Bhagya Lakshmi Serial: ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ: ಕನ್ನಿಕಾ ಮುಂದೆ ಭಾಗ್ಯಾ ಸವಾಲು
ಬೇರೆ ದಾರಿಯಿಲ್ಲದೆ ಭಾಗ್ಯಾ ರಿಸೈನ್ ಮಾಡಬೇಕಾಗಿ ಬರುತ್ತದೆ. ಮಾಧ್ಯಮದವರಲ್ಲಿ, ಇದು ನನ್ನದೇ ತಪ್ಪು, ಆಗಿರುವ ತಪ್ಪಿಗೆ ಕ್ಷಮೆ ಕೋರಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ರಾಜೀನಾಮೆ ಪತ್ರ ಬರೆದು, ಅದಕ್ಕೆ ಸಹಿ ಮಾಡಿ, ಕನ್ನಿಕಾಗೆ ನೀಡುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಸದ್ಯದಲ್ಲೇ ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ಇಷ್ಟು ದಿನ ನೋವೆನ್ನು ನುಂಗಿ ಬದುಕುತ್ತಿದ್ದ ಭಾಗ್ಯಾಗೆ ಇದೀಗ ಮತ್ತಷ್ಟು ಕಷ್ಟಗಳು ಬಂದೊದಗಿದೆ. ಭಾಗ್ಯಾಳನ್ನು ಕೆಲಸದಿಂದ ಕಿತ್ತೆಸೆಯಲು ಶ್ರೇಷ್ಠಾ ಹಾಗೂ ಕನ್ನಿಕಾ ಸೇರಿ ಮಾಡಿದ ಮಾಸ್ಟರ್ ಪ್ಲ್ಯಾನ್ ಕೂಡ ವರ್ಕ್ ಆಗಿದೆ. ಪರಿಣಾಮ ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ಆದರೆ, ಇದರಿಂದ ಕುಗ್ಗದ ಭಾಗ್ಯಾ ನಾನು ಸೋತಿರಬಹುದು.. ಸತ್ತಿಲ್ಲ ಎಂದು ಕನ್ನಿಕಾಗೆ ಸವಾಲು ಹಾಕಿದ್ದಾಳೆ.
ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಶ್ರೇಷ್ಠಾ ಮಾಡಿದ್ದಳು. ಅದರಂತೆ ಹೋಟೆಲ್ ಮ್ಯಾನೇಜರ್ ಜೊತೆ ಪ್ಲ್ಯಾನ್ ಮಾಡಿದ ಕನ್ನಿಕಾ ಭಾಗ್ಯಾಳನ್ನು ಕೆಲಸದಿಂದ ತೆಗೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಹೋಟೆಲ್‌ಗೆ ಬಂದ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆಯ ಪ್ರಹಸನ ಸೃಷ್ಟಿಸಿ, ಭಾಗ್ಯಾ ಕೆಲಸ ಕಳೆದುಕೊಳ್ಳುವಂತೆ ಮಾಡಿದ್ದಾಳೆ ಕನ್ನಿಕಾ. ನಾನು ಕೆಲಸ ಬಿಡುವುದಿಲ್ಲ, ತನಿಖೆಯಾಗಲಿ.. ಎಲ್ಲ ತನಿಖೆ ಮಾಧ್ಯಮದ ಮುಂದೆಯೇ ಆಗಲಿ ಎಂದು ಭಾಗ್ಯಾ ಹೇಳಿದಾಗ ನೀನು ಕೆಲಸ ಬಿಡದಿದ್ದರೆ, ನಿನ್ನ ಅಸಿಸ್ಟೆಂಟ್ಗಳನ್ನೆಲ್ಲ ಕೆಲಸದಿಂದ ನಾನು ಕಿತ್ತೆಸೆಯುತ್ತೇನೆ ಎಂದು ಕನ್ನಿಕಾ ಹೆದರಿಸುತ್ತಾಳೆ.
ಆಗ ಬೇರೆ ದಾರಿಯಿಲ್ಲದೆ ಭಾಗ್ಯಾ ರಿಸೈನ್ ಮಾಡಬೇಕಾಗಿ ಬರುತ್ತದೆ. ಮಾಧ್ಯಮದವರಲ್ಲಿ, ಇದು ನನ್ನದೇ ತಪ್ಪು, ಆಗಿರುವ ತಪ್ಪಿಗೆ ಕ್ಷಮೆ ಕೋರಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ರಾಜೀನಾಮೆ ಪತ್ರ ಬರೆದು, ಅದಕ್ಕೆ ಸಹಿ ಮಾಡಿ, ಕನ್ನಿಕಾಗೆ ನೀಡುತ್ತಾಳೆ. ನೋಡು ಕನ್ನಿಕಾ ನನ್ನನ್ನೇನೊ ಬ್ಲ್ಯಾಕ್ ಮೇಲ್ ಮಾಡಿ ಕೆಲಸದಿಂದ ತೆಗೆದಿದ್ದೀಯಾ. ಇವರುಗಳನ್ನ ಉಳಿಸಿಕೊಳ್ತೇನೆ ಅಂದಿದ್ದೀಯ.. ಕೊಟ್ಟ ಮಾತಿಗೆ ತಕ್ಕ ಹಾಗೆ ನಡ್ಕೊ.. ನಾನು ಇಲ್ಲಿಂದ ಹೋದ ತಕ್ಷಣ ನನ್ನ ಅಸಿಸ್ಟೆಂಟ್ಗಳನ್ನು ತೆಗೆದು ಹಾಕೋಕೆ ನೋಡಿದಿಯೊ ಪರಿಣಾಮ ನೆಟ್ಟಗಿರಲ್ಲ ಎಂದು ಭಾಗ್ಯಾ ಎಚ್ಚರಿಕೆ ನೀಡುತ್ತಾಳೆ.
ಆಗ ಕನ್ನಿಕಾ, ಮಾಡಿದ್ರೆ ಏನೇ ಮಾಡ್ತೀಯಾ ಎಂದು ಕೇಳಿದ್ದಾಳೆ.. ಆಗ ಮತ್ತಷ್ಟು ಕೋಪಗೊಂಡ ಭಾಗ್ಯಾ, ಇದನ್ನೆ ಬೇಡ ಅನ್ನೋದು.. ಒಂದು ಸಲ ನಿನ್ನ ಮರ್ಯಾದೆಯನ್ನ ಊರವರ ಮುಂದೆ ಹರಾಜು ಹಾಕಿದವಳಿಗೆ ಇನ್ನೊಂದು ಸಲ ಅದೇ ಕೆಲಸ ಮಾಡೋದು ಕಷ್ಟದ ವಿಷಯ ಏನಲ್ಲ.. ನೀನು ಇವುಗಳಲ್ಲಿ ಒಬ್ಬರನ್ನಾದ್ರು ಕೆಲಸದಿಂದ ತೆಗೆದೆ ಅನ್ಕೊ ಆ ಕ್ಷಣದಲ್ಲೇ ಅಸಲಿ ಸತ್ಯ ಏನು ಅಂತ ಮೀಡಿಯಾದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬರುತ್ತೆ.. ಕನ್ನಿಕಾ ನಾನು ಇವತ್ತು ಸೋತಿರಬಹುದು.. ಆದ್ರೆ ಸತ್ತಿಲ್ಲ ಎಂದು ಭಾಗ್ಯಾ ಹೇಳಿದ್ದಾಳೆ.
ಸದ್ಯ ಭಾಗ್ಯಾ ಕೆಲಸ ಕಳೆದುಕೊಂಡ ವಿಚಾರ ಮೀಡಿಯಾದಲ್ಲಿ ಬಂದ ಕಾರಣ ಎಲ್ಲರಿಗೂ ಗೊತ್ತಾಗಿದೆ. ಶ್ರೇಷ್ಠಾ-ತಾಂಡವ್ ಇದನ್ನು ಕಂಡು ಖುಷಿಯಲ್ಲಿ ತೇಲಾಡುತ್ತಾರೆ. ಅತ್ತ ಭಾಗ್ಯಾ ತಪ್ಪು ಮಾಡಿರಲು ಸಾಧ್ಯವೇ ಇಲ್ಲ ಎಂದು ಕುಸುಮಾ ಮತ್ತು ಧರ್ಮರಾಜ್ ತಮಗೆ ತಾವೇ ಸಮಾಧಾನ ಮಾಡುತ್ತಿದ್ದಾರೆ. ಇದರ ಮಧ್ಯೆ ಭಾಗ್ಯಾ ಈ ಪರಿಸ್ಥಿತಿಯನ್ನು ಹೇಗೆ ನಿಭಾಹಿಸುತ್ತಾಳೆ ಎಂಬುದು ನೋಡಬೇಕಿದೆ.
Mokshitha Pai, BBK 11: ವಿಶೇಷ ಚೇತನ ತಮ್ಮನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಮೋಕ್ಷಿತಾ ಪೈ: ವೀಡಿಯೊ