ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salaga: 'ಸೂರಿ ಅಣ್ಣ' ಸಿನಿಮಾದಲ್ಲಿ ನಟಿಸಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ; ಟೈಟಲ್‌ ಆಯ್ತು ʻಸಲಗʼ ಚಿತ್ರದ ಸೂಪರ್‌ ಹಿಟ್‌ ಹಾಡು!

Suri Anna Movie: ʻಸಲಗʼ ಸಿನಿಮಾದ ʻಸೂರಿ ಅಣ್ಣʼ ಹಾಡಿನಿಂದ ಫೇಮಸ್‌ ಆದ ದಿನೇಶ್ (ಸೂರಿ ಅಣ್ಣ) ಅವರು ಅದೇ ಹೆಸರಿನ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಖ್ಯಾತಿಯ ಕಾಕ್ರೋಚ್‌ ಸುಧಿ ನಟಿಸಿದ್ದಾರೆ.

'ಸೂರಿ ಅಣ್ಣ' ಸಿನಿಮಾದಲ್ಲಿ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ!

-

Avinash GR
Avinash GR Dec 9, 2025 7:36 PM

ʻದುನಿಯಾʼ ವಿಜಯ್‌ ಅಭಿನಯದ ʻಸಲಗʼ ಸಿನಿಮಾದಲ್ಲಿ ಸೂರಿ ಅಣ್ಣ ಸಾಂಗ್‌ ಸಖತ್‌ ವೈರಲ್‌ ಆಗಿತ್ತು. ಬರೀ ಹಾಡಿನಲ್ಲಿ ಸೂರಿ ಅಣ್ಣನಾಗಿ ಮಿಂಚಿದ್ದ ದಿನೇಶ್, ಆನಂತರ ಹೋದಲ್ಲಿ ಬಂದಲ್ಲಿ ಸೂರಿ ಅಣ್ಣ ಎಂದೇ ಫೇಮಸ್‌ ಆಗಿದ್ದರು. ಅಚ್ಚರಿ ಎಂದರೆ, ಅದೇ ʻಸೂರಿ ಅಣ್ಣ ʼ ಎಂಬುದನ್ನೇ ಟೈಟಲ್‌ ಮಾಡಿಕೊಂಡು ಹೊಸ ಸಿನಿಮಾ ಮಾಡಿದ್ದಾರೆ ದಿನೇಶ್.‌ ಈ ಚಿತ್ರಕ್ಕೆ ಅವರೇ ನಿರ್ದೇಶಕ ಮತ್ತು ನಿರ್ಮಾಪಕರು ಅನ್ನೋದು ವಿಶೇಷ.

ಈ ಹಿಂದೆ ʻಮಾರಿಗುಡ್ಡದ ಗಡ್ಡಧಾರಿಗಳುʼ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಸೂರಿ ಅಣ್ಣ (ದಿನೇಶ್) ಈಗ ʻಸೂರಿ ಅಣ್ಣʼ ಸಿನಿಮಾ ಮಾಡಿದ್ದಾರೆ. ಇಲ್ಲಿ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ʻನೀ ನನ್ನ ದೇವತೆʼ ಎಂಬ ಸಾಹಿತ್ಯ ಒಳಗೊಂಡ ಈ ಗೀತೆಗೆ ಕೆ ಎಂ ಇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಲಹರಿ ವೇಲು ಅವರ ಲಹರಿ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

ʻಸೂರಿ ಅಣ್ಣʼ ಬಗ್ಗೆ ದಿನೇಶ್‌ ಹೇಳಿದ್ದೇನು?

"ನಾನು ಜೂನಿಯರ್ ಕಲಾವಿದನಾಗಿ ರಾಣಾ, ದೇವ್ರು, ದ್ರೋಣ, ಕೋಟಿಗೊಬ್ಬ 3, ಚಕ್ರವರ್ತಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದೇನೆ. ಈಗಾಗಲೇ ಚಿತ್ರದ ಟೀಸರ್ ಮತ್ತು ಮಾದಪ್ಪ ಹಾಡು ಚೆನ್ನಾಗಿ ಹಿಟ್‌ ಆಗಿದೆ. ಇದೀಗ ʻನೀ ನನ್ನ ದೇವತೆʼ ಎಂಬ ಲವ್ ಸಾಂಗ್ ಅನ್ನು ರಿಲೀಸ್ ಮಾಡಿದ್ದೇವೆ. ಈ ಸಿನಿಮಾಗಾಗಿ ನಾನು ಸಿಕ್ಸ್ ಪ್ಯಾಕ್ ಮಾಡಿದ್ದೇನೆ" ಎಂದಿದ್ದಾರೆ ದಿನೇಶ್‌.

ಭೂಗತ ಲೋಕದ ಗ್ಯಾಂಗ್ ಸ್ಟರ್‌ಗಳ ನಟನೆ

"ಒಬ್ಬ ಅಮಾಯಕ ತನ್ನ ಇಡೀ ಫ್ಯಾಮಿಲಿಯನ್ನು ಕಳೆದುಕೊಂಡಾಗ, ಆತ ಯಾವ ಮಟ್ಟಕ್ಜೆ ಹೋಗುತ್ತಾನೆ ಅಂತ ಈ ಚಿತ್ರದಲ್ಲಿ ಹೇಳಿದ್ದೇವೆ. ಐದು ನಿಮಿಷದ ಸುಖಕ್ಕೋಸ್ಕರ ಏನೆಲ್ಲಾ ಮಾಡ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಜೀವನದಲ್ಲಿ ದುಡುಕಬೇಡಿ, ಯಾರಿಗೂ ತಿರುಗಿ ಬೀಳಬೇಡಿ, ನಮ್ಮನ್ನೇ ನಂಬಿಕೊಂಡು ಒಂದು ಕುಟುಂಬ ಇರುತ್ತದೆ ಎಂಬ ಸಂದೇಶ ಹೇಳಿದ್ದೇವೆ. ನಾಯಕಿ ಸಂಭ್ರಮಶ್ರೀ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಸೆನ್ಸಾರ್ ಆಗಿದೆ. ರಿಯಲ್ ಭೂಗತ ಲೋಕದ ಗ್ಯಾಂಗ್ ಸ್ಟರ್‌ಗಳ ಮೂಲಕ ನಮ್ಮ ಚಿತ್ರದಲ್ಲಿ ಸಂದೇಶ ಹೇಳಿಸಿದ್ದೇನೆ. ಈ ಚಿತ್ರದಲ್ಲಿ ನಿಜವಾದ ಭೂಗತ ಜಗತ್ತಿನ ಗ್ಯಾಂಗ್ ಸ್ಟರ್‌ಗಳು ಅಭಿನಯಿಸಿರುವುದು ವಿಶೇಷ" ಎಂದು ದಿನೇಶ್‌ ಹೇಳುತ್ತಾರೆ.

ʻಸೂರಿ ಅಣ್ಣʼ ಸಿನಿಮಾದಲ್ಲಿ ಕಾಕ್ರೋಚ್‌ ಸುಧಿ ನಟನೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಯಾಗಿದ್ದ ಕಾಕ್ರೋಚ್‌ ಸುಧಿ ಅವರು ಕೂಡ ʻಸೂರಿ ಅಣ್ಣʼ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಕೂಡ ʻಸಲಗʼ ಚಿತ್ರದಿಂದ ಸಾಕಷ್ಟು ಫೇಮಸ್‌ ಆಗಿದ್ದರು. "ಈ ಚಿತ್ರಕ್ಕಾಗಿ ದಿನೇಶ್‌ ತುಂಬಾ ಕಷ್ಟಪಟ್ಟಿದ್ದಾರೆ. ಸಲಗ ಚಿತ್ರದಿಂದ ನಮ್ಮಿಬ್ಬರ ಸ್ನೇಹ ಬೆಳೆದಿದೆ. ಈ ಸಿನಿಮಾದಲ್ಲಿ ನಾನು ಜಪಾನ್ ಎಂಬ ಪಾತ್ರವನ್ನು ಮಾಡಿದ್ದೇನೆ" ಎನ್ನುತ್ತಾರೆ ಕಾಕ್ರೋಚ್‌ ಸುಧಿ. ಈ ಚಿತ್ರವು ಜನವರಿ 24ರಂದು ತೆರೆಗೆ ಬರಲಿದೆ. ಜಾಲಿ ಜಾಕ್‌, ಜಾನಿ ಮಾಸ್ಟರ್, ಬೇಬಿ ಮರೀಷಾ, ಪ್ರಸಾದ್ ಮುಂತಾದವರು ನಟಿಸಿದ್ದಾರೆ.