#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Trivikram BBK 11: ಲವ್ ಇತ್ತು-ಬ್ರೇಕಪ್ ಆಯ್ತು-ಈಗ ಸಿಂಗಲ್: ಪ್ರೀತಿಯ ಗುಟ್ಟು ರಟ್ಟು ಮಾಡಿದ ತ್ರಿವಿಕ್ರಮ್

ಈಗಲೂ ಅನೇಕರು ತ್ರಿವಿಕ್ರಮ್ ಅವರ ಗರ್ಲ್ ಫ್ರೆಂಡ್ ಭವ್ಯಾ ಗೌಡ ಅಂತಲೇ ಅಂದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಸ್ವತಃ ತ್ರಿವಿಕ್ರಮ್ ಅವರೇ ನಾವಿಬ್ಬರು ಉತ್ತಮ ಸ್ನೇಹಿತರು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇದೀಗ ತ್ರಿವಿಕ್ರಮ್ ಅವರು ತಮ್ಮ ಹಳೇಯ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

ಲವ್ ಇತ್ತು-ಬ್ರೇಕಪ್ ಆಯ್ತು-ಈಗ ಸಿಂಗಲ್: ತ್ರಿವಿಕ್ರಮ್

Trivikram

Profile Vinay Bhat Feb 12, 2025 6:39 AM

ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಅಂತಲೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಸೀಸನ್ 11ರ ಫಸ್ಟ್‌ ರನ್ನರ್‌ ರಪ್ ನಟ ತ್ರಿವಿಕ್ರಮ್​ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಹುಟ್ಟುಕೊಂಡಿದ್ದಾರೆ. ಆದರೆ, ಹೆಚ್ಚಿನವರಿಗೆ ಇವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಿಲ್ಲ. ಈಗಲೂ ಅನೇಕರು ಇವರ ಗರ್ಲ್ ಫ್ರೆಂಡ್ ಭವ್ಯಾ ಗೌಡ ಅಂತಲೇ ಅಂದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಸ್ವತಃ ತ್ರಿವಿಕ್ರಮ್ ಅವರೇ ನಾವಿಬ್ಬರು ಉತ್ತಮ ಸ್ನೇಹಿತರು ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಇದೀಗ ತ್ರಿವಿಕ್ರಮ್ ಅವರು ತಮ್ಮ ಹಳೇಯ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೂಲಕ ಹೊಸ ಬದುಕು ಶುರು ಮಾಡಿರುವ ತ್ರಿವಿಕ್ರಮ್ ತಮ್ಮ ಲವ್ & ಬ್ರೇಕಪ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ರ್ಯಾಪಿಡ್ ರಶ್ಮಿ ಅವರಿಗೆ ನೀಡಿರುವ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿರುವ ತ್ರಿವಿಕ್ರಮ್ ನನ್ನ ತಂದೆ ತೀರಿಕೊಂಡು ಆರು ತಿಂಗಳು ಆಗಿತ್ತು ಆಗ ನನ್ನ ಬ್ರೇಕಪ್ ಆಯಿತು ಎಂದು ಹೇಳಿದ್ದಾರೆ. ಜೊತೆಗೆ ಇವರಿಗೆ ಎರಡು ಲವ್ ಇತ್ತಂತೆ.

‘‘ನನ್ನ ತಂದೆ ತೀರಿಕೊಂಡು ಆರು ತಿಂಗಳಿಗೆ ಬ್ರೇಕಪ್‌ ಆಯ್ತು. ಆ ಹುಡುಗಿ ಮನೆಯವರು ಸೆಟಲ್‌ ಆಗಿದ್ದರು, ನಾನು ಇನ್ನೂ ಸ್ಟ್ರಗಲ್‌ ಮಾಡುತ್ತಿದ್ದೆ. ಆ ಹುಡುಗಿ ಕೆಲಸ ಮಾಡುತ್ತಿದ್ದಳು, ನಾನು ಸೆಟಲ್‌ ಆಗಬೇಕು ಅಂತ ಅವಳು ಬಯಸುತ್ತಿರಲಿಲ್ಲ. ಆದರೆ ಆ ಹುಡುಗಿ ತಂದೆ ಕಡೆಯಿಂದ ಸ್ವಲ್ಪ ಒತ್ತಡ ಇತ್ತು. ಇಬ್ಬರೂ ಪರಸ್ಪರ ಮಾತನಾಡಿಕೊಂಡು ದೂರ ಆದೆವು. ಆರ್ಥಿಕ ವಿಷಯ ನಮ್ಮಿಬ್ಬರ ಮಧ್ಯೆ ಅಂತರ ಸೃಷ್ಟಿ ಮಾಡತ್ತೆ ಅಂತ ನಮಗೆ ಅನಿಸ್ತು. ನಾನು ಈಗ ಸಿಂಗಲ್‌ ಆಗಿದ್ದೀನಿ. ಈಗ ಆ ಹುಡುಗಿಗೆ ಬೇರೆ ಮದುವೆಯಾಗಿದೆ, ಆ ಹುಡುಗಿ ಇನ್ನೂ ಟಚ್‌ ಅಲ್ಲಿದ್ದಾಳೆ, ಅವಳ ಗಂಡ ಕೂಡ ಟಚ್‌ನಲ್ಲಿದ್ದಾರೆ, ಸಿಗ್ತಾ ಇರ್ತೀವಿ’’ ಎಂದು ತ್ರಿವಿಕ್ರಮ್‌ ಹೇಳಿದ್ದಾರೆ.



ಬಿಗ್ ಬಾಸ್‌ ಕಾರ್ಯಕ್ರಮದ ಅನುಭವ ಅಲ್ಲಿ ಕಲಿತ ಪಾಠಗಳ ಬಗ್ಗೆ ಮಾತನಾಡಿರುವ ತ್ರಿವಿಕ್ರಮ್ ಕೊರೊನಾದ ದಿನಗಳಲ್ಲಿ ತಾವು ಅನುಭವಿಸಿದ ಕಷ್ಟದ ಕಥೆಯನ್ನು ಕೂಡ ಹಂಚಿಕೊಂಡಿದ್ದಾರೆ. ಅವಕಾಶಕ್ಕಾಗಿ 2 ವರ್ಷ 8 ಪ್ಯಾಕ್‌ನಲ್ಲಿ ತಿರುಗಾಡಿರುವುದನ್ನು ಕೂಡ ನೆನಪು ಮಾಡಿಕೊಂಡಿರುವ ತ್ರಿವಿಕ್ರಮ್ ಕೊನೆ ಕೊನೆಗೆ ಬೇಸತ್ತು ಅಯ್ಯೋ ನನ್ನ ಬದುಕು, ಈ ತರ ನಾನು ಬದುಕಲಾರೆ, ನಾನು ಇರುವಂತೆ ಒಪ್ಪಿಕೊಂಡು ಕರೆದು ಅವಕಾಶ ಕೊಟ್ಟರೆ ಕೊಡಲಿ ಎಂದು ವರ್ಕೌಟ್ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿದ್ದಾರೆ.

Karthik Mahesh: ಬಿಗ್ ಬಾಸ್​ನಿಂದ ಬಂದ ಹಣದಿಂದ ಹೊಸ ಬ್ಯುಸಿನೆಸ್ ಶುರು ಮಾಡಿದ ಕಾರ್ತಿಕ್‌ ಮಹೇಶ್‌