Bhagya Lakshmi Serial: ವರ್ಕ್ ಆಯ್ತು ಶ್ರೇಷ್ಠಾ-ಕನ್ನಿಕಾ ಪ್ಲ್ಯಾನ್: ಕೆಲಸ ಕಳೆದುಕೊಂಡ ಭಾಗ್ಯಾ
ಇದೆಲ್ಲ ಕನ್ನಿಕಾಳ ಕುತಂತ್ರ ಎಂದು ತಿಳಿದಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ಭಾಗ್ಯಾ ತಲುಪುತ್ತಾಳೆ. ಸಹೋದ್ಯೋಗಿಗಳು, ನೀವೇನೂ ತಪ್ಪು ಮಾಡಿಲ್ಲ.. ನಾವೇ ಕೆಲಸ ಬಿಟ್ಟು ಹೋಗುತ್ತೇವೆ ಎಂದರೂ.. ನೀವಿಷ್ಟು ಜನ ಕೆಲಸ ಕಳೆದುಕೊಳ್ಳುವ ಬದಲು ನಾನೊಬ್ಬ ಕೆಲಸ ಬಿಡುವುದು ಉತ್ತಮ ಎಂದು ಭಾಗ್ಯಾ ಹೇಳುತ್ತಾಳೆ. ತನ್ನ ಹೋಟೆಲ್ ಯುನಿಫಾರ್ಮ್ ಅನ್ನು ಮ್ಯಾನೇಜರ್ಗೆ ನೀಡಿ ಭಾಗ್ಯಾ ಹೊರಡುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ( Bhagya Lakshmi Serial ) ಕಥಾನಾಯಕಿ ಭಾಗ್ಯಾಳಿಗೆ ಮತ್ತಷ್ಟು ಕಷ್ಟದ ದಿನಗಳು ಬರಲಾರಂಭಿಸಿದೆ. ಭಾಗ್ಯಾಳನ್ನು ಕೆಲಸದಿಂದ ಕಿತ್ತೆಸೆಯಲು ಶ್ರೇಷ್ಠಾ ಹಾಗೂ ಕನ್ನಿಕಾ ಸೇರಿ ಮಾಡಿದ ಮಾಸ್ಟರ್ ಪ್ಲ್ಯಾನ್ ಕೂಡ ವರ್ಕ್ ಆಗಿದೆ. ಪರಿಣಾಮ ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ಆದರೆ, ಇಲ್ಲೂ ಭಾಗ್ಯಾ ತನ್ನವರ ಹಿತವನ್ನು ಬಯಸಿದ್ದಾಳೆ. ಇಷ್ಟುದಿನ ಭಾಗ್ಯಾಳ ಸಂಪಾದನೆಯಿಂದಲೇ ಸಾಗುತ್ತಿದ್ದ ಮನೆ ಇನ್ಮುಂದೆ ಕೆಲಸ ಕೂಡ ಇಲ್ಲದೆ ಹೇಗೆ ನಡೆಸಿಕೊಂಡು ಹೋಗುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.
ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್ ಲೈಟ್ಸ್ ಹೋಟೆಲ್‌ನ ಮಾಲೀಕರ ತಂಗಿ ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಶ್ರೇಷ್ಠಾ ಮಾಡಿದ್ದಳು. ಭಾಗ್ಯಾ ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಅವಳ ಕೆಲಸದ ಬಗ್ಗೆ ಎಲ್ಲರಲ್ಲಿ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಅವಳ ಕೆಲಸದ ಬಗ್ಗೆ ಜನರಲ್ಲಿ, ಅಲ್ಲಿನ ಸಿಬ್ಬಂದಿಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ, ನಂತರ ಕೆಲಸದಿಂದ ತೆಗೆಸುತ್ತೇನೆ. ಆಗ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ಕನ್ನಿಕಾ ಹೇಳುತ್ತಾಳೆ.
ಅದರಂತೆ ಹೋಟೆಲ್ ಮ್ಯಾನೇಜರ್ ಜೊತೆ ಪ್ಲ್ಯಾನ್ ಮಾಡಿದ ಕನ್ನಿಕಾ ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಮುಂದಾಗುತ್ತಾಳೆ. ಭಾಗ್ಯಾಳ ಮ್ಯಾನೇಜರ್ ಬಂದು, ಹೋಟೆಲ್‌ಗೆ ವಿಐಪಿಗಳು ಬರುತ್ತಿದ್ದಾರೆ, ಅವರ ಅತಿಥ್ಯದ ಜವಾಬ್ದಾರಿ ನೋಡಿಕೊಳ್ಳುವಂತೆ ಭಾಗ್ಯಾಗೆ ಸೂಚಿಸುತ್ತಾರೆ. ಅದಕ್ಕೆ ಭಾಗ್ಯಾ ಖುಷಿಯಿಂದ ಒಪ್ಪುತ್ತಾಳೆ. ಜತೆಗೆ ಅವಳ ಸಹೋದ್ಯೋಗಿಗಳು ಕೂಡ ಸಹಕಾರ ನೀಡುವುದಾಗಿ ಹೇಳುತ್ತಾರೆ. ಅದರಂತೆ ಭಾಗ್ಯಾ ರುಚಿ-ರುಚಿಯಾದ ಅಡುಗೆ ರೆಡಿ ಮಾಡಿರುತ್ತಾಳೆ.
ಆದರೆ, ಹೋಟೆಲ್‌ಗೆ ಬಂದ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯ ಪ್ರಹಸನ ಸೃಷ್ಟಿಸಿ, ಭಾಗ್ಯಾ ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾಳೆ ಕನ್ನಿಕಾ. ವಿಐಪಿ ಅತಿಥಿಯ ಕಡೆಯವರು ಎಂದು ಹೇಳಿಕೊಂಡು ಒಂದಷ್ಟು ಮಂದಿ ಹೊಟೆಲ್ ಹೊರಗಡೆ ಗಲಾಟೆ ಮಾಡುತ್ತಿದ್ದಾರೆ. ಹೋಟೆಲ್‌ನ ಅಡುಗೆಯ ಉಸ್ತುವಾರಿ ಹೊಂದಿದ್ದ ಭಾಗ್ಯಾಗೆ ಅವಳ ಸಹೋದ್ಯೋಗಿಗಳು ಬೆಂಬಲವಾಗಿ ನಿಲ್ಲುತ್ತಾರೆ. ಆದರೆ ಇಲ್ಲೂ ಕನ್ನಿಕಾ ಮತ್ತೊಂದು ಪ್ಲ್ಯಾನ್ ಮಾಡುತ್ತಾಳೆ.
ಕನ್ನಿಕಾ ಇರುವ ಚೇಂಬರ್ಗೆ ಭಾಗ್ಯಾ ಬಂದು, ನಾನು ಕೆಲಸ ಬಿಡುವುದಿಲ್ಲ, ತನಿಖೆಯಾಗಲಿ.. ಎಲ್ಲ ತನಿಖೆ ಮಾಧ್ಯಮದ ಮುಂದೆಯೇ ಆಗಲಿ ಎಂದು ಹೇಳುತ್ತಾಳೆ. ಇದರಿಂದ ಕೋಪಗೊಂಡ ಕನ್ನಿಕಾ, ನೀನು ಕೆಲಸ ಬಿಡದಿದ್ದರೆ, ನಿನ್ನ ಅಸಿಸ್ಟೆಂಟ್ಗಳನ್ನೆಲ್ಲ ಕೆಲಸದಿಂದ ನಾನು ಕಿತ್ತೆಸೆಯುತ್ತೇನೆ ಎಂದು ಹೆದರಿಸುತ್ತಾಳೆ. ಆಗ ಭಾಗ್ಯಾದ ಆತಂಕ ಶುರುವಾಗುತ್ತದೆ. ಅವರ ಕೆಲಸ ಕಿತ್ತುಕೊಳ್ಳುವುದು ಬೇಡ, ನಿನ್ನ ಸೇಡು ತೀರಲಿ, ಇವರ ಕೆಲಸವೂ ಉಳಿಯಲಿ, ನಾನೇ ಕೆಲಸ ಬಿಡುತ್ತೇನೆ ಎಂದು ಹೇಳುತ್ತಾಳೆ.
ಇದೆಲ್ಲ ಕನ್ನಿಕಾಳ ಕುತಂತ್ರ ಎಂದು ತಿಳಿದಿದ್ದರೂ ಏನೂ ಮಾಡಲಾಗದ ಸ್ಥಿತಿಗೆ ಭಾಗ್ಯಾ ತಲುಪುತ್ತಾಳೆ. ಸಹೋದ್ಯೋಗಿಗಳು, ನೀವೇನೂ ತಪ್ಪು ಮಾಡಿಲ್ಲ.. ನಾವೇ ಕೆಲಸ ಬಿಟ್ಟು ಹೋಗುತ್ತೇವೆ ಎಂದರೂ.. ನೀವಿಷ್ಟು ಜನ ಕೆಲಸ ಕಳೆದುಕೊಳ್ಳುವ ಬದಲು ನಾನೊಬ್ಬ ಕೆಲಸ ಬಿಡುವುದು ಉತ್ತಮ ಎಂದು ಭಾಗ್ಯಾ ಹೇಳುತ್ತಾಳೆ. ತನ್ನ ಹೋಟೆಲ್ ಯುನಿಫಾರ್ಮ್ ಅನ್ನು ಮ್ಯಾನೇಜರ್ಗೆ ನೀಡಿ ಭಾಗ್ಯಾ ಹೊರಡುತ್ತಾಳೆ. ಅತ್ತ ಕನ್ನಿಕಾ ತನ್ನ ಪ್ಲ್ಯಾನ್ ಕೊನೆಗೂ ವರ್ಕ್ ಆಯಿತು ಎಂದು ಖುಷಿ ಪಡುತ್ತಾಳೆ.
ಸದ್ಯ ಭಾಗ್ಯಾಳ ಮುಂದಿನ ನಡೆ ಏನು ಎಂಬುದು ರೋಚಕತೆ ಸೃಷ್ಟಿಸಿದೆ. ಯಾಕೆಂದರೆ ಮನೆಯ ಸಂಪೂರ್ಣ ಜವಾಬ್ದಾರಿ ಭಾಗ್ಯಾ ಹೆಗಲ ಮೇಲಿದೆ. ಸಂಬಳ ಬರುವುದಿಲ್ಲ ಎಂದರೆ ಮನೆಯವರು ಕೂಡ ಜೀವನ ನಡೆಸುವುದು ಕಷ್ಟ. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆಯಷ್ಟೆ ಭಾಗ್ಯಾ ತನ್ನ ಮಾವನಿಗೆ ಹೊಸ ಕಾರು ತೆಗೆಸಿ ಕೊಟ್ಟಿದ್ದಾಳೆ.. ಪ್ರತಿ ತಿಂಗಳು ಅದರ ಇಎಮ್ಐ ಕೂಡ ಕಟ್ಟಬೇಕಿದೆ. ಇದನ್ನೆಲ್ಲ ಭಾಗ್ಯಾ ಹೇಗೆ ನಿಭಾಹಿಸುತ್ತಾಳೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
BBK 11: ಚಾಮುಂಡಿ ಬೆಟ್ಟಕ್ಕೆ ತೆರಳುವಾಗ ಕಾರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ತ್ರಿವಿಕ್ರಮ್-ಭವ್ಯಾ