ್ ಖಾನ್ ನೀಡುವ ಉತ್ತರವೇನೆಂದು ತಿಳಿಯಲು ಮುಂದಿನ ಎಪಿಸೋಡ್‌ಗೆ ವೀಕ್ಷಕರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
ನಿರ್ಮಾಪಕ ಕರಣ್ ಜೋಹಾರ್ ಹಲವು ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಈ ಟಾಕ್ ಶೋನ ಎಂಟು ಸೀಸನ್ ಈ ವರೆಗೆ ಪ್ರಸಾರ ಆಗಿದ್ದು, ಇದೀಗ ಒಂಬತ್ತನೇ ಸೀಸನ್ ಪ್ರಸಾರವಾಗಲಿದೆ. ಇದು ಕಾಫಿ ವಿತ್ ಕರಣ್‌ನ ಕೊನೆಯ ಸೀಸನ್ ಆಗಿರಲಿದೆ. ಸೀಸನ್‌ನ ಪ್ರೋಮೊ ಈ ಹಿಂದೆ ರಿಲೀಸ್ ಆಗಿತ್ತು. ಆದರೆ ಅತಿಥಿಗಳು ಯಾರೆಂದು ರಿವೀಲ್ ಮಾಡಿರಲಿಲ್ಲ. ಆದರೆ ಈಗ ಸಲ್ಮಾನ್ ಖಾನ್ ಅವರು ಮೊದಲ ಅತಿಥಿಯಾಗಿ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಡಿಯೋ ನೋಡಿ
New promo of Kofee with karan Karan Johar - Are u still a virgin 😭 Salman - Control yaar, karan 😂 https://t.co/vylm2cYXgL
— Manish Vaishnav (@ManishV215) October 13, 2026
ನೀವು ಈಗಲೂ ವರ್ಜಿನ್ ? ಸಲ್ಲುಗೆ ಕರಣ್ ಪ್ರಶ್ನೆ
2013ರಲ್ಲಿ ಪ್ರಸಾರವಾಗಿದ್ದ 'ಕಾಫಿ ವಿತ್ ಕರಣ್' ಸೀಸನ್ 4ರ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಬಂದಾಗ, ಕರಣ್ ಜೋಹರ್ ʼʼನೀವು ಈಗಲೂ ವರ್ಜಿನ್ʼʼ ಎಂದು ನೇರವಾಗಿ ಪ್ರಶ್ನಿಸಿದ್ದರು. ಅದಕ್ಕೆ ಸಲ್ಮಾನ್ ಖಾನ್ ನೀಡಿದ ಅಚ್ಚರಿಯ ಉತ್ತರ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸೀಸನ್ 9ರ ಪ್ರೀಮಿಯರ್ ಎಪಿಸೋಡ್‌ನಲ್ಲಿಯೂ ಕರಣ್ ಜೋಹರ್ ಅದೇ ಹಳೆಯ ಪ್ರಶ್ನೆಯನ್ನು ಮತ್ತೆ ಸಲ್ಮಾನ್ ಮುಂದಿಟ್ಟಿರುವುದು ಭಾರೀ ಕೂತುಹಲಕ್ಕೆ ಕಾರಣವಾಗಿದೆ. ಕರಣ್ ಜೋಹರ್ ತಮಗೆ ಅದೇ ಹಳೆ ಪ್ರಶ್ನೆ ಕೇಳುತ್ತಿದ್ದಂತೆ, ಸಲ್ಮಾನ್ ಖಾನ್ ತುಸು ಗಲಿಬಿಲಿಗೊಂಡು ಬಳಿಕ ನಗುತ್ತಲೇ ಖ್ಯಾತ ನಟ ರವಿ ಕೃಷ್ಣಾ ಅವರ ಪ್ರಸಿದ್ಧ ಡೈಲಾಗ್ ನೆನಪಿಸುತ್ತಾ, ʼʼಕಂಟ್ರೋಲ್ ಮೈ ಬ್ರದರ್, ಕಂಟ್ರೋಲ್" ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಫಿ ವಿತ್ ಕರಣ್' ಕೊನೆಯ ಸೀಸನ್?
ಮಾಹಿತಿಗಳ ಪ್ರಕಾರ, ಕರಣ್ ಜೋಹರ್ ನಿರ್ವಹಿಸುತ್ತಿರುವ ಜನಪ್ರಿಯ 'ಕಾಫಿ ವಿತ್ ಕರಣ್' ಟಾಕ್ ಶೋನ 9ನೇ ಸೀಸನ್ ಈ ಕಾರ್ಯಕ್ರಮದ ಕೊನೆಯ ಸೀಸನ್ ಆಗಿರಲಿದೆ ಎಂದು ವರದಿಯಾಗಿದೆ. ಈ ವಿಶೇಷ ಸೀಸನ್‌ನ ಮೊದಲ ಸಂಚಿಕೆಯಲ್ಲಿಯೇ ಸಲ್ಮಾನ್ ಖಾನ್ ಮೊದಲ ಅತಿಥಯಾಗಿ ಭಾಗವಹಿಸಿರುವುದು ಸೀಸನ್ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಅಕ್ಟೋಬರ್ 14 ನಾಳೆ ಈ ಹೊಸ ಹಾಗೂ ಅಂತಿಮ ಸೀಸನ್ ಪ್ರಸಾರವಾಗಲಿದೆ.
Koffee With Karan Season 9: ʻಕಾಫಿ ವಿತ್ ಕರಣ್ʼ ಶೋನ ಕೊನೆಯ ಸೀಸನ್! ಸಲ್ಮಾನ್ ಖಾನ್ ಅತಿಥಿ
ಕೊನೆಯ ಸೀಸನ್ ಆಗಿರುವುದರಿಂದ ಬಾಲಿವುಡ್‌ನ ಖ್ಯಾತ್ ಹಾಗೂ ದಿಗ್ಗಜ ಸ್ಟಾರ್ ನಟ ಮತ್ತು ನಟಿಯರು ತಮ್ಮ ವೈಯಕ್ತಿಕ ಜೀವನದ ಹಲವು ರಹಸ್ಯಗಳನ್ನು ಹಂಚಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಈ ಸೀಸನ್‌ನಲ್ಲಿ ಆಲಿಯಾ ಭಟ್, ಶರ್ವರಿ ವಾಘ್, ಜಾನ್ಹವಿ ಕಪೂರ, ಅನನ್ಯಾ ಪಾಂಡೆ, ಆಲಿಯಾ ಎಫ್, ಶಾಹಿದ್ ಕಪೂರ್, ಸಂದೀಪ್ ರೆಡ್ಡಿ ವಂಗಾ ಇನ್ನೂ ಹಲವರು ಅತಿಥಿಗಳಾಗಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಪ್ರೋಮೋ ವಿಡಿಯೋ ಎಕ್ಸ್, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡು ಟ್ರೆಂಡಿಂಗ್‌ನಲ್ಲಿದೆ.