ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

Gilli Nata: ಬಿಗ್‌ ಬಾಸ್‌ ಈ ಸೀಸನ್‌ನಲ್ಲಿ ಕ್ಯಾಪ್ಟನ್‌ ರೂಂನ್‌ ಅತಿ ಹೆಚ್ಚು ರೂಲ್ಸ್‌ ಬ್ರೇಕ್‌ ಮಾಡಿದ್ದು ಅಂದ್ರೆ ಗಿಲ್ಲಿ ನಟ . ಮೊದಲಿಂದಲೂ ಯಾರೆ ಕ್ಯಾಪ್ಟನ್‌ ಆದರೂ ವೈಸ್‌ ಕ್ಯಾಪ್ಟನ್‌ ಅಂತ ಗಿಲ್ಲಿ ರೂಮ್‌ ಒಳಗೆ ಹೋಗಿದ್ದು ಇದೆ. ಸ್ಪರ್ಧಿಗಳು ಕೂಡ ಎಷ್ಟೋ ಬಾರಿ ವಾರ್ನ್‌ ಮಾಡಿದ್ದರೂ ಗಿಲ್ಲಿ ಕೇಳ್ತಾ ಇರಲಿಲ್ಲ. ಆದರೆ ಸ್ಪಂದನಾ, ಅಭಿ ಕ್ಯಾಪ್ಟನ್‌ ಆದ ಬಳಿಕ ಗಿಲ್ಲಿ ಅತಿಯಾಗಿಯೇ ವರ್ತಿಸಿದ್ದರು. ತುಂಬಾ ಹೊತ್ತು ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತು, ಬೆಡ್‌ನಲ್ಲಿ ಮಲಗಿಯೂ ಇದ್ದರು.

ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 6, 2025 6:53 PM

ಬಿಗ್‌ ಬಾಸ್‌ ಈ ಸೀಸನ್‌ನಲ್ಲಿ (Bigg Boss Kannada 12) ಕ್ಯಾಪ್ಟನ್‌ ರೂಮನ್‌ ಅತಿ ಹೆಚ್ಚು ರೂಲ್ಸ್‌ ಬ್ರೇಕ್‌ ಮಾಡಿದ್ದು ಅಂದ್ರೆ ಗಿಲ್ಲಿ ನಟ (Gilli Nata). ಮೊದಲಿಂದಲೂ ಯಾರೆ ಕ್ಯಾಪ್ಟನ್‌ ಆದರೂ ವೈಸ್‌ ಕ್ಯಾಪ್ಟನ್‌ ಅಂತ ಗಿಲ್ಲಿ ರೂಮ್‌ ಒಳಗೆ ಹೋಗಿದ್ದು ಇದೆ. ಸ್ಪರ್ಧಿಗಳು ಕೂಡ ಎಷ್ಟೋ ಬಾರಿ ವಾರ್ನ್‌ ಮಾಡಿದ್ದರೂ ಗಿಲ್ಲಿ ಕೇಳ್ತಾ ಇರಲಿಲ್ಲ. ಆದರೆ ಸ್ಪಂದನಾ (Spandana) ಅಭಿ ಕ್ಯಾಪ್ಟನ್‌ (Captain) ಆದ ಬಳಿಕ ಗಿಲ್ಲಿ ಅತಿಯಾಗಿಯೇ ವರ್ತಿಸಿದ್ದರು. ತುಂಬಾ ಹೊತ್ತು ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತು, ಬೆಡ್‌ನಲ್ಲಿ ಮಲಗಿಯೂ ಇದ್ದರು. ಇದೀಗ ಈ ಬಗ್ಗೆ ಕಿಚ್ಚ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಕ್ಯಾಪ್ಟನ್‌ ರೂಮ್‌ ಲಾಕ್‌ (Room Lock) ಮಾಡಿಸಿದ್ದಾರೆ.

ಕಿಚ್ಚನ ಕ್ಲಾಸ್‌

ಕ್ಯಾಪ್ಟನ್‌ಗೂ ಮರ್ಯಾದೆ ಇಲ್ಲ. ಕ್ಯಾಪ್ಟಮ್‌ ರೂಮ್‌ಗಂತೂ ಇನ್ನೂ ಮರ್ಯಾದೆ ಇಲ್ಲ. ಈ ಸಲ ಅಂತೂ ಒಂದು ಮಟ್ಟಕ್ಕೇ ಮೇಲೆ ಹೋಗಿ ಮಲಗಿಕೊಂಡೇ ಬಿಟ್ರಿ. ಕ್ಯಾಪ್ಟನ್‌ ರೂಂನಲ್ಲಿ ಇರೋ ರೋ ಆಗಿರಲಿ. ಅಲ್ಲಿ ಇರೋ ಸೌಕರ್ಯ ಆಗಿರಲಿ ಅದಕ್ಕೊಂದು ಬೆಲೆ ಇದೆ.

ಇದನ್ನೂ ಓದಿ:

ಕೊಟ್ಟಿರೋ ರೂಂ ಬಗ್ಗೆ ನಿಮಗೇ ಕೇರ್‌ಲೆಸ್‌ ಇರಬೇಕಾದರೆ, ರೂಲ್ಸ್‌ ಫಾಲೋ ಹೇಗೆ ಆಗತ್ತೆ ಅಂತ ಕೇಳಿದ್ದಾರೆ ಕಿಚ್ಚ. ಇಷ್ಟೂ ಸೀಸನ್‌ಗಳಲ್ಲಿ ಒಂದು ಸಲ ನಡೆದಿತ್ತು. ಈಗ ಮತ್ತೆ ಅದೇ ಘಟನೆ ನಡೆದಿದೆ. ಆ ರೂಂಗೆ ಬೀಗ ಬೀಳತ್ತೆ ಈಗ ಎಂದಿದ್ದಾರೆ ಕಿಚ್ಚ.

ಇದೀಗ ನೆಟ್ಟಿಗರು ಅತಿಥಿಗಳು ಬಂದು ಕ್ಯಾಪ್ಟನ್ ರೂಮ್ ಬೇಕು ಅಂದ್ರು. ಒಂದು ವಾರಗಳ ಕಾಲ ಅತಿಥಿಗಳು ಕ್ಯಾಪ್ಟನ್ ರೂಮ್ ಯೂಸ್ ಮಾಡಿದ್ರು ಅದನ್ನು ಯಾಕೇ ಕೇಳಲಿಲ್ಲ. ಗಿಲ್ಲಿ ತಪ್ಪು ಮಾಡಿದಾಗಲೇ ಆಗಲೇ ಹೇಳಬಹುದಿತ್ತು ಅಂತ ಕಮೆಂಟ್‌ ಮಾಡಿದ್ದಾರೆ.

ಕಲರ್ಸ್‌ ಕನ್ನಡ ಪ್ರೋಮೋ

ಧ್ರುವಂತ್‌ ವಿಚಾರವಾಗಿಯೂ ಚರ್ಚೆ

ಕಿಚ್ಚನ ಪಂಚಾಯಿತಿಯಲ್ಲಿ ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್‌ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್‌ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್‌ ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್‌ ಬಿಗ್‌ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್‌ ಹಾಗೂ ಧ್ರುವಂತ್‌ ಸುದೀಪ್‌ ಮುಂದೆ ಕಿರುಚಾಡಿದ್ದಾರೆ. ವೀಕ್ಷಕರೇ ಸ್ಪರ್ಧಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನ ಕಿಚ್ಚ ಸುದೀಪ್‌ ಅವರ ಎಲ್ಲರ ಮುಂದೆಯೇ ಓದಿಸಿದರು. ಧ್ರುವಂತ್‌ಗೆ ಒಬ್ಬರು ಪತ್ರ ಬರೆದಿದ್ದು ಹೀಗೆ.

ಧ್ರುವಂತ್‌ ಉತ್ತರ

ಧ್ರುವಂತ್‌ ಅವರೇ ಮನೆ ಬಿಟ್ಟು ಹೋಗುವಂತದ್ದು ಏನಾಯ್ತು? ಅಂತ ವೀಕ್ಷರೊಬ್ಬರು ಬರೆದಿದ್ದರು. ಅದಕ್ಕೆ ಧ್ರುವಂತ್‌ ಉತ್ತರ ನೀಡಿ, ʻನಾವು ಕೆಲವೊಂದು ಬ್ಲೇಮ್ಸ್‌ಗಳನ್ನ ನಿರಂತರವಾಗಿ ತೆಗೆದುಕೊಳ್ಳಬೇಕಾಯ್ತು. ಡ್ಯಾಮೇಜ್‌ ಕೂಡ ಬೇಕಾ ಅಂತ ಅನ್ನಿಸಿತ್ತುʼ ಎಂದು ಹೇಳಿದ್ದಾರೆ. ಅದಕ್ಕೆ ರಜತ್‌ ಇದ್ದವರು,ʻ ಡ್ಯಾಮೇಜ್‌ ಮಾಡಿಕೊಳ್ಳುತ್ತಿರುವುದೇ ಧ್ರುವಂತ್.‌ ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ನಡೆದುಕೊಳ್ಳೋದುʼ ಎಂದರು.

ಇದನ್ನೂ ಓದಿ: Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್‌ ಮುಂದೆಯೇ 'ಧ್ರುವಂತ್-ರಜತ್' ವಾದ

ಇದು ಧ್ರುವಂತ್‌ಗೆ ಕೋಪ ತರಿಸಿದೆ. ʻಈಗ ನಾನು ಮಾತಾಡೋದು ತಡ್ಕೋʼ ಅಂತ ಕಿಚ್ಚನ ಮುಂದೆಯೇ ಧ್ರುವಂತ್‌ಗೆ ಹೇಳಿದ್ದಾರೆ. ಧ್ರುವಂತ್‌ ಇದ್ದವರು, ʻನೀನೇ ತಡ್ಕೋ, ಎಷ್ಟರಲ್ಲಿ ಇರಬೇಕು. ಅಷ್ಟರಲ್ಲಿ ಇರುʼ ಅಂತ ಧ್ರುವಂತ್‌ ಅವಾಜ್‌ ಹಾಕಿದ್ದಾರೆ.