ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಹರಿಯಾಣದ ಎಂಜಿನಿಯರ್ ಬಂಧನ, 2 ಬಂದೂಕು ವಶ
Tiger Shroff Firing Case: ಬಾಲಿವುಡ್ ನ ಖ್ಯಾತ ನಟ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿ ಮತ್ತೋರ್ವನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಬಂಧಿತ 11 ಮಂದಿಯ ಪೈಕಿ ಏಳು ಮಂದಿ ಹರಿಯಾಣದ ಸೋನಿಪತ್ಗೆ ಸೇರಿದವರಾಗಿದ್ದಾರೆ. ಇದರೊಂದಿಗೆ ಸೂರತ್ನಲ್ಲಿ ಎರಡು ಬಂದೂಕು ಮತ್ತು ಹತ್ತು ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಗ್ರಹ ಚಿತ್ರ -
ಮುಂಬೈ: ಜುಹುವಿನಲ್ಲಿ (Juhu) ಇತ್ತೀಚೆಗೆ ಬಾಲಿವುಡ್ ನಟ ಟೈಗರ್ ಶ್ರಾಫ್ (Bollywood actor Tiger Shroff) ಮೇಲೆ ನಡೆದ ಗುಂಡಿನ ದಾಳಿಗೆ (Tiger Shroff Firing Case) ಸಂಬಂಧಿಸಿ ಇಂದೋರ್ನಲ್ಲಿ (Indore) ಹರಿಯಾಣದ (Haryana) ಎಂಜಿನಿಯರ್ (Engineer) ಒಬ್ಬನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಎಂಜಿನಿಯರಿಂಗ್ ಪದವೀಧರ ಪ್ರಾಂಜಲ್ ಥಕ್ರನ್ (22) ಬಂಧಿತ ಮತ್ತೋರ್ವ ಆರೋಪಿ. ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang)ನ ಪ್ರಮುಖ ಸಹವರ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಳೆದ ಅಕ್ಟೋಬರ್ 18ರಂದು ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಪ್ರಾಂಜಲ್ ಥಕ್ರನ್ನ ಬಂಧನವು ತನಿಖೆಯಲ್ಲಿ ಒಂದು ಬಹುದೊಡ್ಡ ಪ್ರಗತಿಯಾಗಿದೆ. ಮುಂಬೈ ಅಪರಾಧ ವಿಭಾಗ ಮತ್ತು ಇಂದೋರ್ ಸ್ಥಳೀಯ ಅಪರಾಧ ವಿಭಾಗವು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿತ್ತು.
ರಾಜಸ್ಥಾನ ಪೊಲೀಸ್ ಇಲಾಖೆಯ ಮೇಲೆ ಸೈಬರ್ ದಾಳಿ? 86.3 ಲಕ್ಷ ಇಮೇಲ್ಗಳು ಹ್ಯಾಕರ್ಗಳ ವಶಕ್ಕೆ!
ಹರಿಯಾಣದ ಸೋನಿಪತ್ ಜಿಲ್ಲೆಯ ನಿವಾಸಿಯಾಗಿರುವ ಥಕ್ರನ್, ತನ್ನ ಪಾರ್ಶ್ವವಾಯುವಿಗೆ ತುತ್ತಾದ ಸಹೋದರನಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಐದು ದಿನಗಳ ಹಿಂದೆ ಇಂದೋರ್ಗೆ ಬಂದಿದ್ದನು ಎನ್ನಲಾಗಿದೆ.
ಪ್ರಾಥಮಿಕ ತನಿಖಾ ಮಾಹಿತಿ ಪ್ರಕಾರ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿ ಪ್ರಾಂಜಲ್ ಥಕ್ರನ್ ದಾಳಿ ನಡೆಸಲು ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿರುವುದು, ಸಂವಹನಗಳನ್ನು ನಿರ್ವಹಿಸಿರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ 11 ಮಂದಿಯಲ್ಲಿ ಏಳು ಮಂದಿ ಹರಿಯಾಣದ ಸೋನಿಪತ್ಗೆ ಸೇರಿದವರಾಗಿದ್ದಾರೆ. ಹೀಗಾಗಿ ಇಲ್ಲಿ ಶಸ್ತ್ರಾಸ್ತ್ರಗಳ ಪೂರೈಕೆ, ಕಣ್ಗಾವಲು ಮಾಹಿತಿ ಮತ್ತು ದಾಳಿಗಳಿಗೆ ಅಗತ್ಯವಾದ ತಾಂತ್ರಿಕ ಬೆಂಬಲ ಒದಗಿಸುವ ಒಂದು ವ್ಯವಸ್ಥಿತ ಅಪರಾಧ ಜಾಲ ಸಕ್ರಿಯವಾಗಿರುವುದನ್ನು ಸೂಚಿಸಿದೆ.
ಎಲ್ಲ ಟೀಕೆಗಳು ಬೆದರಿಕೆಯಲ್ಲ: ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಗೈಡ್ಲೈನ್ ಸಿದ್ಧಪಡಿಸಿದ ಕರ್ನಾಟಕ ಹೈಕೋರ್ಟ್
ಇದರೊಂದಿಗೆ ಗುಜರಾತ್ನ ಸೂರತ್ನಲ್ಲಿ ಮುಂಬೈ ಅಪರಾಧ ವಿಭಾಗವು ನಡೆಸಿದ ದಾಳಿಯಲ್ಲಿ ಎರಡು ಬಂದೂಕುಗಳು ಮತ್ತು ಹತ್ತು ಜೀವಂತ ಗುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಟೈಗರ್ ಶ್ರಾಫ್ ಮೇಲಿನ ದಾಳಿಗೂ ಇದಕ್ಕೂ ಸಂಬಂಧವಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನು ವಿಧಿವಿಜ್ಞಾನ ಮತ್ತು ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.