Bigg Boss Kannada: ಎರಡನೇ ಬಾರಿಗೆ ಕ್ಯಾಪ್ಟನ್ ಆದ್ರಾ ರಘು? ಡೇಂಜರ್ಸ್ ಝೋನ್‌ನಲ್ಲಿ ಕಾಕ್ರೋಚ್ ಸುಧಿ!
ಈ ವಾರ ನಾಮಿನೇಟ್ (Nominate) ಆಗದವರು ನಾಮಿನೇಟ್ ಆದ್ರು, ಡೇಂಜರ್ಜ್ ಝೋನ್‌ನಲ್ಲಿ ಇದ್ದವರು ಸೇಫ್ ಆದ್ರು. ಗೇಮ್ ವಿಚಾರಕ್ಕೆ ಬರೋದಾದರೆ, ಮನೆಯ ಕ್ಯಾಪ್ಟನ್ ಮಾಳು ನಿಪನಾಳ (Malu Nipanal) ಅವರು ಕಾಕ್ರೋಚ್ ಸುಧಿಯನ್ನು (Sudhi) ನೇರವಾಗಿ ನಾಮಿನೇಟ್ (Bigg Boss Kannada 12) ಮಾಡಿದರು. ನಿನ್ನೆಯ ಟಾಸ್ಕ್‌ನಲ್ಲಿ ರಘು ಅವರು ವಿನ್ ಆಗೋದು ಖಚಿತ ಎನ್ನುವಂತಾಗಿದೆ. ಒಂದು ವೇಳೆ ರಘು ಅವರು ವಿನ್ ಆದ್ರೆ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ (Captain) ಅವರಿಗೆ ಒಲಿಯಲಿದೆ. ಜೊತೆಗೆ ರಿಷಾ ಅವರು ಸುದೀಪ್ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಈ ಬಾರ ಬಿಗ್ ಬಾಸ್ ಸೀಸನ್ 12 (Bigg Boss Kannada 12) ಟ್ವಿಸ್ಟ್‌ಗಳಿಂದ ಕೂಡಿತ್ತು. ನಾಮಿನೇಟ್ Nominate) ಆಗದವರು ನಾಮಿನೇಟ್ ಆದ್ರು, ಡೇಂಜರ್ಜ್ ಝೋನ್‌ನಲ್ಲಿ ಇದ್ದವರು ಸೇಫ್ ಆದ್ರು. ಗೇಮ್ ವಿಚಾರಕ್ಕೆ ಬರೋದಾದರೆ, ಮನೆಯ ಕ್ಯಾಪ್ಟನ್ ಮಾಳು ನಿಪನಾಳ (Malu Nipanal) ಅವರು ಕಾಕ್ರೋಚ್ ಸುಧಿಯನ್ನು (Sudhi) ನೇರವಾಗಿ ನಾಮಿನೇಟ್ ಮಾಡಿದರು. ಅವರ ಜೊತೆ ರಘು ಕೂಡ ನೇರವಾಗಿ ನಾಮಿನೇಟ್ ಆಗಿದ್ದರು. ಆದರೆ ನಿನ್ನೆಯ ಟಾಸ್ಕ್‌ನಲ್ಲಿ ರಘು ಅವರು ವಿನ್ ಆಗೋದು ಖಚಿತ ಎನ್ನುವಂತಾಗಿದೆ. ಒಂದು ವೇಳೆ ರಘು ಅವರು ವಿನ್ ಆದ್ರೆ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ (Captain) ಅವರಿಗೆ ಒಲಿಯಲಿದೆ. ಆದ್ರೆ ಸುಧಿ ಅವರಿಗೆ ಒಂದು ವೇಳೆ ಕಡಿಮೆ ವೋಟ್ ಬಂತಾದರೆ ಮನೆಗೆ ಹೋಗೋದು ಖಚಿತ ಎನ್ನಲಾಗುತ್ತಿದೆ.
ಒಮ್ಮೆ ಸೇಫ್ ಆಗಿದ್ದವರು ಮತ್ತೆ ನಾಮಿನೇಟ್!
ನಾಮಿನೇಟೆಡ್ ತಂಡದ ಸದಸ್ಯರಾದ ಅಶ್ವಿನಿ, ಜಾಹ್ನವಿ, ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ರಘು, ಕಾಕ್ರೋಚ್ ಸುಧಿ, ಧ್ರುವಂತ್ ಈ ಟಾಸ್ಕ್‌ಗೆ ಸೇರಿದ್ದರು. ನಾಮಿನೇಟೆಡ್ ತಂಡ ಎರಡು ಟಾಸ್ಕ್‌ಗಳಲ್ಲಿ ಗೆದ್ದುಕೊಂಡಿದ್ದರಿಂದ, ಅವರೇ ಕ್ಯಾಪ್ಟನ್ಸಿ ಆಟಕ್ಕೆ ಇಳಿದರು. ಒಮ್ಮೆ ಸೇಫ್ ಆದ ಅವರು ನಂತರ ಮತ್ತೆ ನಾಮಿನೇಟ್ ಆಗುವಂತಾಯಿತು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ- ಕಾವ್ಯ ದೋಸ್ತಿ ಕಟ್? ಕಾವು ಜೊತೆ ಇನ್ಮುಂದೆ ಮಾತನಾಡುವುದಿಲ್ವಂತೆ ಗಿಲ್ಲಿ!
ಎರಡನೇ ಬಾರಿಗೆ ರಘು ಕ್ಯಾಪ್ಟನ್!
ಜಿಮ್ ಬಾಲ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ಅಶ್ವಿನಿ ಹೊರಬಂದು ಜಾಹ್ನವಿ ಗೆಲುವು ಸಾಧಿಸಿದರು. ಪುರುಷರ ತಂಡದಲ್ಲಿ ರಘು ಗೆಲುವು ಸಾಧಿಸಿದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿಗೆ ಆಟ ಇರಲಿದೆ. ವರದಿಯ ಪ್ರಕಾರ ರಘು ಎರಡನೇ ಬಾರಿಗೆ ಕ್ಯಾಪ್ಟನ್ ಸ್ಥಾನ ಗಳಿಸಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆಯ ಎಪಿಸೋಡ್ ನೋಡಿ ಬಳಿಕ ವೀಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ರಕ್ಷಿತಾ ಅವರನ್ನು ಹೊಗಳುತ್ತಿದ್ದಾರೆ. ರಕ್ಷಿತಾ ಪರೋಕ್ಷವಾಗಿ ದಿ ಕಿಂಗ್ ಮೇಕರ್ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನೇರವಾಗಿ ನಾಮಿನೇಟ್ ಆದ ಸುಧಿ!
ಈ ವಾರ ಬಿಗ್ ಬಾಸ್ ಎರಡು ತಂಡಗಳಾಗಿ ಸ್ಪರ್ಧಿಗಳಿ ಟಾಸ್ಕ್ ನೀಡಿತ್ತು. ಮೊದಲ ಸುತ್ತಿನಲ್ಲಿ ಸುಧಿ ಸೇಫ್ ಆಗಿದ್ದರು. ಆದರೆ ಮಾಳು ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದರು. ಕ್ಯಾಪ್ಟನ್ ಮಾಳು ನಿಪನಾಳ ಅವರು ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದಾಗ ಕಾಕ್ರೋಚ್ ಸುಧಿ ಮತ್ತು ರಘು ಹೆಸರನ್ನು ಅವರು ತೆಗೆದುಕೊಂಡರು.
ರಘು ಅವರು ಕಳೆದ ಒಂದು ವಾರದಿಂದ ಎಲ್ಲಿಯೂ ಸರಿಯಾಗಿ ಕಾಣಿಸಿಕೊಂಡಿಲ್ಲ ಎಂಬ ಕಾರಣವನ್ನು ಮಾಳು ನಿಪನಾಳ ಅವರು ನೀಡಿದರು.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
ನಾನು ಹೇಳಿದ ಕೆಲಸವನ್ನು ಕಾಕ್ರೋಚ್ ಸುಧಿ ಸರಿಯಾಗಿ ಮಾಡಿಲ್ಲ ಅಂತ ಸುಧಿ ಅವರ ಬಗ್ಗೆ ಮಾಳು ನಿಪನಾಳ ಕಾರಣ ನೀಡಿದರು. ಇದರ ಜೊತೆಗೆ ರಿಷಾ ಅವರು ಸುದೀಪ್ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದಾರೆ. ಮಾಳು ಅವರು ಇದಕ್ಕೂ ಮುಂಚೆ ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಜಾಹ್ನವಿ, ರಾಶಿಕಾ ಶೆಟ್ಟಿ, ರಕ್ಷಿತಾ ಶೆಟ್ಟಿ, ಧ್ರುವಂತ್ ಅವರನ್ನು ನಾಮಿನೇಟ್ ಮಾಡಿದ್ದರು