ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಅಶ್ವಿನಿ ಗೌಡ (Ashwini Gowda) ಹಾಗೂ ಜಾಹ್ನವಿ (jhanvi bigg boss) ಅವರು ಒಂದಲ್ಲ ಒಂದು ಕಿತಾಪತಿ ಮಾಡುತ್ತಲೇ ಇರ್ತಾರೆ. ಇವರಿಬ್ಬರ ಟೀಂಗೆ ಧ್ರುವಂತ್ (Dhruvanth) ಕೂಡ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅಶ್ವಿನಿ-ಜಾಹ್ನವಿ ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದಾರೆ. ದೂರದಲ್ಲಿ ರಘು ಹಾಗೂ ಗಿಲ್ಲಿ (Raghu and Gilli) ನಿಂತು ನೋಡಿ ನಕ್ಕಿದ್ದಾರೆ.
ಅಶ್ವಿನಿ-ಜಾನ್ವಿಗೆ ದೃಷ್ಟಿಯಾಗಿದೆಯಂತೆ!
ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದಾರೆ. ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್ ಬಾಸ್ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದಾರೆ. ಜಾಹ್ನವಿ ಅವರು ಅಶ್ವಿನಿ ಅವರಿಗೆ ದೃಷ್ಟಿ ತೆಗೆಯುತ್ತಾ, ಗಿಲ್ಲಿ ಕಣ್ಣು, ರಘು ಕಣ್ಣು, ರಾಶಿಕಾ, ರಿಷಾ ಕಣ್ಣು , ಬಿಗ್ ಬಾಸ್ ಮನೆಯವರ ಎಲ್ಲ ಕಣ್ಣು ಹೋಗಲಿ ಅಂತ ದೃಷ್ಟಿ ತೆಗೆದಿದ್ದಾರೆ . ಇದೀಗ ಈ ವಿಡಿಯೋಗೆ ತರಹೇವಾರಿ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ: Bigg Boss Kannada 12: ಅತ್ಯಂತ ಕಠಿಣ ಶಿಕ್ಷೆ ಕೊಡಿಸಿದ ಗಿಲ್ಲಿ; ಬಸ್ಕಿ ಹೊಡೆದ ಅಶ್ವಿನಿ ಗೌಡ
ಈಗ ಬಿಗ್ ಬಾಸ್ ಶೋನಲ್ಲಿ 50 ದಿನಗಳ ಕಳೆದಿವೆ. ಈಗಾಗಲೇ ಹಲವರು ಎಲಿಮಿನೇಟ್ ಆಗಿದ್ದಾರೆ. ಯೋಗ್ಯತೆ ಇಲ್ಲದವರು ಒಬ್ಬೊಬ್ಬರಾಗಿಯೇ ಎಲಿಮಿನೇಟ್. ಸದ್ಯಕ್ಕೆ ಯೋಗ್ಯತೆ ಇಲ್ಲದಿದ್ದರೂ ಬಿಗ್ ಬಾಸ್ ಒಳಗೆ ಉಳಿದುಕೊಂಡಿರುವ ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಲು ಸೂಚಿಸಲಾಗಿದೆ. ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಮುಂತಾದವರ ಹೆಸರುಗಳು ಬಂದಿವೆ.
ವಿಭಿನ್ನವಾಗಿ ನಾಮಿನೇಷನ್
ಈ ಬಾರಿ ವಿಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ನಡೆಸುತ್ತಿದ್ದಾರೆ. ಯೋಗ್ಯತೆ ಇಲ್ಲದದವರು ʻಬಿಗ್ ಬಾಸ್ʼ ಮನೆಯಲ್ಲಿ ಇರುವುದು ಅಪರಾಧ. ಅಂತಹ ಯೋಗ್ಯತೆ ಇಲ್ಲದವರನ್ನು ಈ ಮನೆಯಿಂದ ಹೊರಕಳಿಸಲು ನಾಮಿನೇಟ್ ಮಾಡಿ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಅಂತೆಯೇ ಸ್ಪರ್ಧಿಗಳು ಇಬ್ಬಿಬ್ಬರನ್ನು ನಾಮಿನೇಟ್ ಮಾಡಿದ್ದಾರೆ.ಮಾಳು ನಿಪನಾಳ್ ಮತ್ತು ಅಭಿಷೇಕ್ ಶ್ರೀಕಾಂತ್ ಅವರನ್ನು ಧ್ರುವಂತ್ ನಾಮಿನೇಟ್ ಮಾಡಿದ್ದಾರೆ. ರಿಷಾ ಗೌಡ ಕೂಡ ಮಾಳು ಅವರನ್ನೇ ನಾಮಿನೇಟ್ ಮಾಡಿದರೆ, ಸ್ಪಂದನಾ ಅವರನ್ನು ನಾಮಿನೇಟ್ ಮಾಡಿದ್ದಾರೆ ಅಶ್ವಿನಿ ಗೌಡ.ರಕ್ಷಿತಾ ಶೆಟ್ಟಿ ಅವರನ್ನು ನಾಮಿನೇಟ್ ಮಾಡಿರುವ ಧನುಷ್, "ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ" ಎಂದು ಕಾರಣ ನೀಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?
ಇನ್ನು, ರಾಶಿಕಾ ಶೆಟ್ಟಿ ನಾಮಿನೇಟ್ ಮಾಡಿರುವುದು ಸ್ಪಂದನಾ ಸೋಮಣ್ಣ. "ನಾನು ಎಲ್ಲ ಆಟವನ್ನು ಆಡಬಲ್ಲೆ ಎಂಬ ಅವಳ ಅಹಂಕಾರ, ಅವಳ ಆಟವನ್ನೇ ಕೆಡಿಸುತ್ತಿದೆ. ಎಲ್ಲೋ ಒಂದು ಕಡೆ, ಒಬ್ಬರ ಬಳಿ ಮಾತ್ರ ತನ್ನ ಅಭಿಪ್ರಾಯವನ್ನು ಹೇಳಿಕೊಳ್ಳುವುದಕ್ಕೆ ಅವಳು ಸೀಮಿತ ಆಗಿದ್ದಾಳೆ ಎಂದು ನನಗೆ ಅನ್ನಿಸುತ್ತಿದೆ" ಎಂದು ಸ್ಪಂದನಾ ಹೇಳಿದ್ದಾರೆ.