Mokshitha Pai, BBK 11: ವಿಶೇಷ ಚೇತನ ತಮ್ಮನ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಮೋಕ್ಷಿತಾ ಪೈ: ವೀಡಿಯೊ
ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮೋಕ್ಷಿತಾ ಪೈ ತಮ್ಮನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದರ ತುಣುಕನ್ನು ಮೋಕ್ಷಿತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳು ಅಂತ ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದ್ದು, ಹಳ್ಳಿ- ಹೈದ ಹನುಮಂತ ಟ್ರೋಫಿ ಎತ್ತಿ ಹಿಡಿದರೆ ತ್ರಿವಿಕ್ರಮ್ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರು. ಸದ್ಯ ಟಾಪ್ 6 ಫೈನಲಿಸ್ಟ್ಗಳು ದೊಡ್ಮನೆಯಿಂದ ಹೊರಬಂದು ಫುಲ್ ಬ್ಯುಸಿಯಾಗಿದ್ದಾರೆ. ಕೆಲವರು ಇಂಟರ್ವ್ಯೂ ಕೊಡುತ್ತಿದ್ದರೆ ಇನ್ನೂ ಕೆಲವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಮೋಕ್ಷಿತಾ ಪೈ ಶೋ ಮುಗಿದು ಕೆಲ ದಿನಗಳ ಬಳಿಕವಷ್ಟೆ ಮಾಧ್ಯಮದ ಮುಂದೆ ಬಂದು ಸುದ್ದಿಯಾದರು. ಇದೀಗ ತಮ್ಮನ ಹುಟ್ಟುಹಬ್ಬ ಆಚರಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಅವರ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಸ್ವಾಭಿಮಾನಿಯಾಗಿ ಮೋಕ್ಷಿತಾ ಅವರು ಸಾಕಷ್ಟು ವಿಷಯದಲ್ಲಿ ಪ್ರಾಮಾಣಿಕತೆ ಮೆರೆದಿದ್ದರು. ದೊಡ್ಮನೆಯಲ್ಲಿ ಇರಬೇಕು ಅಂತ ಅವರು ಡ್ರಾಮಾ ಮಾಡಲಿಲ್ಲ, ಅಷ್ಟಾಗಿ ಜಗಳವನ್ನು ಆಡಲಿಲ್ಲ. ತುಂಬ ಸರಳವಾಗಿದ್ದ ಮೋಕ್ಷಿತಾ ಅವರು ಇದೇ ನನ್ನ ವ್ಯಕ್ತಿತ್ವ, ನಾನು ಹೀಗೆ ಇರೋದು ಅಂತ ಸಾಬೀತುಪಡಿಸಿದ್ದರು. ಇದೇ ಅನೇಕ ಜನರಿಗೆ ಇಷ್ಟವಾಗಿತ್ತು.
ಇದೀಗ ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮೋಕ್ಷಿತಾ ಪೈ ತಮ್ಮನ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದರ ತುಣುಕನ್ನು ಮೋಕ್ಷಿತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳು ಅಂತ ಬರೆದುಕೊಂಡಿದ್ದಾರೆ.
ಇನ್ನೂ, ಮೋಕ್ಷಿತಾ ಪೈ ಅವರ ತಮ್ಮನ ಹೆಸರು ಮಂಜುನಾಥ್. ಇವರು ಫಿಸಿಕಲಿ ಮತ್ತು ಮೆಂಟಲಿ ಚಾಲೆಂಜ್ ಕಿಡ್ ಆಗಿದ್ದಾರೆ. ಈ ಹಿಂದೆ ಮೋಕ್ಷಿತಾ ಪೈ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ಬಾಸ್ ಮನೆಯಲ್ಲಿ ತಮ್ಮನನ್ನು ನೋಡುತ್ತಿದ್ದ ಮೋಕ್ಷಿತಾ ಪೈ ಕಣ್ಣೀರು ಹಾಕಿದ್ದರು. ಅಲ್ಲದೇ ಈ ನನ್ನ ತಮ್ಮ ಹುಟ್ಟಿದ ಮೇಲೆ ನನಗೆ ಜವಾಬ್ದಾರಿ ಜಾಸ್ತಿ ಆಯ್ತು. ಬರೀ ಅವನಿಗೆ ಅಕ್ಕ ಮಾತ್ರ ಅಲ್ಲ, ಅಮ್ಮ ಕೂಡ ಆಗಿದ್ದೀನಿ, ಚಿಕ್ಕ ವಯಸ್ಸಿನಿಂದಲೂ ಅವನೇ ನನ್ನ ಪ್ರಪಂಚ, ನಾನು ಏನೇ ಮಾಡಿದ್ದರು ಅವನಿಗೋಸ್ಕರನೇ ಅಂತ ಎಲ್ಲರ ಮುಂದೆಯೇ ಕಣ್ಣೀರು ಹಾಕಿದ್ದರು.
ಪಾರು ಧಾರವಾಹಿಯ ಮೂಲಕ ಮನೆಮಾತಾದ ಮೋಕ್ಷಿತಾ ಅವರು ಸದ್ಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇನ್ನೊಂದು ಸಾಂಗ್ ಬಾಕಿ ಇದೆಯಂತೆ. ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮೋಕ್ಷಿತಾ ಕಪ್ಪು ಹುಡುಗಿಯಾಗಿರುತ್ತಾರಂತೆ. ಈ ಸಿನಿಮಾದ ಹೆಸರು ನಿರ್ಣಯಾ. ಈ ಮೂಲಕ ಮೋಕ್ಷಿತಾ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಸದ್ಯ ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮೋಕ್ಷಿತಾಗೆ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಬರುತ್ತಿವೆಯಂತೆ.
Trivikram, BBK 11: ಭವ್ಯಾಗೆ ಪ್ರಪೋಸ್ ಮಾಡೋಕೆ ನಾನ್ಯಾಕೆ ಹೆದರಲಿ: ತ್ರಿವಿಕ್ರಮ್ ಖಡಕ್ ಉತ್ತರ