ಬಿಗ್ ಬಾಸ್ ಸೀಸನ್ 12 (Bigg Boss Kannada 12) ಶುರುವಾದ ಆರಂಭದಲ್ಲಿ ಗಿಲ್ಲಿ (Gilli) ಅವರ ತಮಾಷೆ, ಆಟದ ವೈಖರಿ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಅತಿ ವಿಶ್ವಾಸ ಆಟವನ್ನು ಹಾಳುಮಾಡುತ್ತಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ರಕ್ಷಿತಾ (Rakshitha) ಅವರ ವಿಚಾರಕ್ಕೆ, ಮೂರನೇ ವಾರ ಗಿಲ್ಲಿ ಅವರಿಗೆ ಕಿಚ್ಚನ ಚಪ್ಪಾಳೆ (Kichchana Chappale) ಬಂತು. ಆದರೆ, ಈಗ ಅದು ಓವರ್ ಕಾನ್ಫಿಡೆನ್ಸ್ (Over Confidence) ಆಗಿ ಬದಲಾಗಿದೆಯೇ ಎಂದು ಕೆಲ ವೀಕ್ಷಕರಿಗೆ ಅನಿಸಿದೆ. ಇದರ ಜೊತೆಗೆ ರಘು ಅವರ ಆಟವನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.
ಪ್ರಶ್ನೆ ಇಟ್ಟ ಕಾವ್ಯ!
ನಿನ್ನೆಯ ಎಪಿಸೋಡ್ ನೋಡುವಾಗ, ಗಿಲ್ಲಿ ಅವರಿಗೆ ಕಾವ್ಯ ಕೂಡ ಪ್ರಶ್ನೆ ಇಟ್ಟಿದ್ದಾರೆ. ಗಿಲ್ಲಿ ಸಾಕಷ್ಟು ಬಾರಿ ಮನೆಮಂದಿ ಮುಂದೆ ನನ್ನನ್ನ ನಾಮಿನೇಟ್ ಮಾಡಿ. ಸೇಫ್ ಆಗ್ತಿನಿ ಅಂತ ಉತ್ತರ ಕೊಡುತ್ತಿದ್ದಾರೆ. ಈ ಬಗ್ಗೆ ಕಾವ್ಯ ಅವರು ಇದು ಉಲ್ಟಾ ಆದರೆ ಏನು ಮಾಡ್ತೀಯಾ? ಅಂತ ನೇರವಾಗಿ ಪ್ರಶ್ನೆ ಇಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
ಗಿಲ್ಲಿ ಅವರು ಟಾಸ್ಕ್ ಅಂತ ಬಂದಾಗಲೂ ಸರಿಯಾಗಿ ಈ ನಡುವೆ ನಿಭಾಯಿಸುತ್ತಿಲ್ಲ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ.ಈ ಹಿಂದೆ ಗಿಲ್ಲಿ ನಟ ಮಾಡಿದ ಒಂದು ಕಿತಾಪತಿಯಿಂದ ಅವರ ಇಡೀ ತಂಡ ಸೋಲುವಂತೆ ಆಯಿತು. ಇದರಿಂದ ಅವರು ಕಳಪೆ ಕೂಡ ಪಡೆದರು. ಈ ಬಗ್ಗೆ ಕಿಚ್ಚ ಕೂಡ ಗಿಲ್ಲಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೂ ಗಿಲ್ಲಿಗೆ ಅರಿವಾದಂತೆ ತೋರುತ್ತಿಲ್ಲ.
ಅಶ್ವಿನ ಗೌಡ ಕ್ಲಾಸ್
ಗಿಲ್ಲಿ ಅವರ ಬಳಿ ಅಶ್ವಿನಿ ಗೌಡ ಅವರೂ ಪ್ರಶ್ನೆ ಇಟ್ಟಿದ್ದರು. ರಘು ಅವರು ಮೂರನೇ ವಾರಕ್ಕೆ ಬಂದು ಕ್ಯಾಪ್ಟನ್ ಆದರು ನೀನೇನು ಮಾಡಿದ್ದೀಯಾ? ಎಂದು ಗಿಲ್ಲಿಗೆ ಪ್ರಶ್ನೆ ಇಟ್ಟಿದ್ದರು. ಅದಕ್ಕೆ ಗಿಲ್ಲಿ ಅವರು ಕಿಚ್ಚನ ಚಪ್ಪಾಳೆ ಎಂದಿದ್ದರು. ಅದನ್ನ ಬಿಟ್ಟು ಇನ್ನೇನು ಮಾಡಿದ್ದೀಯಾ? ಕ್ಯಾಪ್ಟನ್ ಕೈ ಹಿಡಿದುಕೊಂಡು ವೈಸ್ ಕ್ಯಾಪ್ಟನ್ ಆಗೋದು ಎಂದು ನೇರವಾಗಿ ಹೇಳಿದ್ದರು. ಒಟ್ಟಾರೆಯಾಗಿ ಈಗೀಗ ಗಿಲ್ಲಿ ಅವರ ಆಟದ ಕುರಿತು ಬೇಸರ ಹೊರ ಹಾಕುತ್ತಿದ್ದಾರೆ ವೀಕ್ಷಕರು. ಕಿಚ್ಚ ಕೂಡ ಈ ಬಗ್ಗೆ ಗಿಲ್ಲಿ ಅವರಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ.
ರಘು ಆಟಕ್ಕೆ ಬಹುಪರಾಕ್!
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಘು ಅವರು ಬರು ಬರುತ್ತಲೇ ಕ್ಯಾಪ್ಟನ್ ಆದವರು. ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದವರು ರಘು.
ಈ ಬಾರ ಬಿಗ್ ಬಾಸ್ ಸೀಸನ್ 12 ಟ್ವಿಸ್ಟ್‌ಗಳಿಂದ ಕೂಡಿತ್ತು. ನಾಮಿನೇಟ್ ಆಗದವರು ನಾಮಿನೇಟ್ ಆದ್ರು, ಡೇಂಜರ್ಜ್ ಝೋನ್‌ನಲ್ಲಿ ದ್ದವರು ಸೇಫ್ ಆದ್ರು. ಗೇಮ್ ವಿಚಾರಕ್ಕೆ ಬರೋದಾದರೆ, ಮನೆಯ ಕ್ಯಾಪ್ಟನ್ ಮಾಳು ನಿಪನಾಳ ಅವರು ಕಾಕ್ರೋಚ್ ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಅವರ ಜೊತೆ ರಘು ಕೂಡ ನೇರವಾಗಿ ನಾಮಿನೇಟ್ ಆಗಿದ್ದರು.
ಈ ವಾರ ರಘು ಅವರು ನಾಮಿನೇಟ್ ಆಗದೇ ಇರುವ ತಂಡದಲ್ಲಿ ಇದ್ದರು. ಈ ವೇಳೆ ಟಾಸ್ಕ್ ಗೆದ್ದ ತಂಡದವರು ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಿ, ನಾಮಿನೇಟ್ ತಂಡಕ್ಕೆ ಕಳುಹಿಸಬೇಕಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಹಠ ಹಿಡಿದು ರಘು ಅವರನ್ನು ನಾಮಿನೇಟ್ ಮಾಡಿದರು. ಇದಾದ ಬಳಿಕ ರಘು ಅವರಿಗೆ ಶಾಕ್ ಆಯ್ತು.
ಎರಡನೇ ಬಾರಿಗೆ ಕ್ಯಾಪ್ಟನ್
ರಕ್ಷಿತಾ ನನ್ನ ಹೆಸರನ್ನು ಏಕೆ ತೆಗೆದುಕೊಂಡರು ಎಂಬುದೇ ನನಗೆ ಗೊತ್ತಿಲ್ಲ. ನಂತರ ಮಾಳು ಕೂಡ ನನ್ನ ನಾಮಿನೇಟ್ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಎಲ್ಲಿಯೂ ಈ ಬಗ್ಗೆ ಕೂಗಾಡಿಲ್ಲ. ಆದರೆ ಟಾಸ್ಕ್ ಮೂಲಕ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada: ಎರಡನೇ ಬಾರಿಗೆ ಕ್ಯಾಪ್ಟನ್ ಆದ್ರಾ ರಘು? ಡೇಂಜರ್ಸ್ ಝೋನ್‌ನಲ್ಲಿ ಕಾಕ್ರೋಚ್ ಸುಧಿ!
ಜಿಮ್ ಬಾಲ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ಅಶ್ವಿನಿ ಹೊರಬಂದು ಜಾಹ್ನವಿ ಗೆಲುವು ಸಾಧಿಸಿದರು. ಪುರುಷರ ತಂಡದಲ್ಲಿ ರಘು ಗೆಲುವು ಸಾಧಿಸಿದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿಗೆ ಆಟ ಇರಲಿದೆ. ವರದಿಯ ಪ್ರಕಾರ ರಘು ಎರಡನೇ ಬಾರಿಗೆ ಕ್ಯಾಪ್ಟನ್ ಸ್ಥಾನ ಗಳಿಸಿದ್ದಾರೆ ಎನ್ನಲಾಗುತ್ತಿದೆ.