BBK 12: ಸುದೀಪ್ ತೀರ್ಮಾನವೇ ಸರಿ ಇಲ್ವಾ? ಕಿಚ್ಚನ ಪಂಚಾಯ್ತಿ ಬಗ್ಗೆ ಕೇಳಿ ಬರ್ತಿದೆ ಅಪಸ್ವರ
ಶನಿವಾರ ಬಂತು ಅಂದರೆ ಸಾಕು ಕಿಚ್ಚನ ಪಂಚಾಯ್ತಿಗೆ (Bigg Boss Kannada 12) ಕಾದು ಕುಳಿತಿರುತ್ತಾರೆ ವೀಕ್ಷಕರು. ಅದರಲ್ಲೂ ಕಿಚ್ಚನ ಕ್ಲಾಸ್‌ಗೆ ಹಲವರು ಕಾದು ಕುಳಿತಿರುತ್ತಾರೆ. ಆದರೀಗ ಕಿಚ್ಚನ ಪಂಚಾಯ್ತಿಯೇ ನೋಡುಗರಿಗೆ ಬೇಸರ ತರಿಸಿದೆ. ಕಿಚ್ಚನ ಪಂಚಾಯಿತಿ ನೋಡಿ ಸ್ವಲ್ಪ ನಿರಾಶೆ ಆಯ್ತು ಅಂತ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತಾ ಇದ್ದಾರೆ ವೀಕ್ಷಕರು. ಹಾಗಾದ್ರೆ ನೋಡುಗರ ಅಭಿಪ್ರಾಯವಾದ್ರೂ ಏನು? ಕಿಚ್ಚ ತಪ್ಪಿದ್ದೆಲ್ಲಿ? ಜನ ನಿರೀಕ್ಷೆ ಮಾಡಿದ್ದಾದರೂ ಏನು?
bigg boss kannada -
Yashaswi Devadiga
Nov 2, 2025 11:18 AM
ಶನಿವಾರ, ಭಾನುವಾರ ಬಂತು ಅಂದರೆ ಸಾಕು ಕಿಚ್ಚನ ಪಂಚಾಯ್ತಿಗೆ (Bigg Boss Kannada 12) ಕಾದು ಕುಳಿತಿರುತ್ತಾರೆ ವೀಕ್ಷಕರು. ನಿನ್ನೆಯ ಕಿಚ್ಚನ ಪಂಚಾಯಿತಿ ನೋಡಿ ಸ್ವಲ್ಪ ನಿರಾಶೆ ಆಯ್ತು. ತಪ್ಪು ಮಾಡಿದವರಿಗಿಂತ ಸರಿ ಇದ್ದವರಿಗೇ ಬುದ್ದಿ ಹೇಳೋದ್ರು ಅಸಹಜ ಅನ್ನಿಸಿತು ಮಾತಾಡಲು ಕೈ ಎತ್ತಿದ್ರೇ “ಬೇಡ” ಅಂತ ತಡೆದು, ತಮ್ಮವರಿಗೆ ಮಾತ್ರ ಮಾತಾಡಲು ಅವಕಾಶ ಕೊಡೋದು ಸೂಕ್ತವಾಗಿರಲಿಲ್ಲ ಎಂದು ಜನ ಸೋಷಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಹೀಗೆ,
ನಿನ್ನೆಯ ಕಿಚ್ಚನ ಪಂಚಾಯಿತಿ ನೋಡಿ ಸ್ವಲ್ಪ ನಿರಾಶೆ ಆಯ್ತು.ತಪ್ಪು ಮಾಡಿದವರಿಗಿಂತ ಸರಿ ಇದ್ದವರಿಗೇ ಬುದ್ದಿ ಹೇಳೋದ್ರು ಅಸಹಜ ಅನ್ನಿಸಿತು ಮಾತಾಡಲು ಕೈ ಎತ್ತಿದ್ರೇ “ಬೇಡ” ಅಂತ ತಡೆದು, ತಮ್ಮವರಿಗೆ ಮಾತ್ರ ಮಾತಾಡಲು ಅವಕಾಶ ಕೊಡೋದ್ರು ಸೂಕ್ತವಾಗಿರಲಿಲ್ಲ.
ಇದನ್ನೂ ಓದಿ: Bigg Boss Kannada 12: ಈ ವಾರ ಬಿಗ್‌ಬಾಸ್ ಮನೆಯಿಂದ ಇವರಿಬ್ಬರಲ್ಲಿ ಒಬ್ಬರಿಗೆ ಗೇಟ್‌ಪಾಸ್?
ರಘು “Stop” ಅಂದರೆ ಆಟ ಮುಗಿತು ಅಂದ್ರೆ ಅಷ್ಟೇ — ಅವರ ತೀರ್ಮಾನ ಅಂತಿಮ. ಆದರೂ ಮತ್ತೆ “game on” ಆಗಿತಂತೆ. ಕೆಟ್ಟ ವರ್ತನೆ ತೋರಿದವರನ್ನು ಸೆಫ್ ಮಾಡಿ, ಸತ್ಯ ಮಾತು ಆಡಿದವರನ್ನ ಕೆಟ್ಟವರನ್ನಾಗಿಸುವುದು ತಪ್ಪು ಅಲ್ಲವೇ? ಅವರ ತಪ್ಪುಗಳನ್ನು ಕವರ್ ಮಾಡೋದ್ರಿಂದ ಅವರ ನಿಜ ಸ್ವಭಾವ ಜನತೆಗೆ ಹೇಗೆ ಗೊತ್ತಾಗುತ್ತೆ?
ಗಿಲ್ಲಿ ಅವರ ಬೆಂಬಲ ಸಹ ಸೂಕ್ತ
ಹೆಣ್ಣಿನ ಬಟ್ಟೆ ಜಾರಿದ ಕಾರಣಕ್ಕೆ ರಘು ಆಟ ನಿಲ್ಲಿಸಿದ್ದು ಸಹಜ ಮಾನವೀಯ ಪ್ರತಿಕ್ರಿಯೆ ಗಿಲ್ಲಿ ಅವರ ಬೆಂಬಲ ಸಹ ಸೂಕ್ತವಾಗಿತ್ತು.ರಾಶಿಕ, ಅಶ್ವಿನಿ, ರಿಷಾರ ವಾರದ ಪೂರ್ತಿ ಆಟ ನೋಡಿ ನಂತರ ಕಿಚ್ಚ ಕಾಮೆಂಟ್ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು ಅನಿಸುತ್ತದೆ.
ನಾವು ಎಲ್ಲರೂ ಸುದೀಪ್ ಫ್ಯಾನ್ಸ್ ಆದರೆ ಈ ಸಲದ ಬಿಗ್ ಬಾಸ್‌ನಲ್ಲಿ ಅವರ ನಿರ್ವಹಣೆ ಹಿಂದಿನ ಸೀಸನ್‌ಗಳಷ್ಟು ಕನೆಕ್ಟ್ ಆಗಲಿಲ್ಲ. ಬಹುಶಃ ಮುಂದಿನ ಬಾರಿ ಹೊಸ ಹೋಸ್ಟ್ ಟ್ರೈ ಮಾಡಿದ್ರೆ ಹೊಸ ಫೀಲ್ ಬರಬಹುದು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು
ಇವತ್ತಿನ ಕಿಚ್ಚನ ಪಂಚಾಯತಿ ಚೆನ್ನಾಗಿರಲಿಲ್ಲ!
ತಪ್ಪು ಮಾಡಿದವರಿಗೇ ಬುದ್ದಿ ಹೇಳದೆ ಸರಿ ಇರುವವರಿಗೆ ಬುದ್ದಿ ಹೇಳಿದ್ದು ಸರಿ ಕಾಣಲಿಲ್ಲ ಕೆಲವರನ್ನು ಅಸಡ್ಡೆ ಮಾಡ್ತಾ ಇದ್ದಾರೆ. ಮಾತಾಡಲು ಕೈ ಎತ್ತಿದರೆ ಬೇಡ ಅಂತ ಹೇಳುವುದು ಅವರಿಗೆ ಬೇಕಾದವರಿಗೆ ಪ್ರಶ್ನೆ ಕೇಳುವುದು. ಕೆಲವರಿಗೆ ಮಣೆ ಹಾಕ್ತಾರೆ.ರಘು ಆಟ ನಿಲ್ಲಿಸಿ Stop ಅಂದರೆ ಮುಗಿತು ನಿಲ್ಲಿಸಬೇಕು ಅಷ್ಟೇ ಅವರ ತೀರ್ಮಾನ ಅಂತಿಮ ಅದು ಆಟ ಆಡುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ !!
ನೀವು ಸೇಫ್ ಮಾಡಿದರೆ ಅವರ ವ್ಯಕ್ತಿತ್ವ ಗೊತ್ತಾಗುವುದು ಹೇಗೆ ?? ಮತ್ತೆ ಅವರು ಮಾಡಿದ್ದೇ ಸರಿ ಅಂತ ತಿಳಕೊಳ್ಳುತ್ತಾರೆ ಅಲ್ವೇ ?? ಹೆಣ್ಣಿನ ಬಟ್ಟೆ ಜಾರಿ ಮುಜುಗರ ಆಗಿದೆ ಅಂತ ತಾನೇ ರಘು ಅವರು ಆಟ ನಿಲ್ಲಿಸಿ ಅಂದದ್ದು ಮತ್ತು ಗಿಲ್ಲಿ ಸಪೋರ್ಟ್ ಮಾಡಿದ್ದು ಇದು ಸಾಮಾನ್ಯ ಜ್ಞಾನ ಇರುವವರಿಗೆ ಗೊತ್ತಾಗುತ್ತದೆ ...ರಾಶಿಕ ಅಶ್ವಿನಿ ರಿಷಾ ಅವರು ರಕ್ಷಿತಾಳಿಗೆ ಕಾವ್ಯಾಳಿಗೆ ಹೇಳಿದ ಮಾತು ಮರೆತುಹೋಯಿತು ಇವರಿಗೆ ವಾರ ಪೂರ್ತಿ ಕಾರ್ಯಕ್ರಮ ನೋಡಿ ವಾರದ ಪಂಚಾಯಿತಿ ಮಾಡಿದರೆ ಒಳ್ಳೆಯದು ಅನಿಸುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಇದೊಂದೇ ಕಾರಣಕ್ಕೆ ಕಿಚ್ಚನ ಚಪ್ಪಾಳೆ ಮಿಸ್ ಮಾಡಿಕೊಂಡ ರಕ್ಷಿತಾ! ತಪ್ಪಾಗಿದ್ದೆಲ್ಲಿ? ಕಿಚ್ಚನ ಕ್ಲಾಸ್
ಮತ್ತೊಬ್ಬರು ಸುದೀಪ್ ಅವರ ತೀರ್ಮಾನ ಸರಿ ಇರಲಿಲ್ಲ, ಸೂರಜ್ ಟೀಮ್ ಗೆ ಮೋಸ ಮಾಡಿ ಎದುರಾಳಿ ಗೆಲ್ಲುವಂತೆ ಮಾಡಿದ. ಗಿಲ್ಲಿ ತನ್ನ ಪರವಾಗಿ ಸ್ಟಾಂಡ್ ತೆಗೆದುಕೊಂಡಿದ್ದು ತಪ್ಪಿಲ್ಲ. ನಿನ್ನೆ ಸುದೀಪ್ ಅವರ ತೀರ್ಮಾನ ಸರಿ ಇರಲಿಲ್ಲ, ಸೂರಜ್ ಟೀಮ್ ಗೆ ಮೋಸ ಮಾಡಿ ಎದುರಾಳಿ ಗೆಲ್ಲುವಂತೆ ಮಾಡಿದ, ಗಿಲ್ಲಿ ತನ್ನ ಪರವಾಗಿ ಸ್ಟಾಂಡ್ ತೆಗೆದುಕೊಂಡಿದ್ದು ತಪ್ಪಿಲ್ಲ ಎಂದು ಬರೆದುಕೊಂಡಿದ್ದಾರೆ.