ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಂಗೆ ಹಿಂದಿ ಮಾತನಾಡಲು ಬರೋದಿಲ್ಲ..ʼ ಎಂದಿದ್ದಕ್ಕೆ ನಟಿ ಸಾಯಿ ಪಲ್ಲವಿಗೆ ಹಿಗ್ಗಾಮುಗ್ಗಾ ಟ್ರೋಲ್; ʻರಾಮಾಯಣʼ ಚಿತ್ರದಲ್ಲಿ ನಟಿಸಲು ಭಾಷೆ ಮುಖ್ಯವೇ?

ನಟಿ ಸಾಯಿ ಪಲ್ಲವಿ ಅವರು ತಮ್ಮ ಮೊದಲ ಹಿಂದಿ ಸಿನಿಮಾ ʻಏಕ್ ದಿನ್ʼ ಪ್ರಚಾರದ ವೇಳೆ "ನನಗೆ ಬೇಸಿಕ್ ಹಿಂದಿ ಕೂಡ ಬರುವುದಿಲ್ಲ" ಎಂದು ಹೇಳಿದ್ದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ʻರಾಮಾಯಣʼ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರ ಮಾಡುತ್ತಿರುವ ನಟಿಗೆ ಹಿಂದಿ ಬರುವುದಿಲ್ಲ ಎನ್ನುವುದು ಉತ್ತರ ಭಾರತದ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

‌ʻಹಿಂದಿ ಬರಲ್ಲʼ ಎಂದಿದ್ದಕ್ಕೆ ಸಾಯಿ ಪಲ್ಲವಿಯನ್ನ ಟ್ರೋಲ್‌ ಮಾಡೋದು ಸರಿಯೇ?

-

Avinash GR
Avinash GR Apr 28, 2026 6:26 PM

ನಟಿ ಸಾಯಿ ಪಲ್ಲವಿ ಅವರು ʻಏಕ್‌ ದಿನ್‌ʼ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ. ಮೇ 1ರಂದು ಈ ಸಿನಿಮಾವು ತೆರೆಗೆ ಬರುತ್ತಿದೆ. ಈಚೆಗೆ ʻಏಕ್‌ ದಿನ್‌ʼ ಚಿತ್ರದ ಇವೆಂಟ್‌ನಲ್ಲಿ ಮಾತನಾಡುವಾಗ ಸಾಯಿ ಪಲ್ಲವಿ ಅವರು, "ನನಗೆ ಅಷ್ಟೊಂದು ಚೆನ್ನಾಗಿ ಹಿಂದಿ ಮಾತಾಡಲು ಬರಲ್ಲ, ನನಗೆ ಬೇಸಿಕ್‌ ಹಿಂದಿ ಕೂಡ ಬರಲ್ಲ" ಎಂದು ಹೇಳಿದ್ದರು. ಅದೇ ಈಗ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಟ್ರೋಲ್‌ ಮಾಡಲಾಗುತ್ತಿದೆ.

ಹಿಂದಿ ಗೊತ್ತಿಲ್ಲ, ಆದರೂ ಸೀತೆ ಪಾತ್ರ ಮಾಡ್ತಾರೆ

ನಟಿ ಸಾಯಿ ಪಲ್ಲವಿ ಅವರು ಹಿಂದಿ ಮಾತನಾಡಲು ತಡವರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಒಂದಷ್ಟು ಮಂದಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡು, "ಸಾಯಿ ಪಲ್ಲವಿಯವರನ್ನು ನೋಡಿ, ಇವರಿಗೆ ಕನಿಷ್ಠ ಹಿಂದಿ ಪದಗಳೂ ಗೊತ್ತಿಲ್ಲ. ಆದರೆ ಇವರು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಸೀತಾ ಮಾತೆಯ ಪಾತ್ರ ಮಾಡುತ್ತಿದ್ದಾರೆ" ಎಂದು ವ್ಯಂಗ್ಯ ಮಾಡಿದ್ದಾರೆ.

Ek Din Movie: ʻದೇಶದಲ್ಲೇ ಅತ್ಯುತ್ತಮ ನಟಿʼ; ಸಾಯಿ ಪಲ್ಲವಿ ಅಭಿನಯ ಕಂಡು ಭಾವುಕರಾಗಿ ಕಣ್ಣೀರಿಟ್ಟ ಆಮಿರ್ ಖಾನ್

ಮತ್ತೊಬ್ಬರು, "ಸರಿಯಾಗಿ ಹಿಂದಿ ಮಾತನಾಡಲು ಬಾರದ ಸಾಯಿ ಪಲ್ಲವಿಯವರನ್ನು ಸೀತಾ ಮಾತೆಯ ಪಾತ್ರಕ್ಕೆ ಆಯ್ಕೆ ಮಾಡುವಾಗ ನಿತೇಶ್ ತಿವಾರಿ ಏನು ಯೋಚಿಸುತ್ತಿದ್ದರು? ಇದು ಅತ್ಯಂತ ಕೆಟ್ಟ ಆಯ್ಕೆ" ಎಂದು ಪ್ರಶ್ನಿಸಿದ್ದಾರೆ. "ರಾಮಾಯಣದ ಹಿಂದಿ ಆವೃತ್ತಿಯಲ್ಲಿ ಅವರ ಧ್ವನಿಗೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆಯೇ? ನನಗಂತೂ ಈ ಆಯ್ಕೆ ಇಷ್ಟವಾಗಿಲ್ಲ" ಎಂದು ಒಬ್ಬರು ಹೇಳಿದರೆ, "ಭಾಷೆಯೇ ತಿಳಿಯದ ನಟಿಯನ್ನು ಆ ಚಿತ್ರಕ್ಕೆ ಆಯ್ಕೆ ಮಾಡಿದ್ದೇಕೆ" ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರುಕ್ಮಿಣಿ ವಸಂತ್‌ ನಟಿಸ್ತಾರಾ? ಸಾಯಿ ಪಲ್ಲವಿಗೆ ಕೋಕ್‌ ನೀಡಿತೇ ಚಿತ್ರತಂಡ?

ಸಾಯಿ ಪಲ್ಲವಿ ಪರ ಬ್ಯಾಟ್‌ ಬೀಸಿದ ಫ್ಯಾನ್ಸ್‌

ಈ ಮಧ್ಯೆ ನಟಿ ಸಾಯಿ ಪಲ್ಲವಿ ಪರವಾಗಿಯೂ ಹಲವರು ಧ್ವನಿ ಎತ್ತಿದ್ದಾರೆ. "ಇದೇನು ಮೊದಲ ಬಾರಿ ನಡೆಯುತ್ತಿದೆಯೇ? ಗಾಯಕರು ಅರ್ಥ ತಿಳಿಯದಿದ್ದರೂ ಹಲವು ಭಾಷೆಗಳಲ್ಲಿ ಹಾಡುವುದಿಲ್ಲವೇ? ನಟರು ಕೂಡ ಸಂಭಾಷಣೆಗಳನ್ನು ಕಲಿತು ನಟಿಸುತ್ತಾರೆ, ಅದಕ್ಕೆ ಆ ಭಾಷೆ ಸಂಪೂರ್ಣವಾಗಿ ತಿಳಿದಿರಬೇಕೆಂದಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ. "ಸಿನಿಮಾದಲ್ಲಿ ಅವರು ಹಿಂದಿ ಸರಿಯಾಗಿ ಮಾತನಾಡಿದರೆ ಅಷ್ಟೇ ಸಾಕು, ಸಂದರ್ಶನಗಳು ಮುಖ್ಯವಲ್ಲ" ಎಂದು ಮತ್ತೊಬ್ಬರು ಸಾಯಿ ಪಲ್ಲವಿ ಪರ ಮಾತನಾಡಿದ್ದಾರೆ.

ಸಾಯಿ ಪಲ್ಲವಿ ಕುರಿ‌ತ ಟ್ವೀಟ್



ಏಕ್‌ ದಿನ್‌ ಬಗ್ಗೆ..

2016ರಲ್ಲಿ ತೆರೆಕಂಡ ಥಾಯ್ ಭಾಷೆಯ 'ಒನ್ ಡೇ' ಸಿನಿಮಾದ ರಿಮೇಕ್ ಆಗಿರುವ ʻಏಕ್‌ ದಿನ್‌ʼ ಸಿನಿಮಾವನ್ನು ಸುನಿಲ್‌ ಪಾಂಡೆ ನಿರ್ದೇಶಿಸಿದ್ದು, ಆಮಿರ್‌ ಖಾನ್‌ ನಿರ್ಮಾಣ ಮಾಡಿದ್ದಾರೆ. ಆಮಿರ್‌ ಪುತ್ರ ಜುನೈದ್‌ ಖಾನ್‌ಗೆ ಜೋಡಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಇನ್ನು, ನಿತೇಶ್‌ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ಸಹ ಸಾಯಿ ಪಲ್ಲವಿ ಮಾಡುತ್ತಿದ್ದಾರೆ.