ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aryan Khan: ಶಾರುಖ್ ಖಾನ್ ಸೊಸೆ ಇವರೇ; ಗೆಳತಿ ಲಾರಿಸ್ಸಾ ಬೊನ್ಸಿ ಜೊತೆ ಮತ್ತೆ ಕಾಣಿಸಿಕೊಂಡ ಆರ್ಯನ್ ಖಾನ್

Aryan Khan girlfriend:ಇತ್ತೀಚೆಗೆ ಆರ್ಯನ್ ಅವರು ಬ್ರೆಜಿಲಿಯನ್ ನಟಿ ಲಾರಿಸ್ಸಾ ಅವರೊಂದಿಗೆ ಸಾರ್ವಜನಿಕ ಸ್ಥಳದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಅವರಿಬ್ಬರು ಲವ್ ರಿಲೇಶನ್ ಶಿಪ್ ಹೊಂದಿ ದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿದೆ. ಇದೀಗ ಅದರ ಬೆನ್ನಲ್ಲೆ ಶಾರುಖ್ ಪುತ್ರ ಆರ್ಯನ್ ಅವರ ಹೊಸ ವೆಬ್ ಸರಣಿಯ ಪ್ರದರ್ಶನದಲ್ಲಿ ಬ್ರೆಜಿಲ್ ನಟಿ ಲಾರಿಸ್ಸಾ ಬೊನ್ಸಿ ಕೂಡ ಆಗಮಿಸಿದ್ದು ಇವರ ಕೆಲವು ಫೋಟೊ ಹಾಗೂ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಗರ್ಲ್ ಫ್ರೆಂಡ್ ಲಾರಿಸ್ಸಾ ಬೊನ್ಸಿ ಜೊತೆ ಮತ್ತೆ ಕಾಣಿಸಿಕೊಂಡ ಆರ್ಯನ್ ಖಾನ್!

-

Profile Pushpa Kumari Sep 19, 2025 1:13 PM

ನವದೆಹಲಿ: ಸಿನಿಮಾ ಸೆಲೆಬ್ರಿಟಿಗಳ‌ ಮಕ್ಕಳು ಚಿತ್ರರಂಗಕ್ಕೆ ಬರುವುದು ಸಾಮಾನ್ಯ ವಿಚಾರವಾಗಿದೆ. ಈಗಾಗಲೇ ಸಾಕಷ್ಟು ನಟ ನಟಿಯರ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. ಅಂತವರಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ (Aryan Khan) ಕೂಡ ಒಬ್ಬರು. ಅವರು ಬಾಲ ನಟರಾಗಿ 2001ರಲ್ಲಿ ಬಿಡುಗಡೆಯಾದ ಕಭಿ ಖುಷಿ ಕಭಿ ಗಮ್ ಸಿನಿಮಾದಲ್ಲಿ ಅಭಿನಯಿಸಿ ಅನೇಕ ಅಭಿಮಾನಿಗಳ ಮನ ಸೆಳೆದಿದ್ದರು‌. ಇದೀಗ ಅವರಿಗೆ 27ವರ್ಷ ವಯಸ್ಸಾಗಿದ್ದು ನಾಯಕ ನಟನಾಗಿ ಅಭಿನಯಿಸುವ ಬದಲು ನಿರ್ದೇಶನ ಕ್ಷೇತ್ರಕ್ಕೆ ಇಳಿದಿದ್ದಾರೆ.

ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯನ್ನು ನಿರ್ದೇಶಿಸಿದ್ದು ಸೆಪ್ಟೆಂಬರ್ 18ರಂದು ನೆಟ್‌ ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಈ ಸರಣಿಯನ್ನು ಪ್ರದರ್ಶನ ಮಾಡಲಾಗಿದ್ದು ಇದಕ್ಕೆ ಅನೇಕ ಸೆಲೆಬ್ರಿಟಿಗಳು ಕೂಡ ಭಾಗಿಯಾಗಿದ್ದರು. ಆರ್ಯನ್ ಖಾನ್ ಅವರ ಗೆಳತಿ ಲಾರಿಸ್ಸಾ ಬೊನ್ಸಿ ಕೂಡ ಈ ಕಾರ್ಯಕ್ರಮಕ್ಕೆ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಆರ್ಯನ್ ಅವರು ಬ್ರೆಜಿಲಿಯನ್ ನಟಿ ಲಾರಿಸ್ಸಾ ಅವರೊಂದಿಗೆ ಸಾರ್ವಜನಿಕ ಸ್ಥಳದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದು ಅವರಿಬ್ಬರು ಲವ್ ರಿಲೇಶನ್ ಶಿಪ್ ಹೊಂದಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿದೆ. ಇದೀಗ ಅದರ ಬೆನ್ನಲ್ಲೆ ಶಾರುಖ್ ಪುತ್ರ ಆರ್ಯನ್ ಅವರ ಹೊಸ ವೆಬ್ ಸರಣಿಯ ಪ್ರದರ್ಶನದಲ್ಲಿ ಬ್ರೆಜಿಲ್ ನಟಿ ಲಾರಿಸ್ಸಾ ಬೊನ್ಸಿ ಕೂಡ ಆಗಮಿಸಿದ್ದು ಇವರ ಕೆಲವು ಫೋಟೊ ಹಾಗೂ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೋದಲ್ಲಿ 'ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯ ಪ್ರದರ್ಶನಕ್ಕೆ ಲಾರಿಸ್ಸಾ ಬೊನ್ಸಿ ಬ್ಲ್ಯಾಕ್ ಕಲರ್ ಡ್ರೆಸ್ ನಲ್ಲಿ ಭಾಗಿಯಾಗಿದ್ದಾರೆ. ಬ್ಲ್ಯಾಕ್ ಕಲರ್ ಮಾಡರ್ನ್ ಪಾರ್ಟಿ ವೇರ್ ನಲ್ಲಿ ಸಿಂಪಲ್ ಮೇಕಪ್ ಹಾಗೂ ಫ್ರಿ ಹೇರ್ ಸ್ಟೈಲ್ ನಲ್ಲಿ ನಟಿ ಲಾರಿಸ್ಸಾ ಅವರು ಹೆಚ್ಚು ಗ್ಲಾಮರಸ್ ಆಗಿ ಕಂಡಿದ್ದಾರೆ‌. ಈ ಮೂಲಕ ಶಾರುಖ್ ಪುತ್ರ ಆರ್ಯನ್ ಹಾಗೂ ಲೊರಿಸ್ಸಾ ಅವರ ನಡುವಿನ ರಿಲೇಶನ್ ಶೀಪ್ ವದಂತಿಗಳು ನಿಜವೆಂದು ಹೇಳಲಾಗುತ್ತಿದೆ. ಶಾರುಖ್ ಅಭಿಮಾನಿ ಯೊಬ್ಬರು ಈ ವಿಡಿಯೋ ಕಂಡು ಶಾರುಖ್ ಖಾನ್ ಸೊಸೆ ತುಂಬಾ ಸುಂದರವಾಗಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ.

ಲಾರಿಸ್ಸಾ ಅವರು ಬ್ರೆಜಿಲ್‌ ಮೂಲದವರಾಗಿದ್ದು ಅಲ್ಲಿ ನಟಿ ಮತ್ತು ಮಾಡೆಲ್ ಆಗಿ ಅವರು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ. ‘ದೇಸಿ ಬಾಯ್ಸ್’ ಎಂಬ ಸಿನಿಮಾದಲ್ಲಿ ‘ಸುಬಾ ಹೋನೆ ನಾ ದೇ’ ಹಾಡಿನ ಮೂಲಕ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಸಿನಿಮಾದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿಯೂ ಬಹಳ ಆ್ಯಕ್ಟಿವ್ ಆಗಿರುವ ಇವರಿಗೆ ಸಾಕಷ್ಟು ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ.

ಇದನ್ನೂ ಓದಿ:45 Movie: ನಟ ಉಪೇಂದ್ರ ಬರ್ತ್‌ ಡೇ; ರಿಯಲ್ ಬೈಕ್ ಅನಾವರಣ ಮಾಡಿ ವಿಶ್‌ ಮಾಡಿದ ʼ45ʼ ಚಿತ್ರತಂಡ

ಆರ್ಯನ್ ಅವರ ಹೊಸ ವೆಬ್ ಸರಣಿಯಲ್ಲಿ ಲಕ್ಷ್ಯ ಲಾಲ್ವಾನಿ, ರಾಘವ್ ಜುಯಾಲ್, ಸಹೆರ್ ಬಂಬಾ , ಬಾಬಿ ಡಿಯೋಲ್ , ಮನೀಶ್ ಚೌಧರಿ, ಮನೋಜ್ ಪಹ್ವಾ, ವಿಜಯಂತ್ ಕೊಹ್ಲಿ, ಅನ್ಯಾ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟಿಸಿದ್ದು ಬಹುದೊಡ್ಡ ತಾರಾಗಣ ಇಲ್ಲಿದೆ. ಶಾರುಖ್ ಖಾನ್ ಅವರು ಈಗಾಗಲೇ ಈ ವೆಬ್ ಸರಣಿಗೆ ಸಾಕಷ್ಟು ಪ್ರಚಾರ ನೀಡಿದ್ದಾರೆ. ಬ್ಯಾಡ್ಸ್ ಆಫ್ ಬಾಲಿವುಡ್ ವೆಬ್ ಸರಣಿಯನ್ನು ಗೌರಿ ಖಾನ್ ಅವರು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಿದ್ದಾರೆ. ದೊಡ್ಡ ಮಟ್ಟಿನ ತಾರಾಗಣ ಹಾಗೂ ಆಕರ್ಷಕ ಕಥಾಹಂದರವನ್ನು ಈ ಸರಣಿ ಹೊಂದಿದ್ದು ಬಾಲಿವುಡ್ ನಲ್ಲಿ ಈ ವೆಬ್ ಸರಣಿ ದೊಡ್ಡ ಸಂಚಲನ ಕೂಡ ಸೃಷ್ಟಿಸುತ್ತಿದೆ.