BBK 11: ಚಾಮುಂಡಿ ಬೆಟ್ಟಕ್ಕೆ ತೆರಳುವಾಗ ಕಾರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡ ತ್ರಿವಿಕ್ರಮ್-ಭವ್ಯಾ
ಈ ಬಾರಿಯ ಬಿಗ್ ಬಾಸ್ ಸೀಸನ್ನಲ್ಲಿ ಲವ್ ಬರ್ಡ್ಸ್ ರೀತಿ ಕಾಣಿಸಿಕೊಂಡಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಇದೀಗ ಜೊತೆಯಾಗಿ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರ ಜೊತೆ ರಜತ್ ಕಿಶನ್ ಕೂಡ ಇದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡು ಒಂದು ವಾರ ಆಗಿದೆ. ಎಲ್ಲ ಸ್ಪರ್ಧಿಗಳು ಶೋ ಮುಗಿದ ಬಳಿಕ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಮಧ್ಯೆ ಸಂದರ್ಶನ ಕೂಡ ಕೊಡುತ್ತಿದ್ದಾರೆ. ಫೈನಲಿಸ್ಟ್ಗಳಾದ ಹನುಮಂತ ಅವರನ್ನು ಬಿಟ್ಟು ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ರಜತ್ ಕಿಶನ್, ಉಗ್ರಂ ಮಂಜು ಎಲ್ಲ ಮಾಧ್ಯಮಕ್ಕೆ ಸಂದರ್ಶನ ನೀಡುತ್ತಿದ್ದಾರೆ. ಇದರ ಜೊತೆ ಕೆಲ ಸ್ಪರ್ಧಿಗಳು ಜೊತೆಯಾಗಿ ಡಿನ್ನರ್ ಪಾರ್ಟಿ ಮಾಡಿದರೆ ಇನ್ನೂ ಕೆಲವರು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡುತ್ತಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸೀಸನ್ನಲ್ಲಿ ಲವ್ ಬರ್ಡ್ಸ್ ರೀತಿ ಕಾಣಿಸಿಕೊಂಡಿದ್ದ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಇದೀಗ ಜೊತೆಯಾಗಿ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರ ಜೊತೆ ರಜತ್ ಕಿಶನ್ ಕೂಡ ಇದ್ದಾರೆ. ಬಿಬಿಕೆ 11ನ ರನ್ನರ್ ಅಪ್ ತ್ರಿವಿಕ್ರಮ್, ರಜತ್, ಭವ್ಯಾ ಹಾಗೂ ಅನುಷಾ ರೈ ನಾಲ್ಕು ಜನ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ.
ಕಾರಿನಲ್ಲಿ ಹೋಗಿವಾಗ ರಜತ್ ಕಿಶನ್ ಅವರು ವಿಡಿಯೋ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋಕ್ಕೆ ರಜತ್ ಅವರು ಚಾಮುಂಡಿಬೆಟ್ಟಕ್ಕೆ ಹೋಗುತ್ತಿರುವುದಾಗಿ ಕ್ಯಾಪ್ಶನ್ ನೀಡಿದ್ದಾರೆ. ತ್ರಿವಿಕ್ರಮ್-ಭವ್ಯಾ ಹಾಗೂ ಅನುಷಾ ಹಿಂಬದಿಯ ಸೀಟಿನಲ್ಲಿ ಜೊತೆಯಾಗಿ ಕುಳಿತುಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೆಯ ಸ್ನೇಹಿತರಾಗಿದ್ದ ಇವರು ಅದೇ ಸ್ನೇಹವನ್ನು ಮನೆಯಿಂದ ಹೊರಬಂದ ಮೇಲೂ ಮುಂದುವರೆಸಿದ್ದಾರೆ.
ಇನ್ನು ಮತ್ತೋರ್ವ ಫೈನಲಿಸ್ಟ್ ಮೋಕ್ಷಿತಾ ಪೈ ಕೂಡ ಫ್ಯಾಮಿಲಿ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಚಾಮುಂಡಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮೋಕ್ಷಿತಾ ಪೈ ಜೊತೆಗೆ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದರು. ಇದರ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಳೆದ ಶುಕ್ರವಾರ ಉಗ್ರಂ ಮಂಜು, ಗೌತಮಿ ಜಾಧವ್ ಹಾಗೂ ಗೌತಮಿ ಅವರ ಪತಿ ಅಭಿಷೇಕ್ ರೆಸ್ಟೊರೆಂಟ್ಗೆ ತೆರಳಿ ಡಿನ್ನರ್ ಪಾರ್ಟಿ ಮಾಡಿದ್ದರು. ಇದರ ಫೋಟೋವನ್ನು ಗೌತಮಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲರ ಮೊಗದಲ್ಲೂ ನಗು ಇದೆ. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದರು.
Chaithra Kundapura: ಬಿಗ್ ಬಾಸ್ನಿಂದ ಹೊರಬಂದ ಬಳಿಕವೂ ನಿಲ್ಲದ ರಜತ್-ಚೈತ್ರಾ ಕಿತ್ತಾಟ: ವಿಡಿಯೋ ನೋಡಿ