ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಈ ವಾರದ ಕ್ಯಾಪ್ಟನ್ ಮಾಳು! ಗಿಲ್ಲಿಗೆ ಕಳಪೆ ಕೊಟ್ಟಿದ್ದಕ್ಕೆ ವೀಕ್ಷಕರು ಗರಂ

ಗಿಲ್ಲಿ ಈ ವಾರ ಕಳಪೆ ಆದರೆ, ಚಂದ್ರಪ್ರಭ (Chandraprabha) ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಗಿಲ್ಲಿ (Gilli) ನಟನಿಗೆ ಕಳಪೆ (Kalape) ಪಟ್ಟ ಸಿಕ್ಕ ಖುಷಿಯಲ್ಲಿದ್ದಾರೆ ʻಬಿಗ್‌ʼ ಸ್ಪರ್ಧಿಗಳು. ಆದರೆ ವೀಕ್ಷಕರು ಈ ಬಗ್ಗೆ ಭಾರೀ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಗಿಲ್ಲಿ ಕಳಪೆ ಅನೌನ್ಸ್‌ ಆದ ಬೆನ್ನಲ್ಲೇ ನೆಟ್ಟಿಗರು ಈ ರೀತಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವಾರ ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ರಘು, ರಿಷಾ ಗೌಡ, ಮಾಳು ನಿಪನಾಳ್, ಕಾವ್ಯ ಶೈವ ಇವರೆಲ್ಲಾ ಕ್ಯಾಪ್ಟನ್ಸಿ ಓಟದಲ್ಲಿದ್ದರು.

bigg boss kannada

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಮಾಳು (Malu) ಅವರು ಮೂರನೇ ಕ್ಯಾಪ್ಟನ್‌ (Captain) ಆಗಿ ಹೊರ ಹೊಮ್ಮಿದ್ದಾರೆ. ಇನ್ನು ಗಿಲ್ಲಿ ಈ ವಾರ ಕಳಪೆ ಆದರೆ, ಚಂದ್ರಪ್ರಭ (Chandraprabha) ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಗಿಲ್ಲಿ (Gilli) ನಟನಿಗೆ ಕಳಪೆ (Kalape) ಪಟ್ಟ ಸಿಕ್ಕ ಖುಷಿಯಲ್ಲಿದ್ದಾರೆ ʻಬಿಗ್‌ʼ ಸ್ಪರ್ಧಿಗಳು. ಆದರೆ ವೀಕ್ಷಕರು ಈ ಬಗ್ಗೆ ಭಾರೀ ಅಸಮಾಧಾನವನ್ನ ಹೊರ ಹಾಕಿದ್ದಾರೆ.

ಗಿಲ್ಲಿ ಕಳಪೆ

ಗಿಲ್ಲಿ ಕಳಪೆ ಅನೌನ್ಸ್‌ ಆದ ಬೆನ್ನಲ್ಲೇ ನೆಟ್ಟಿಗರು ಈ ರೀತಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಿಗ್‌ ಬಾಸ್‌ ನೋಡ್ತಾ ಇರೋದು ಗಿಲ್ಲಿ ಹಾಗೂ ಕಾವ್ಯಳಿಂದ. ಅವರಿಬ್ಬರ ತಮಾಷೆಯ ಕಚಗುಳಿಗಾಗಿ. ಆದರೆ ಶುಕ್ರವಾರ ಎಪಿಸೋಡ್‌ನಲ್ಲಿ ಏನೂ ಅರ್ಥವೇ ಆಗದ ಚಂದ್ರಪ್ರಭ ಅವರಿಗೆ ಉತ್ತಮ ಅಂತ ಕೊಟ್ಟಿದ್ದಾರೆ. ಆದರೆ ಕಳಪೆ ಸುಧಿ ಅವರ ಕಡೆ ಹೋಗಿತ್ತು.

ಆದರೆ ಎಲ್ಲಿ ಹೆಚ್ಚು ನಂಗೇ ವೋಟ್‌ ಬರುತ್ತೆ ಅಂತ ಅಶ್ವಿನಿ, ಜಾಹ್ನವಿ ಎಲ್ಲರೂ ಕಣ್ಣೋಟದ ಲೆಕ್ಕಾಚಾರ ಮಾಡಿ ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mark Teaser: 'ಮಾರ್ಕ್‌'ಗೆ ಉಘೇ ಉಘೇ ಅಂದ್ರು ಫ್ಯಾನ್ಸ್‌! ಟೀಸರ್‌ನಲ್ಲಿ ಕಿಚ್ಚನ ರೌದ್ರಾವತಾರ

ಮಾಳು ನಿಪನಾಳ ಕ್ಯಾಪ್ಟನ್‌

ಈ ವಾರ ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ರಘು, ರಿಷಾ ಗೌಡ, ಮಾಳು ನಿಪನಾಳ್, ಕಾವ್ಯ ಶೈವ ಇವರೆಲ್ಲಾ ಕ್ಯಾಪ್ಟನ್ಸಿ ಓಟದಲ್ಲಿದ್ದರು. ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆ ಮಾಡುವ ಅಧಿಕಾರವನ್ನ ʻಬಿಗ್‌ ಬಾಸ್‌ʼ ವೀಕ್ಷಕರಿಗೆ ನೀಡಿದ್ದರು. ಜನರ ವೋಟ್‌ನ ಪ್ರಕಾರ ಈ ವಾರ ಮಾಳು ನಿಪನಾಳ ʻಬಿಗ್‌ ಬಾಸ್‌ʼ ಮನೆಯ ಕ್ಯಾಪ್ಟನ್‌ ಆಗಿದ್ದಾರೆ.



ಬೆಳಗ್ಗೆಯೇ ಗಿಲ್ಲಿಗೆ ಕಳಪೆ ಕೊಡಬೇಕು ಅಂತ ಡಿಸೈಡ್‌

ಇನ್ನು ಮನೆಯಲ್ಲಿ ಬೆಳಗ್ಗೆಯಿಂದಲೇ ಗಿಲ್ಲಿಗೆ ಕಳಪೆ ಕೊಡಬೇಕು ಎನ್ನುವ ಚರ್ಚೆ ಆಗುತ್ತಲೇ ಇತ್ತು. ಕಳಪೆಯನ್ನು ಬೆಳಿಗ್ಗೆಯಿಂದಲೇ ಯೋಜಿಸಲಾಗಿತ್ತು

ವ್ಯಕ್ತಿತ್ವ ವಾರ ಎಂದು ಹೆಸರಿಸಲಾಗಿದ್ದರಿಂದ, ಗಿಲ್ಲಿ ಪತ್ರವನ್ನು ಕಳೆದುಕೊಂಡರು. ಇವೆಲ್ಲದರ ಜೊತೆಗೆ ಮನೆಯನ್ನ ಎಂದಿನಂತೆ ಸಖತ್‌ ಎಂಟರ್‌ಟೈನಿಂಗ್‌ ಆಗಿ ಇಟ್ಟುಕೊಂಡಿದ್ದರು. ಆದರೂ, ಗಿಲ್ಲಿಗೆ ಕಳಪೆ ಸಿಕ್ಕಿದ್ದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಗೆ ಹಾಕಿದ್ದಾರೆ.

ಇದನ್ನೂ ಓದಿ: BBK 12: ಹಾಕೋ ಬನಿಯನ್‌ ಕೂಡ ಕಂಡವರದ್ದೇ, ಎಲ್ಲರನ್ನ ಗಿಲ್ಲಿ ತುಳಿತಿದ್ರು; ಡಾಗ್‌ ಸತೀಶ್‌ ಆರೋಪ



ಗಿಲ್ಲಿಯೇ ಉತ್ತಮ!

ಇನ್ನು ರಿಷಾ ಅವರಿಗೂ ಗಿಲ್ಲಿ ಬೇಕಾಗಿದೆ. ಕಾವ್ಯ ದೂರ ದೂರ ಆಗೋದಿಲ್ಲ ಎಂಬುದೇ ರಿಷಾ ಅವರಿಗೆ ಬೇಸರ ಅನ್ನೋ ಅಭಿಪ್ರಾಯ ಕೂಡ ನೆಟ್ಟಿಗರದ್ದು. ಸದ್ಯ ಮಾಳು ಮನೆಯಲ್ಲಿ ಕ್ಯಾಪ್ಟನ್‌ ಆಗಿ, ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ಕಳಪೆ ಕೊಟ್ಟಿರೋದು ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೆನ್ಷೇಷನ್‌ ಸುದ್ದಿ ಆಗಿದೆ. ಹಾಗೇ ಗಿಲ್ಲಿನೇ ನಮಗೆ ಸದಾ ಉತ್ತಮ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

Yashaswi Devadiga

View all posts by this author