Deepika Padukone: ಆ್ಯಕ್ಷನ್ ದೃಶ್ಯದಲ್ಲಿ ಇರ್ತಾರೆ ದೀಪಿಕಾ! ಬಾಡಿ ಡಬಲ್ ಮೊರೆ ಹೋದ ತಂಡ
Deepika Padukone: ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಅವರು ‘ರಾಕಾ’ ಸಿನಿಮಾ ಹಾಗೂ ‘ಕಿಂಗ್’ ಚಿತ್ರಗಳ ಶೂಟ್ ಪೂರ್ಣಗೊಳಿಸಬೇಕಿದೆ. ಅಟ್ಲೀ ಅವರ ರಾಕಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರದ ಬಗ್ಗೆ ಹೊಸ ವಿವರಗಳು ಹೊರಬಿದ್ದಿವೆ. ಈ ಸಿನಿಮಾದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳಿಗೆ ಬಾಡಿ ಡಬಲ್ ಬಳಕೆ ಮಾಡಲು ತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.
ದೀಪಿಕಾ ಪಡುಕೋಣೆ -
ದೀಪಿಕಾ ಪಡುಕೋಣೆ (Deepika Padukone) ತಾಯಿ ಆಗುತ್ತಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಅವರು ‘ರಾಕಾ’(Raaka) ಸಿನಿಮಾ ಹಾಗೂ ‘ಕಿಂಗ್’ ಚಿತ್ರಗಳ ಶೂಟ್ ಪೂರ್ಣಗೊಳಿಸಬೇಕಿದೆ. ಅಟ್ಲೀ ಅವರ ರಾಕಾ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರದ ಬಗ್ಗೆ ಹೊಸ ವಿವರಗಳು ಹೊರಬಿದ್ದಿವೆ. ಈ ಸಿನಿಮಾದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳಿಗೆ ಬಾಡಿ ಡಬಲ್ ಬಳಕೆ (Body Double) ಮಾಡಲು ತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.
ನಿರ್ಮಾಣದ ಆಪ್ತ ಮೂಲಗಳು ದೀಪಿಕಾ ಅವರ ದೃಶ್ಯಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಪ್ರಮುಖ ಪ್ರೇರಕ ಶಕ್ತಿಯಾಗಿ ಮುಂದುವರೆದಿದ್ದಾರೆ ಎಂದು ತಿಳಿಸಿವೆ. ಬಾಲಿವುಡ್ ಹಂಗಾಮಾ ಉಲ್ಲೇಖಿಸಿದ ಮೂಲದ ಪ್ರಕಾರ , ಆಕ್ಷನ್ ಒಳಗೊಂಡ ಕೆಲವು ಭಾಗಗಳು ಈಗ ಬಾಡಿ ಡಬಲ್‌ನೊಂದಿಗೆ ಪೂರ್ಣಗೊಳ್ಳುತ್ತವೆ.
ಇದನ್ನೂ ಓದಿ: Peddi and The Paradise Leaks: ಒಂದೇ ದಿನ ಈ ಎರಡೂ ಸಿನಿಮಾಗಳಿಗೆ ಸಂಕಷ್ಟ; ‘ಪೆದ್ದಿ’,‘ದಿ ಪ್ಯಾರಡೈಸ್’ಗೆ ಲೀಕ್ ಕಾಟ
"ದೀಪಿಕಾಗೆ ಅದ್ಭುತ ಪ್ರವೇಶವಿದೆ, ಜೊತೆಗೆ ಅಲ್ಲು ಅರ್ಜುನ್ ಜೊತೆ ಒಂದು ದೊಡ್ಡ ಆಕ್ಷನ್ ಕ್ಷಣವೂ ಇದೆ. ಈಗ ಅದೆಲ್ಲವನ್ನೂ ಡಬಲ್ ಮಾಡಲಿದ್ದಾರೆ, ಆದರೆ ದೀಪಿಕಾ ಪಾತ್ರವು ಹಾಗೆಯೇ ಇರುತ್ತದೆ. ರಾಕಾದ ಪ್ರಮುಖ ನಾಯಕಿ , ಮತ್ತು ಗರ್ಭಧಾರಣೆಯ ಕಾರಣದಿಂದಾಗಿ ಏನೂ ಬದಲಾಗುವುದಿಲ್ಲ" ಎಂದು ವರದಿ ಆಗಿದೆ.
ಅಟ್ಲೀ ನಿರ್ದೇಶನದ ' ರಾಕಾ' ಸಿನಿಮಾ , ವಿಶೇಷವಾಗಿ ದೀಪಿಕಾ ಮತ್ತು ಅಲ್ಲು ಅರ್ಜುನ್ ನಿರ್ವಹಿಸಿದ ಪಾತ್ರಗಳಿಗಾಗಿ ಗಮನ ಸೆಳೆಯುತ್ತಿದೆ. ಇದಕ್ಕೂ ಮುನ್ನ, " ದೀಪಿಕಾ ಪಡುಕೋಣೆ 'ರಾಕಾ' ಸಿನಿಮಾಗಾಗಿ ತೀವ್ರವಾದ ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದಾರೆ ಎಂದು ಮೂಲವೊಂದು ಹೇಳಿತ್ತು.
ಬಾಡಿ ಡಬಲ್ ಚಿತ್ರರಂಗದಲ್ಲಿ ಮೊದಲಿನಿಂದಲೂ ಬಳಕೆಯಲ್ಲಿರುವ ತಂತ್ರ. ರಿಸ್ಕಿ ಆ್ಯಕ್ಷನ್ ದೃಶ್ಯಗಳ ಸಮಯದಲ್ಲಿ ಇದನ್ನು ಬಳಸಲಾಗುತ್ತದೆ. ದೇಹದ ಆಕಾರದಲ್ಲಿ ಹೀರೋ ಅಥವಾ ಹೀರೋಯಿನ್ ಹೋಲುವ ವ್ಯಕ್ತಿಯನ್ನು ಕರೆತರಲಾಗುತ್ತದೆ. ಇಲ್ಲಿ ಎಲ್ಲಿಯೂ ಮುಖವನ್ನು ತೋರಿಸುವುದಿಲ್ಲ.
ಈಗಾಗಲೇ ದೀಪಿಕಾ ಪಡುಕೋಣೆ ಅವರು ಕ್ಲೋಸಪ್ ಶಾಟ್ಗಳನ್ನು ಕೊಟ್ಟಿದ್ದಾರೆ. ಸ್ಟಂಟ್ ಮಾಡುವ ದೃಶ್ಯಗಳಲ್ಲಿ ದೀಪಿಕಾ ಪಡುಕೋಣೆ ಮುಖ ತೋರಿಸುವ ದೃಶ್ಯ ಬಂದರೆ, ವಿಎಫ್ಎಕ್ಸ್ ಮೂಲಕ ಎಡಿಟ್ ಮಾಡಲು ನಿರ್ಧರಿಸಲಾಗಿದೆ.
ವರದಿಗಳ ಪ್ರಕಾರ, ಏಪ್ರಿಲ್ 19ರಂದು ಎರಡನೇ ಪ್ರೆಗ್ನೆನ್ಸಿಯ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ, ದೀಪಿಕಾ ಪಡುಕೋಣೆ ಏಪ್ರಿಲ್ 21ರಂದು ‘ಕಿಂಗ್’ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.
ಇದನ್ನೂ ಓದಿ: Exam OTT release: ಒಟಿಟಿಗೆ ಎಂಟ್ರಿ ಕೊಡ್ತಿದೆ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಸಿರೀಸ್; ಸ್ಟ್ರೀಮಿಂಗ್ ಎಲ್ಲಿ?
ಮುಂಬೈನ ವಿಲೆ ಪಾರ್ಲೆಯ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಿರ್ಮಿಸಲಾದ ವಿಶೇಷ ಸೆಟ್‌ನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ನಡುವಿನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ವಿಶೇಷವೆಂದರೆ, ಈ ಹಂತದಲ್ಲಿ ದೀಪಿಕಾ ಪಡುಕೋಣೆ ಅವರು ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಿದ್ದಾರೆ.