Bigg Boss 12 Finale: ಎರಡನೇ ರನ್ನರ್ ಅಪ್ ಆದ ಬಿಗ್ ಬಾಸ್ `ರಾಜಮಾತೆ' ಅಶ್ವಿನಿ ಗೌಡ !
Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಎರಡನೇ ರನ್ನರ್ ಅಪ್ ಅಶ್ವಿನಿ ಗೌಡ ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ದಾಖಲೆಯ ವೋಟ್ ವಿನ್ನರ್ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್ ಅಪ್ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ಅಶ್ವಿನಿ ಗೌಡ ಎಂದು ಹಲವರು ಭಾವಿಸಿದ್ದರು. ಆದರೀಗ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಗ್ರ್ಯಾಂಡ್ ಫಿನಾಲೆ (Grand Finale) ಅದ್ಧೂರಿಯಾಗಿ ನೆರವೇರಿದೆ. ಎರಡನೇ ರನ್ನರ್ ಅಪ್ (Runner Up) ಅಶ್ವಿನಿ ಗೌಡ (Ashwini Gowda) ಆಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ದಾಖಲೆಯ ವೋಟ್ ವಿನ್ನರ್ ಸ್ಪರ್ಧಿ ಪಡೆದುಕೊಂಡಿದ್ದರೆ, ರನ್ನರ್ ಅಪ್ ಕೂಡ ಸ್ಪಲ್ಪ ಅಂತದರಲ್ಲಿ ಇದ್ದಾರೆ ಎಂದಿದ್ದರು. ಅದರಂತೆ ಅಶ್ವಿನಿ ಗೌಡ ಅವರು ರನ್ನರ್ ಅಪ್ ಆಗಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೀಗ ಎರಡನೇ ರನ್ನರ್ ಅಪ್ ಆಗಿದ್ದಾರೆ. 14 ಲಕ್ಷ ರೂ ಕ್ಯಾಶ್ ಪ್ರೈಸ್ ಪಡೆದಿದ್ದಾರೆ.
ಭರ್ಜರಿ ಪೈಪೋಟಿ
ಗಿಲ್ಲಿ ನಟ ಅವರೇ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ ಆಗಿತ್ತು. ಅವರಿಗೆ ಅಶ್ವಿನಿ ಗೌಡ ಕೂಡ ಭರ್ಜರಿ ಪೈಪೋಟಿ ನೀಡಿದ್ದರು. ಅಶ್ವಿನಿ ಗೌಡ ಅವರು ಕನ್ನಡಪರ ಹೋರಾಟಗಾರ್ತಿ. ಅವರು ನಟಿ ಕೂಡ ಹೌದು. ‘ಬಿಗ್ ಬಾಸ್ ಕನ್ನಡ ಸೀನಸ್ 12’ ಶೋಗೆ ಬಂದ ಬಳಿಕ ಅಶ್ವಿನಿ ಗೌಡ ಅವರ ಖ್ಯಾತಿ ಹೆಚ್ಚಾಗಿದೆ. ಅಶ್ವಿನಿ ಪರವಾಗಿ ಕನ್ನಡ ಪರ ಹೋರಾಟಗಾರರು ಪ್ರಚಾರ ಮಾಡಿ ವೋಟ್ ಕೇಳಿದ್ದರು.
ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
ರಾಜಮಾತೆ ಪಟ್ಟ
ಅಶ್ವಿನಿ ಗೌಡ ಬಂದ ಮೊದಲ ವಾರಕ್ಕೆ ಕೂಗಾಟ, ಚೀರಾಟ ಜೋರಾಗಿಯೇ ಇತ್ತು. ರಾಜಮಾತೆ ಪಟ್ಟ ಸಿಕ್ಕ ಮೇಲೆ ಇನ್ನಷ್ಟು ಹೈಲೈಟ್ ಆಗಿದ್ದರು ಅಶ್ವಿನಿ. ಅದರಲ್ಲೂ ಜಾಹ್ನವಿ ಹಾಗೂ ಅಶ್ವಿನಿ ಗೌಡ ಜೋಡಿಯೇ ಪ್ರಮುಖವಾಗಿತ್ತು. ಅಶ್ವಿನಿ ಅವರಿಗೆ ಕಾಡಿಸ್ತಾ ಇದ್ದಿದ್ದು ಗಿಲ್ಲಿ ನಟ. ಅತ್ತೆ ಮಗಳು ಅಂತಾನೇ ಅಶ್ವಿನ ಅವರನ್ನ ಸಖತ್ ಟ್ರಿಗರ್ ಮಾಡ್ತಾ ಇದ್ದರು ಗಿಲ್ಲಿ.
ಗಿಲ್ಲಿಯನ್ನು ಕಂಡರೆ ಅಶ್ವಿನಿ ಗೌಡ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಬಾರಿ ಮಾತಾಡಿಕೊಂಡಿದ್ದಾರೆ.
ಅಶ್ವಿನಿ ಮೇಡಂ ೨.೦
ಅಶ್ವಿನಿ ಅವರು ಸಖತ್ ಸೈಲೆಂಟ್ ಆಗ್ತಾರೆ. ಈ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿ ಮತ್ತೆ ನಾಮಿನೇಟ್ ಮಾಡಲು ಶುರು ಮಾಡ್ತಾರೆ. ಅಶ್ವಿನಿ ಮೇಡಂ ೨.೦ ಶುರುವಾಗಬೇಕು ಅಂತ ಹೇಳಿದ್ದಾರೆ. ಅದನ್ನು ಅವರು ಹೇಗೆ ತೆಗೆದುಕೊಂಡಿದ್ದಾರೆ ಅಂದರೆ, ಸೈಲೆಂಟ್ ಆಗಿ ಮನೆಯಲ್ಲಿ ಕೆಲಸ ಮಾಡಿಕೊಂಡು, ಓಡಾಡಿಕೊಂಡು, ಅಡುಗೆ ಮಾಡಿಕೊಂಡು, ಸೊಪ್ಪು ಬಿಡಿಸಿಕೊಂಡು ಇದ್ದು ಬಿಡಬೇಕು.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್
ಎಲ್ಲಾ ಮಾಡಬೇಕು ಅಂತ ಹೇಳಿರೋದು. ಸುಮ್ಮನೆ ಸೈಲೆಂಟ್ ಆಗಿ ಇದ್ದು ಬಿಡಿ ಅಂತ ಹೇಳಿದ್ದಲ್ಲ ಎಂದು ಕಾರಣ ಕೂಡ ಕೊಡ್ತಾರೆ.ಟಾಸ್ಕ್ ಅಂತ ಬಂದರೂ ಅಶ್ವಿನಿ ಅವರು ಸಖತ್ ಪೈಪೋಟಿ ನೀಡಿದ ಸ್ಪರ್ಧಿ ಆಗಿದ್ದರು.