ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್‌ಗೆ ಹಿಂಬಡ್ತಿ

BCCI annual contracts: ಕೊಹ್ಲಿ ಮತ್ತು ರೋಹಿತ್ ಈಗ ಏಕದಿನ ಮಾದರಿಗೆ ಮಾತ್ರ ಸೀಮಿತಗೊಂಡಿರುವುದರಿಂದ ಅವರನ್ನು ಎ ಗುಂಪಿನಲ್ಲಿ ಉಳಿಸಿಕೊಂಡಿಲ್ಲ. ಬಿ ದರ್ಜೆಯಲ್ಲಿ ಅವರ ಜತೆ ವಾಷಿಂಗ್ಟನ್ ಸುಂದರ್, ಕೆ.ಎಲ್‌.ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ: ಬಿ ದರ್ಜೆಯಲ್ಲಿ ಕೊಹ್ಲಿ, ರೋಹಿತ್

Virat Kohli and Rohit Sharma -

Abhilash BC
Abhilash BC Feb 10, 2026 8:10 AM

ಮುಂಬಯಿ, ಫೆ.10: ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಏಕದಿನ ಮತ್ತು ಟೆಸ್ಟ್ ನಾಯಕ ಶುಭಮನ್ ಗಿಲ್ ಮತ್ತು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಬಿಸಿಸಿಐ 2025-26ರ ವಾರ್ಷಿಕ ಕೇಂದ್ರೀಯ ಗುತ್ತಿಗೆ(BCCI annual contracts)ಯಲ್ಲಿ ಗ್ರೇಡ್ ಎ ಕೇಂದ್ರ ಒಪ್ಪಂದಗಳನ್ನು ನೀಡಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು‘ಬಿ’ ದರ್ಜೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಈವರೆಗೆ ಚಾಲ್ತಿಯಲ್ಲಿದ್ದ ಎ+ ದರ್ಜೆಯನ್ನು ತೆಗೆದುಹಾಕಲಾಗಿದೆ.

ಎ+ದರ್ಜೆಯಲ್ಲಿದ್ದ ಆಟಗಾರರು ವಾರ್ಷಿಕ ರಿಟೇನರ್‌ಶಿಪ್‌ ಶುಲ್ಕವಾಗಿ ₹7 ಕೋಟಿ ಪಡೆಯುತ್ತಿದ್ದರು. 30 ಆಟಗಾರರು ಮತ್ತು 21 ಆಟಗಾರ್ತಿಯರನ್ನು ಕೇಂದ್ರೀಯ ಗುತ್ತಿಗೆ ಪಟ್ಟಿಯ ಎ, ಬಿ ಮತ್ತು ಸಿ ದರ್ಜೆಯಲ್ಲಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿರುವವರು ವಾರ್ಷಿಕ ₹5 ಕೋಟಿ ಪಡೆಯಲಿದ್ದಾರೆ. ಬಿ ದರ್ಜೆಯ ಆಟಗಾರರು ₹ 3 ಕೋಟಿ ಮತ್ತು ಸಿ ದರ್ಜೆಯ ಆಟಗಾರರು ₹1 ಕೋಟಿ ಪಡೆಯಲಿದ್ದಾರೆ.

ಕೊಹ್ಲಿ ಮತ್ತು ರೋಹಿತ್ ಈಗ ಏಕದಿನ ಮಾದರಿಗೆ ಮಾತ್ರ ಸೀಮಿತಗೊಂಡಿರುವುದರಿಂದ ಅವರನ್ನು ಎ ಗುಂಪಿನಲ್ಲಿ ಉಳಿಸಿಕೊಂಡಿಲ್ಲ. ಬಿ ದರ್ಜೆಯಲ್ಲಿ ಅವರ ಜತೆ ವಾಷಿಂಗ್ಟನ್ ಸುಂದರ್, ಕೆ.ಎಲ್‌.ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ.

T20 World Cup 2026: ಭಾರತ ವಿರುದ್ದದ ಪಂದ್ಯವನ್ನು ಆಡಲು ಪಾಕಿಸ್ತಾನ ತಂಡಕ್ಕೆ ಬಾಂಗ್ಲಾದೇಶ!

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆಯಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರಾಡ್ರಿಗಸ್‌, ಸ್ಮೃತಿ ಮಂದಾನ ಮತ್ತು ದೀಪ್ತಿ ಶರ್ಮಾ ಅವರು ‘ಎ’ ಗುಂಪಿನಲ್ಲಿದ್ದಾರೆ.

ಪುರುಷರ ಬಿಸಿಸಿಐನ ಹೊಸ ಒಪ್ಪಂದ ಪಟ್ಟಿ

ಗ್ರೇಡ್ ಎ: ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.

ಗ್ರೇಡ್ ಬಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ರಿಷಬ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್.

ಗ್ರೇಡ್ ಸಿ: ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೈಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್, ಋತುರಾಜ್ ಗಾಯಕ್ವಾಡ್.