ಬಿಗ್ ಬಾಸ್ ಸೀಸನ್ 12 (BBK 12) ಸೋಮವಾರದ (ನವೆಂಬರ್ 3) ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳೆಯುವ ಟಾಸ್ಕ್ ನೀಡಲಾಗಿತ್ತು. ಇನ್ನು ಈ ಟಾಸ್ಕ್‌ನಲ್ಲಿ ಎಲ್ಲ ಸ್ಪರ್ಧಿಗಳು ಖಡಕ್ ಆಗಿಯೇ ಕಾರಣವನ್ನು ನೀಡಿದ್ದರು. ಹೆಚ್ಚಾಗಿ ರಿಷಾ ಅವರು ಮಸಿ ಬಳಿಸಿಕೊಂಡವರು. ಅದರಲ್ಲೂ ಅಶ್ವಿನಿ ಅವರು ಸಖತ್ ಖಾರವಾಗಿಯೇ ಉತ್ತರ ನೀಡಿದ್ದಾರೆ. ಇದಾದ ಬಳಿಕ ಸೂಟ್‌ಕೇಸ್ ಜೊತೆ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್‌ಬಾಸ್ ಸೂಚಿಸುತ್ತಾರೆ. ಎಲ್ಲಾ ಸ್ಪರ್ಧಿಗಳು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಗಾರ್ಡನ್ ಏರಿಯಾಗೆ ಬರುತ್ತಾರೆ.
ಮಿಡ್ ವೀಕ್ ಎಲಿಮಿನೇಟ್?
ನಂತರ ಅಶ್ವಿನಿ ಅವರ ಹೆಸರನ್ನು ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಅಶ್ವಿನಿ ಅವರ ಹೆಸರು ಹೇಳುತ್ತಿದ್ದಂತೆ ಬಿಗ್ ಬಾಸ್ ಮುಖ್ಯದ್ವಾರ ತೆರೆದುಕೊಳ್ಳುತ್ತದೆ. ಇನ್ನು ಅಶ್ವಿನಿ ಗೌಡ ಮಿಡ್ ವೀಕ್ ಎಲಿಮಿನೇಟ್ ಆಗಿದ್ದಾರಾ? ಅಥವಾ ಸೀಕ್ರೆಟ್ ರೂಮ್‌ನಲ್ಲಿ ಇದ್ದಾರಾ ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ. ಇನ್ನು ರಕ್ಷಿತಾ ಅವರನ್ನು ಮೊದಲ ವಾರ ಒಂದು ರೂಮ್‌ನಲ್ಲಿ ಇರಿಸಲಾಗಿತ್ತು. ಅದೇ ರೀತಿ ಅಶ್ವಿನಿ ಗೌಡ ಅವರನ್ನೂ ಮಾಡಿರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಶೆಟ್ಟಿ ಠಕ್ಕರ್ ನೀಡುತ್ತಿದ್ದಾರೆ. ನಾಮಿನೇಷನ್ ವೇಳೆ ಕೂಡ ಅವರಿಬ್ಬರು ಪರಸ್ಪರ ಕಿತ್ತಾಡುತ್ತಿದ್ದಾರೆ. ಅಶ್ವಿನಿ ಗೌಡ ಅವರ ಮಾತಿಗೆ ರಕ್ಷಿತಾ ಶೆಟ್ಟಿ ಅವರು ತಿರುಗೇಟು ನೀಡಿದರು. ‘ಮುಗ್ಧರಿಗೆ ನಾನು ಮುಗ್ಧೆ. ಆದರೆ ರಾಕ್ಷಸಿಗೆ ನಾನು ರಾಕ್ಷಸಿಯೇ ಆಗುತ್ತೇನೆ. ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಹೋಗುತ್ತೇನೆ. ಇದು ನಿಮಗೆ ನನ್ನ ಮೊದಲ ಚಾಲೆಂಜ್’ ಎಂದು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ.
ಇದನ್ನೂ ಓದಿ: BBK 12: ಅಶ್ವಿನಿ ಗೌಡ ಮುಖಕ್ಕೆ ಮಸಿ ಬಳಿದು ರಕ್ಷಿತಾ ಪರ ಮಾತನಾಡಿದ ಗಿಲ್ಲಿ- ಧನುಷ್!
ರಕ್ಷಿತಾಗೆ ಗಿಲ್ಲಿ ಸಾಥ್
ಕಳೆದ ವಾರ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಏಕವಚನದಲ್ಲಿ ಜಗಳ ನಡೆಯಿತು. ಈ ಮಧ್ಯೆ ಕಾವ್ಯ ಶೈವ ಪರವಾಗಿ ರಕ್ಷಿತಾ ಶೆಟ್ಟಿ ಮಧ್ಯೆ ಬಂದರು. ಆದರೀಗ ಚಪ್ಪಲಿ ವಿಚಾರದ ಬಗ್ಗೆ ರಕ್ಷಿತಾ ಪರ ಬ್ಯಾಟ್ ಬೀಸಿದ್ದಾರೆ ಧನುಷ್ ಹಾಗೂ ಗಿಲ್ಲಿ. ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ಅಶ್ವಿನಿ ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರು ಎಂದು ಗಿಲ್ಲಿ ಹೇಳಿದರು.
ಇದನ್ನೂ ಓದಿ: BBK 12: ಮನೆ ನೆಮ್ಮದಿಯನ್ನ ಹಾಳು ಮಾಡಿದ್ರಾ ರಿಷಾ? ಮುಖಕ್ಕೆ ಮಸಿ ಬಳಿದು ಗಿಲ್ಲಿ ಹೇಳಿದ್ದೇನು?
ಇನ್ನು ಗಿಲ್ಲಿ ಅವರು ಮಾತನಾಡಿ,ʻ ಅಶ್ವಿನಿ, ರಕ್ಷಿತಾ ಹಾಗೂ ಕಾವ್ಯ ಜಗಳ ಮಾಡುವಾಗ, ಜಗಳ ಆಗಿರೋ ವಿಚಾರ ಗೊತ್ತು. ಅವಳು ಯಾವ ಪರ್‌ಸ್ಪೆಕ್ಟಿವ್ ಅಲ್ಲಿ ಹೇಳಿದ್ದಳು ಅನ್ನೋದು ಗೊತ್ತು. ಆದರೆ ವೀಕೆಂಡ್‌ನಲ್ಲಿ ನೀವು ಅದನ್ನ ಯಾವ ರೀತಿ ಮ್ಯಾನುಪಲೇಟ್ ಮಾಡಿ ಹೇಳಿದ್ರಿ ಅನ್ನೋದು ಗೊತ್ತು. ಇನ್ನು ರಕ್ಷಿತಾ ಅವರು ಕಾಲು ತೋರಿಸಿದ್ದು, ವೋಟ್ ನನಗೆ ಕೊಟ್ಟರೆ ಕಾಲಲ್ಲಿ ಹಾಕಿ ಅದನ್ನ ತುಳಿಯುತ್ತೀನಿ ಅಂತ. ಆದರೆ ನೀವು ಅಂದಿದ್ದು ಕಲಾವಿದರಿಗೆ ಕಾಲು ತೋರಿಸಿದ್ರು ಅನ್ನೋ ಥರ ಹೇಳಿದ್ರಿʼ ಎಂದು ಮಸಿ ಬಳಿದು ಕಾರಣ ಕೊಟ್ಟರು.