ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೈ-ಕಾಲು ಹಿಡಿದಾದ್ರೂ ಡಿ ಬಾಸ್‌ನ ನನ್ ಸಿನಿಮಾ ಈವೆಂಟ್‌ಗೆ ಕರೆದುಕೊಂಡು ಬರ್ತಿದ್ದೆʼ; ಜನ್ಮದಿನದಂದು ದರ್ಶನ್‌ರನ್ನು ನೆನೆದ ಸೋನು ಶ್ರೀನಿವಾಸ್‌ ಗೌಡ

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ್ ಗೌಡ ಅವರ ಜನ್ಮದಿನದಂದು ಅವರು ನಟಿಸಿರುವ 'ಕೇಕೆ' ಚಿತ್ರದ 'ಗುಂಟೂರು ಅಮ್ಮಾಯಿ' ಐಟಂ ಗೀತೆ ಬಿಡುಗಡೆಯಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು, ಕಾಲಿಗೆ ಬಿದ್ದಾದರೂ ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರನ್ನುಕರೆತರುತ್ತಿದ್ದೆ ಎಂದು ಭಾವುಕರಾಗಿ ಹೇಳಿದ್ದಾರೆ.

ಜನ್ಮದಿನದಂದು ದರ್ಶನ್‌ರನ್ನು ನೆನೆದ ಸೋನು; ದಾಸನ ಬಗ್ಗೆ ಹೇಳಿದ್ದೇನು?‌

-

Avinash GR
Avinash GR Jun 30, 2026 8:50 PM

ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಅವರ ಜನ್ಮದಿನದ ಪ್ರಯುಕ್ತ, ಅವರು ನಟಿಸಿರುವ 'ಕೇಕೆ' ಸಿನಿಮಾದ 'ಗುಂಟೂರು ಅಮ್ಮಾಯಿ' ಎಂಬ ಐಟಂ ಗೀತೆಯನ್ನು ರಿಲೀಸ್‌ ಮಾಡಲಾಗಿದೆ. ಈ ಗೀತೆಯಲ್ಲಿ ಸೋನು ಅವರು ಆಕರ್ಷಕವಾಗಿ ಹೆಜ್ಜೆ ಹಾಕಿದ್ದು, ಹಾಡಿನ ಬಿಡುಗಡೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ನೆನೆದಿದ್ದಾರೆ.

ದರ್ಶನ್ ಸರ್‌ ಇದ್ದಿದ್ದರೆ ಕಾಲಿಗೆ ಬಿದ್ದಾದರೂ ಕರೆತರುತ್ತಿದ್ದೆ

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಟ ದರ್ಶನ್ ಅವರನ್ನು ನೆನೆದ ಸೋನು ಶ್ರೀನಿವಾಸ್ ಗೌಡ, "ನನಗೆ ದರ್ಶನ್ ಸರ್ ಎಂದರೆ ಅಪಾರ ಗೌರವ ಮತ್ತು ಇಷ್ಟ. ಒಂದು ವೇಳೆ ಅವರು ಹೊರಗಿದ್ದಿದ್ದರೆ, ಕೈ-ಕಾಲು ಹಿಡಿದಾದರೂ ನಮ್ಮ ಚಿತ್ರದ ಈ ಹಾಡಿನ ಬಿಡುಗಡೆ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿ ಕರೆತರುತ್ತಿದ್ದೆ. ದರ್ಶನ್‌ ಅವರನ್ನು ತುಂಬಾ ಜನ ಯೂಸ್‌ ಮಾಡಿಕೊಂಡರು. ಆದರೆ ಕಷ್ಟ ಇದ್ದಾಗ ಯಾರೂ ಬರಲಿಲ್ಲ" ಎಂದು ಹೇಳಿದ್ದಾರೆ.

ಈ ಬಾರಿಯ ಜನ್ಮದಿನ ಅತ್ಯಂತ ವಿಶೇಷ

"ನನ್ನ ಈ ವರ್ಷದ ಹುಟ್ಟುಹಬ್ಬದ ಆಚರಣೆ ತುಂಬಾ ವಿಶಿಷ್ಟವಾಗಿದೆ. ಚಿತ್ರರಂಗದ ಪ್ರಮುಖ ನಿರ್ಮಾಪಕರು ಹಾಗೂ ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಮತ್ತು ಇದೇ ದಿನ ನನ್ನ ನಟನೆಯ ಹಾಡು ಬಿಡುಗಡೆಯಾಗಿರುವುದು ಸಂತಸ ತಂದಿದೆ. ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಹಾಡಿನಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳ ಮಿಶ್ರಣವಿದೆ. ನನಗೆ ತೆಲುಗು ಭಾಷೆ ಬರುವುದರಿಂದ ಮೊದಲ ಬಾರಿ ಕೇಳಿದಾಗಲೇ ಈ ಗೀತೆ ಬಹಳ ಇಷ್ಟವಾಯಿತು. ಹಾಡಿಗೆ ಒಪ್ಪಿಗೆ ನೀಡಿದ ಮರುದಿನವೇ ರಿಹರ್ಸಲ್ ನಡೆಸಿ, ಅದರ ಮರುದಿನವೇ ಚಿತ್ರೀಕರಣ ಮುಗಿಸಿದೆವು. ಕೊನೆಗೂ ನಿಮ್ಮ ಮುಂದೆ 'ಗುಂಟೂರು ಅಮ್ಮಾಯಿ'ಯಾಗಿ ಬರಲು ಹೆಮ್ಮೆಯಾಗುತ್ತಿದೆ" ಎಂದು ಸೋನು ಹೇಳಿದ್ದಾರೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಉತ್ತಮ ಅವಕಾಶಗಳನ್ನು ನಿರಾಕರಿಸುವುದಿಲ್ಲ

"ಕಳೆದ ನಾಲ್ಕು ವರ್ಷಗಳಿಂದ ನಾನು ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್‌ಗಷ್ಟೇ ಸೀಮಿತವಾಗಿದ್ದೆ. ಬೇರೆ ಯಾವುದೇ ಸಿನಿಮಾಗಳನ್ನು ಮಾಡಿರಲಿಲ್ಲ. ಈಗ ಈ ಹಾಡಿನ ಮೂಲಕ ಹೊಸ ಆರಂಭ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬರುವ ಯಾವುದೇ ರೀತಿಯ ಉತ್ತಮ ಅವಕಾಶಗಳನ್ನು ನಾನು ನಿರಾಕರಿಸುವುದಿಲ್ಲ. ಪಾತ್ರ ಎಂತಹುದೇ ಇರಲಿ, ನನ್ನ ಕೈಲಾದಷ್ಟು ಅದಕ್ಕೆ ಜೀವ ತುಂಬಲು ಶ್ರಮಿಸುತ್ತೇನೆ" ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.

ʻಕೇಕೆʼ ಚಿತ್ರದ ʻಗುಂಟೂರು ಅಮ್ಮಾಯಿʼ ಐಟಂ ಸಾಂಗ್‌ನಲ್ಲಿ ಸೋನು ಶ್ರೀನಿವಾಸ್‌ ಗೌಡ ಭರ್ಜರಿ ಸ್ಟೆಪ್‌; ಹುಟ್ಟುಹಬ್ಬಕ್ಕೆ ಸಖತ್‌ ಗಿಫ್ಟ್‌

ಟೀಕೆ ಮಾಡುವವರಿಗೆ ನನ್ನದೇ ಶೈಲಿಯಲ್ಲಿ ಉತ್ತರಿಸುತ್ತೇನೆ

ಜಾಲತಾಣಗಳಲ್ಲಿ ಬರುವ ಟೀಕೆಗಳ ಕುರಿತು ಮಾತನಾಡಿದ ಅವರು, "ನನ್ನ ವಿರುದ್ಧ ಬರುವ ನಕಾರಾತ್ಮಕ ಕಾಮೆಂಟ್‌ಗಳನ್ನು ನಾನು ನಿರ್ಲಕ್ಷಿಸುವುದಿಲ್ಲ. ಬದಲಿಗೆ ಅವುಗಳನ್ನು ಎಲ್ಲರಿಗೂ ಕಾಣುವಂತೆ 'ಪಿನ್' ಮಾಡಿ ಇಡುತ್ತೇನೆ. ಅವರ ಮನಸ್ಸಿನಲ್ಲಿ ಎಂತಹ ಕೆಟ್ಟ ಆಲೋಚನೆಗಳಿವೆ ಎಂಬುದನ್ನು ಜಗತ್ತು ನೋಡಲಿ ಎಂಬುದು ನನ್ನ ಆಶಯ. ಆ ನಂತರವೇ ನಾನು ಅವರಿಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತೇನೆ. ಜಗತ್ತಿನಲ್ಲಿ ಮನುಷ್ಯ ಯಾವಾಗಲೂ ಕೇವಲ ಒಳ್ಳೆಯವನಂತೆ ನಟಿಸಿದರೆ ಅದು ನಾಟಕೀಯ ಎನಿಸುತ್ತದೆ. ಜೀವನ ಅಂದಮೇಲೆ ಪಾಸಿಟಿವ್‌ ಮತ್ತು ನೆಗೆಟಿವ್‌ ಎರಡೂ ಮುಖಗಳು ಇರಬೇಕು" ಎಂದಿದ್ದಾರೆ.

ಐಟಂ ಹಾಡಿನ ಬಗ್ಗೆ ಸೋನು ಮಾತು

"ಕೇವಲ ಐಟಂ ಹಾಡಿನಲ್ಲಿ ನಟಿಸಿದ ತಕ್ಷಣ ನೆಗೆಟಿವ್ ಆಗುತ್ತಾರೆ ಅಥವಾ ನಾಯಕಿಯಾದರೆ ಮಾತ್ರ ಪಾಸಿಟಿವ್ ಆಗುತ್ತಾರೆ ಎಂದುಕೊಳ್ಳುವುದು ಮೂರ್ಖತನ. ಚಿತ್ರರಂಗದಲ್ಲಿ ಕೇವಲ ಒಂದು ಹಾಡಿಗಾಗಿಯೇ ಇಡೀ ಸಿನಿಮಾ ನೋಡುವ ಪ್ರೇಕ್ಷಕರು ಇದ್ದಾರೆ" ಎಂದು ಹೇಳಿದ್ದಾರೆ.