Karna Serial: ನಿಧಿನ ವರಿಸೋದಕ್ಕೆ ಬಂದಿದ್ದಾನೆ ಅರ್ಜುನ; ಕರ್ಣ ಬದುಕಲ್ಲಿ ಶುರುವಾಯ್ತು ಪ್ರೇಮ ಯುದ್ಧ!
Karna Serial : ಕರ್ಣ ಸೀರಿಯಲ್ ನಲ್ಲಿ ಸದ್ಯ ಭಾರಿ ಟ್ವಿಸ್ಟ್ ಸಿಕ್ಕಿದೆ. ಕರ್ಣ ಮತ್ತು ನಿಧಿ ಒಂದಾಗಬೇಕು ಎಂದು ಎಲ್ಲರೂ ಕಾಯುತ್ತಿದ್ದರೆ, ಇದೀಗ ಆಗಿದ್ದೇ ಬೇರೆ. ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ರಮೇಶ್ ಕುತಂತ್ರದಿಂದ ನಿಧಿಯನ್ನು ಗಗನ್‌ಗೆ ಮದುವೆ ಮಾಡಲು ಯತ್ನಿಸುತ್ತಿದ್ದಾನೆ. ಕರ್ಣ ನಿಧಿಯನ್ನು ಪ್ರೀತಿಸುತ್ತಿದ್ದರೂ, ಅನಿವಾರ್ಯವಾಗಿ ನಿತ್ಯಾಳನ್ನು ಮದುವೆಯಾಗಿದ್ದ. ಈಗ ಕರ್ಣ ಮತ್ತು ನಿಧಿ, ರಮೇಶ್‌ನ ಕುತಂತ್ರವನ್ನು ಅರಿತು ತಿರುಗಿಬಿದ್ದಿದ್ದಾರೆ.
ಕರ್ಣ ಧಾರಾವಾಹಿ -
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಭಾರಿ ಟ್ವಿಸ್ಟ್ ಸಿಕ್ಕಿದೆ. ಕರ್ಣ ಮತ್ತು ನಿಧಿ (Karna and Nidhi) ಒಂದಾಗಬೇಕು ಎಂದು ಎಲ್ಲರೂ ಕಾಯುತ್ತಿದ್ದರೆ, ಇದೀಗ ಆಗಿದ್ದೇ ಬೇರೆ. ನಿಧಿಯನ್ನು ಮದುವೆಯಾಗಲು ಬಂದಿದ್ದಾನೆ ಅರ್ಜುನ್. ರಮೇಶ್ (Ramesh) ಕುತಂತ್ರದಿಂದ ನಿಧಿಯನ್ನು ಗಗನ್‌ಗೆ ಮದುವೆ ಮಾಡಲು ಯತ್ನಿಸುತ್ತಿದ್ದಾನೆ. ಕರ್ಣ ನಿಧಿಯನ್ನು ಪ್ರೀತಿಸುತ್ತಿದ್ದರೂ, ಅನಿವಾರ್ಯವಾಗಿ ನಿತ್ಯಾಳನ್ನು ಮದುವೆಯಾಗಿದ್ದ. ಈಗ ಕರ್ಣ ಮತ್ತು ನಿಧಿ, ರಮೇಶ್‌ನ (Ramesh) ಕುತಂತ್ರವನ್ನು ಅರಿತು ತಿರುಗಿಬಿದ್ದಿದ್ದಾರೆ.
ಇದನ್ನೂ ಓದಿ: Priyanka Chopra: ಪದಗಳಲ್ಲಿ ವರ್ಣಿಸುವುದು ಕಷ್ಟ; ಆಶಾ ಭೋಸ್ಲೆ ಕುರಿತು ಪ್ರಿಯಾಂಕಾ ಚೋಪ್ರಾ ಭಾವುಕ
ಅತಿಥಿ ಪಾತ್ರ
ಗಗನ್ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಈ ಧಾರಾವಾಹಿಯಲ್ಲಿ ನಿಧಿಯನ್ನು ಮದುವೆಯಾಗಲು ಗಗನ್ ಆಗಮನ ಆಗಿದೆ. ಅವರದ್ದು ಅತಿಥಿ ಪಾತ್ರ ಎನ್ನಲಾಗಿದೆ. ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ ಪ್ಲ್ಯಾನ್ ಮಾಡಿ ಹುಡುಗನನ್ನು ಕರೆಸಿದ್ದಾನೆ.
ಅವನಿಗೆ ತಿರುಗೇಟು ನೀಡಲು ಕರ್ಣ ಕೂಡ ಇನ್ನೊಂದು ಪ್ಲ್ಯಾನ್ ಮಾಡಿದ್ದಾನೆ. ಆದರೆ ಇದೀಗ ಅಲ್ಲಿ ಎಂಟ್ರಿ ಕೊಟ್ಟಿರೋದು ಅರ್ಜುನ್. ಒಟ್ಟಿನಲ್ಲಿ ಅರ್ಜುನ್ನನ್ನು ಕರೆತಂದಿದ್ದು ಕರ್ಣನಾ ಅಥವಾ ರಮೇಶ್ನಾ ಎನ್ನುವುದು ಸದ್ಯಕ್ಕೆ ಇರುವ ಗೊಂದಲ. ಕರ್ಣನ ಪ್ಲ್ಯಾನ್ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದಾಗಲೇ ಕರ್ಣ ರಮೇಶನ ಸ್ವಂತ ಮಗ ಎನ್ನುವುದು ನಯನತಾರಾ ಹೇಳಿದ್ದಾಳೆ.
ಆದರೆ ಅವರಿಬ್ಬರಿಗೂ ಇದು ಗೊತ್ತಿಲ್ಲ. ಇದೇ ಕಾರಣಕ್ಕೆ, ರಮೇಶ್ ಮಗನ ಜೀವನ ಹಾಳು ಮಾಡಲು ಮುಂದಾಗಿದ್ದರೆ, ಅಪ್ಪನ ಕುತಂತ್ರಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಕರ್ಣ ಹೇಳುತ್ತಿದ್ದಾನೆ.
ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ನಂತರ ಆತ ಮದುವೆ ಆದ ಕೂಡ. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದಾರೆ. ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಾಳೆ. ಆಕೆ ಕೂಡ ಅವನ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮಾಡಿದ್ದಾಳೆ.
ಇದನ್ನೂ ಓದಿ: Mrunal Thakur: ಅಲ್ಲು ಅರವಿಂದ್ ಇದೊಂದು ಮಾತಿಗೆ ನಾಚಿ ನೀರಾದ ಮೃಣಾಲ್ ಠಾಕೂರ್
ಕರ್ಣ ಸೀರಿಯಲ್‌ನಲ್ಲಿ ಕರ್ಣ ಅನಾಥ ತಿಪ್ಪೆ ಕಸದ ತೊಟ್ಟಿ ಅಂತ ಹೀಯಾಳಿಸುತ್ತಿದ್ದ ಕರ್ಣನೆ ರಮೇಶನ ಸ್ವಂತ ಮಗ ಕರ್ಣ ಎಂಬುವುದು ಗೊತ್ತಾಗಿದೆ. ಸಾಕಿ ಸಲುಹಿದ ತಾತನಿಗೋಸ್ಕರ ಕುಟುಂಬವನ್ನ ಒಗ್ಗೂಡಿಸಿಕೊಂಡು ಹೋಗುತ್ತಿದ್ದ ಕರ್ಣ, ಅದೇ ಮನೆಯ ಕುಡಿ ಎಂಬ ಸತ್ಯ ಬಯಲಾಗಿದೆ.