ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ ಶ್ರೇಷ್ಠಾ-ಕನ್ನಿಕಾ

ಶ್ರೇಷ್ಠಾ, ತಾಂಡವ್ಗೆ ಹೇಳದೆ ಕನ್ನಿಕಾಳನ್ನು ಭೇಟಿ ಆಗಿರುವುದು ಯಾಕೆ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ತಾಂಡವ್ ನೀನು ಎಲ್ಲಿ ಹೋಗಿದ್ದಿ ಎಂದು ಕೇಳಿದರೂ ಶ್ರೇಷ್ಠಾ ಬಾಯಿಬಿಡಲಿಲ್ಲ. ತಾಂಡವ್ ನಾನು ಎಲ್ಲೋಗಿದ್ದೆ.. ಯಾಕೆ ಹೋಗಿದ್ದೆ.. ಯಾವ ಮೀಟಿಂಗ್ಗೆ ಹೋಗಿದ್ದೆ ಎಂದು ನಿನ್ಗೆ ಆಮೇಲೆ ಗೊತ್ತಾಗುತ್ತೆ.. ಅದನ್ನ ಬಾಯಲ್ಲಿ ಹೇಳಿದ್ರೆ ಚೆನ್ನಾಗಿರಲ್ಲ ಎಂದು ಶ್ರೇಷ್ಠಾ ಹೇಳಿದ್ದಾಳೆ.

ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ ಶ್ರೇಷ್ಠಾ-ಕನ್ನಿಕಾ

Bhagya Lakshmi Serial

Profile Vinay Bhat Jan 30, 2025 1:05 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ( Bhagya Lakshmi Serial ) ಭಾಗ್ಯಾಳಿಗೆ ಮತ್ತೆ ಕಷ್ಟದ ದಿನಗಳು ಶುರುವಾಗಲಿದೆ. ಈಗಾಗಲೇ ಗಂಡನಿಂದ ದೂರವಿರುವ ಭಾಗ್ಯಾ ಸದ್ಯದಲ್ಲೇ ಕೆಲಸವನ್ನು ಕೂಡ ಕಳೆದುಕೊಳ್ಳಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ಈ ಘಟನೆ ಶೀಘ್ರದಲ್ಲೇ ಸಂಭವಿಸಲಿದೆ. ಇದಕ್ಕೆ ತಕ್ಕಂತೆ ಧಾರಾವಾಹಿಯ ಪ್ರತಿದಿನದ ಎಪಿಸೋಡ್ ರೋಚಕತೆ ಸೃಷ್ಟಿಸುತ್ತಿದೆ. ಸದ್ಯ ಭಾಗ್ಯಾಳನ್ನು ಕೆಲಸಿದಿಂದ ಕಿತ್ತೆಸೆಯಲು ಶ್ರೇಷ್ಠಾ ಹಾಗೂ ಕನ್ನಿಕಾ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ.

ಭಾಗ್ಯಾ ಕೆಲಸ ಮಾಡುತ್ತಿರುವ ಸಿಟಿ ಆಫ್ ಲೈಟ್ಸ್ ಹೋಟೆಲ್‌ನ ಮಾಲೀಕರ ತಂಗಿ ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಪ್ಲ್ಯಾನ್ ಮಾಡುತ್ತಿರುತ್ತಾಳೆ ಶ್ರೇಷ್ಠಾ. ಆರಂಭದಲ್ಲಿ ಕನ್ನಿಕಾ, ಭಾಗ್ಯಾ ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಅವಳ ಕೆಲಸದ ಬಗ್ಗೆ ಎಲ್ಲರಲ್ಲಿ ಉತ್ತಮ ಅಭಿಪ್ರಾಯವಿದೆ. ಹೀಗಾಗಿ ಈಗಲೇ ಕೆಲಸದಿಂದ ತೆಗೆಸಲು ಕಷ್ಟ ಎಂದು ಹೇಳುತ್ತಾಳೆ. ಆಗ ಶ್ರೇಷ್ಠಾ, ನಿನ್ನನ್ನು ನಂಬಿಕೊಂಡು ಇಲ್ಲಿಗೆ ಬಂದರೆ, ಏನು ಪ್ರಯೋಜನವಾಗುವುದಿಲ್ಲ ಎಂದು ಕೋಪ ತೋರಿಸುತ್ತಾಳೆ.

ಆಗ ಕನ್ನಿಕಾ, ನಾನು ಭಾಗ್ಯಾಳನ್ನು ಈಗ ಕೆಲಸದಿಂದ ತೆಗೆಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿದ್ದೇನೆ ಹೊರತು, ಕೆಲಸದಿಂದ ತೆಗೆಯುವುದೇ ಇಲ್ಲ ಎಂದು ಹೇಳಿಲ್ಲ. ಅದಕ್ಕೆ ಸೂಕ್ತ ಸಮಯ ಬರಲಿ, ಅವಳ ಕೆಲಸದ ಬಗ್ಗೆ ಜನರಲ್ಲಿ, ಅಲ್ಲಿನ ಸಿಬ್ಬಂದಿಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿ, ನಂತರ ಕೆಲಸದಿಂದ ತೆಗೆಸುತ್ತೇನೆ. ಆಗ ನಮ್ಮ ಕೆಲಸ ಸುಲಭವಾಗುತ್ತದೆ ಎಂದು ಕನ್ನಿಕಾ ಹೇಳುತ್ತಾಳೆ. ಭಾಗ್ಯಾ ಯುವರ್ ಗೇಮ್ ಈಸ್ ಓವರ್.. ಆ ಭಾಗ್ಯಾ ಕೆಲಸದಿಂದ ಹೊರಬಿದ್ಲು ಅಂತನೆ ಅನ್ಕೊ ಎಂದು ಕನ್ನಿಕಾ, ಶ್ರೇಷ್ಠಾ ಬಳಿ ಹೇಳುತ್ತಾಳೆ.

ಈ ಸಲ ನಾನು ಬಿಟ್ಟುಕೊಡೊ ಮಾತೇ ಇಲ್ಲ.. ನಾನು ಕೊಡೊ ಒಂದೊಂದು ಡೋಸ್​ಗೂ ಅವ್ಳು ಕಣ್ಣೀರಲ್ಲ ಸ್ನಾನ ಮಾಡಬೇಕು ಎನ್ನುತ್ತಾಳೆ. ಕನ್ನಿಕಾ ಮಾತು ಕೇಳಿ ಖುಷಿಯಾದ ಶ್ರೇಷ್ಠಾ, ಭಾಗ್ಯಾ ನಿನ್ಗೆ ಇದೆ ಕಣೆ ಮಾರೀ ಹಬ್ಬ ಎನ್ನುತ್ತಾಳೆ. ಆದರೆ, ಇದು ಯಾವುದನ್ನೂ ಅರಿಯದ ಭಾಗ್ಯಾ ಅತ್ತ ಅತ್ತೆ-ಮಾವನಿಗೆ ಸರ್​ಪ್ರೈಸ್ ನೀಡಿದ್ದಾಳೆ. ಈ ಖುಷಿಯನ್ನು ತಾನು ಕೆಲಸ ಮಾಡುತ್ತಿರುವ ಕಡೆಯಲ್ಲಿ ಕೂಡ ಸ್ವೀಟ್ ಕೊಟ್ಟು ಸಂಭ್ರಮಿಸುತ್ತಾಳೆ.

ನಾವು ಹೊಸ ಕಾರು ತೆಗೊಂಡ್ವಿ.. ನನಗಂತ ಅಲ್ಲ ತೆಗೊಂಡಿದ್ದು ನನ್ನ ಮಾವನವರಿಗೆ, ಅವ್ರ ಹತ್ರ ಒಂದು ಸ್ಕೂಟರ್ ಇದೆ.. ಅದನ್ನು ಸ್ಟಾರ್ಟ್ ಮಾಡೋಕೆ 10 ಸಲ ಕಿಕ್ ಮಾಡಬೇಕು ಅಲ್ಲೆ ಅವರು ಸುಸ್ತಾಗ್ತಾರೆ.. ಅದು ಹಳೇ ಗಾಡಿ ಮೊನ್ನೆ ಹೋಗುವಾಗ ಬ್ರೇಕ್ ಹಿಡಿಯದೆ ರೋಡ್​ನಲ್ಲಿ ಬಿದ್ದು ಕೈ-ಕಾಲು ಗಾಯ ಮಾಡ್ಕೊಂಡು ಬಂದ್ರು, ಅದಿಕೆ ಆ ತರಾ ಇನ್ನು ಯಾವತ್ತೂ ಆಗೋದು ಬೇಡ ಅಂತ ಕಾರು ಕೊಡಿಸಿದೆ ಎಂದು ಸ್ಟಾಫ್ ಜೊತೆ ಭಾಗ್ಯಾ ಹೇಳುತ್ತಾಳೆ. ಭಾಗ್ಯಾಳ ಈ ಒಳ್ಳೆ ಗುಣ ಕಂಡು ಸ್ಟಾಫ್​ನಲ್ಲಿರುವ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ.

ಇನ್ನೊಂದೆಡೆ ಶ್ರೇಷ್ಠಾ, ತಾಂಡವ್​ಗೆ ಹೇಳದೆ ಕನ್ನಿಕಾಳನ್ನು ಭೇಟಿ ಆಗಿರುವುದು ಯಾಕೆ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ತಾಂಡವ್ ನೀನು ಎಲ್ಲಿ ಹೋಗಿದ್ದಿ ಎಂದು ಕೇಳಿದರೂ ಶ್ರೇಷ್ಠಾ ಬಾಯಿಬಿಡಲಿಲ್ಲ. ತಾಂಡವ್ ನಾನು ಎಲ್ಲೋಗಿದ್ದೆ.. ಯಾಕೆ ಹೋಗಿದ್ದೆ.. ಯಾವ ಮೀಟಿಂಗ್​ಗೆ ಹೋಗಿದ್ದೆ ಎಂದು ನಿನ್ಗೆ ಆಮೇಲೆ ಗೊತ್ತಾಗುತ್ತೆ.. ಅದನ್ನ ಬಾಯಲ್ಲಿ ಹೇಳಿದ್ರೆ ಚೆನ್ನಾಗಿರಲ್ಲ ಎಂದು ಶ್ರೇಷ್ಠಾ ಹೇಳಿದ್ದಾಳೆ.



ಸದ್ಯ ಭಾಗ್ಯಾ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಖಚಿತವಾಗಿದೆ. ಅಲ್ಲದೆ ಎರಡು ತಿಂಗಳ ವೇತನವನ್ನು ಮುಂಚಿತವಾಗಿಯೇ ಪಡೆದುಕೊಂಡಿದ್ದು, ಕಾರು ಖರೀದಿಯ ಡೌನ್‌ಪೇಮೆಂಟ್‌ಗೆ ಬಳಸಿಕೊಂಡಿದ್ದಾಳೆ. ಕೆಲಸ ಕಳೆದುಕೊಂಡರೆ ಇಎಂಐ ಕಟ್ಟಲು ಏನು ಮಾಡುತ್ತಾಳೆ?, ಶ್ರೇಷ್ಠಾ ಮತ್ತು ಕನ್ನಿಕಾಳನ್ನು ಯಾವ ರೀತಿ ಎದುರಿಸುತ್ತಾಳೆ, ಭಾಗ್ಯಾಗೆ ಮುಂದೇನು ಸಂಕಟ ಕಾದಿದೆ? ಎಂಬುದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

Bhavya Gowda, BBK 11: ಭವ್ಯಾ ಗೌಡಾಗೆ ಭರ್ಜರಿ ವೆಲ್ಕಮ್ ಮಾಡಿದ ಅಕ್ಕ-ತಂಗಿ: ವಿಡಿಯೋ ನೋಡಿ