ಈ ವಾರ (Bigg Boss Kannada 12) ಸುದೀಪ್ ಅವರು ಟಾಸ್ಕ್ ನೀಡದೇ ಎಲ್ಲ ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ (Nominate) ಮಾಡಿದ್ದರು. ಇಲ್ಲಿ ಎಲ್ಲರಿಗೂ ವ್ಯಕ್ತಿತ್ವದ ಸಮಸ್ಯೆ ಇದೆ. ಅದನ್ನ ಈ ವಾರ ಪ್ರೂವ್ ಮಾಡಿಕೊಳ್ಳಿ ಎಂದು ಹೇಳಿದ್ದರು. ಅದರಂತೆ ಈ ವಾರ ಸ್ಪರ್ಧಿಗಳು ಆಡಿದ್ದಾರೆ. ಇವತ್ತಿನ (Bigg Boss Kannada 12) ಕಿಂಚನ ಪಂಚಾಯ್ತಿ (Kichchana Panchayti) ನಡೆಯುತ್ತಿರುವಾಗಲೇ ಚಂದ್ರಪ್ರಭ (Chandraprabha) ಮನೆಯಿಂದ ಆಚೆ ಬರುವಂತಿದೆ.
ಇದೀಗ ಹೊಸ ಪ್ರೋಮೋ (Elimination) ಔಟ್ ಆಗಿದೆ. ಮೊದಲಿಗೆ ಸ್ಪರ್ಧಿಗಳಿಗೆ ಅವರ ವ್ಯಕ್ತಿತ್ವ ತಕ್ಕಂತೆ ಬೋರ್ಡ್‌ವನ್ನು ನೀಡಬೇಕು. ಅದರಲ್ಲಿ ಗಿಲ್ಲಿ ಅವರಿಗೆ ತರಹೇವಾರಿ ಟ್ಯಾಗ್ ಬೋರ್ಡ್ ನೀಡಿದ್ದಾರೆ.
ಚಂದ್ರಪ್ರಭ ಊಸರವಳ್ಳಿ !
ಸೊಕ್ಕು ಅನ್ನೋ ಬೋರ್ಡ್‌ವನ್ನು ಅಶ್ವಿನಿ ಅವರಿಗೆ ಸ್ಪಂದನಾ ನೀಡಿದರು. ಅತಿರೇಕ ಬೋರ್ಡ್‌ವನ್ನು ಗಿಲ್ಲಿಗೆ ಧ್ರುವಂತ್ ನೀಡಿದರೆ, ರಾಶಿಕಾ ಅರ್ಥಹೀನ ಬೋರ್ಡ್‌ವನ್ನು ಗಿಲ್ಲಿ ಅವರಿಗೆ ನೀಡಿದರು.
ಇನ್ನು ಚಂದ್ರಪ್ರಭ ಅವರಿಗೆ ಧನುಷ್ ಅವರು ಊಸರವಳ್ಳಿ ಬೋರ್ಡ್ ನೀಡಿದ್ದಾರೆ. ಬೇರೆ ತರಹವೇ ಕಾರಣವನ್ನು ಬೇರೆಯವರಿಗೆ ನೀಡುತ್ತಾರೆ ಎಂದರು. ಇದಾದ ಬಳಿಕ ಕಣ್ಣೀರಿಡುತ್ತಾ ಚಂದ್ರಪ್ರಭ ಅವರು ಮನೆಯಿಂದ ಆಚೆ ಹೋಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯ ಡೋರ್ ಕೂಡ ಓಪನ್ ಆಗಿದೆ. ಚಂದ್ರಪ್ರಭ ಅವರ ಈ ನಡೆಗೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಾವ್ಯಾ -ಗಿಲ್ಲಿ ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದ ಚಂದ್ರಪ್ರಭಗೆ ಸುದೀಪ್ ಖಡಕ್ ಕ್ಲಾಸ್
ಈ ವಾರದ ಆರಂಭದಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಅವರು ಹಲ್ಲೆ ಮಾಡಿದ್ದರು. ಸಾಮಾನ್ಯವಾಗಿ ಹಲ್ಲೆ ಮಾಡಿದ ತಕ್ಷಣ ಅವರನ್ನು ಮನೆಯಿಂದ ಕಳುಹಿಸಲಾಗುತ್ತದೆ. ಆದರೆ, ಹಲ್ಲೆ ನಡೆದ ದಿನ ಅವರನ್ನು ಮನೆಯಿಂದ ಕಳುಹಿಸಿರಲಿಲ್ಲ. ಇಂದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ.
ಸ್ಪರ್ಧಿಗಳು ವೋಟ್ ಮಾಡಿದ ಆಧಾರದ ಮೇಲೆ ರಿಷಾ ಹಣೆಬರಹ
ಸುದೀಪ್ ಮಾತನಾಡಿ, ʻಒಬ್ಬರ ಮೇಲೆ ಕೈ ಎತ್ತಿದ್ರೆ ಬಿಗ್ ಬಾಸ್ ಮನೆಯಲ್ಲಿ ಅದು ಒಪ್ಪಿಗೆ ಇಲ್ಲ. ದೇವರು ಕೊಟ್ಟ ಕೈಗಳನ್ನ ಒಳ್ಳೆಯದಕ್ಕೆ ಅಥವಾ ಗೆಲ್ಲೋದಕ್ಕೆ ಬಳಿಸಿಕೊಳ್ಳಬೇಕು. ಒಬ್ಬ ಹುಡುಗ ಇದೇ ಥರ ಹುಡುಗಿ ಹೊಡೆದಿದ್ರೆ, ಏನೇನಾಗಿರೋದು. ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಇದೆಲ್ಲ ನಡೆ ಕೂಡದು. ಅದಕ್ಕೆ ಶಂಕುಸ್ಥಾಪನೆ ಈಗ.
ಈಗ ಸ್ಪರ್ಧಿಗಳ ಮುಂದೆ ಹಳದಿ ಮತ್ತು ಕೆಂಪು ಕಾರ್ಡ್ ಇದೆ. ಹಳದಿ ಕೊಟ್ಟು ವಾರ್ನ್ ಕೊಡುತ್ತೀರೋ ಅಥವಾ, ರೆಡ್ ಕಾರ್ಡ್ ಕೊಟ್ಟು ಮನೆಯಿಂದ ಹೊರಗೆ ಹಾಕುತ್ತೀರೋ ಅನ್ನೋ ನಿರ್ಧಾರ ಸ್ಪರ್ಧಿಗಳದ್ದು ಎಂದರು ಕಿಚ್ಚ. ಹೀಗಾಗಿ ಇಂದು ರಿಷಾ ಅವರು ಮನೆಯಿಂದ ಔಟ್ ಆಗ್ತಾರೋ ಅಥವಾ ಬಚಾವ್ ಆಗ್ತೋರೋ ಎನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಚಂದ್ರಪ್ರಭಗೆ ಸುದೀಪ್ ಖಡಕ್ ಕ್ಲಾಸ್
ಇನ್ನು ನಿನ್ನೆಯ ಬಿಗ್ ಬಾಸ್ ಸಂಚಿಕೆಯಲ್ಲಿ ಚಂದ್ರಪ್ರಭ ಅವರಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಚಂದ್ರಪ್ರಭ ಅವರು ಮನೆಯಲ್ಲಿ ಗಿಲ್ಲಿ ನಟ, ಕಾವ್ಯ ಶೈವ (Kavya Shaiva) ಅವರ ಸ್ನೇಹವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು.
ಸುದೀಪ್ ಅವರು ಮಾತನಾಡಿ, ನಡೆ ಹೇಗೆ ಇರುತ್ತೋ ನುಡಿಯೂ ಹಾಗೇ ಇರಬೇಕು ಎಂದು ಬುದ್ದಿವಾದ ಹೇಳಿದ್ದಾರೆ. ರಿಷಾ ಜೊತೆ ಚಂದ್ರಪ್ರಭ ಇರೋ ವಿಡಿಯೋ ಪ್ಲೇ ಮಾಡಿಸಿ ವಾರ್ನ್ ಜೊತೆ ಅರಿವು ಮೂಡಿಸಿದ್ದಾರೆ. ಆ ಬಳಿಕ ಚಂದ್ರಪ್ರಭ ಅವರು ಕ್ಷಮೆ ಕೇಳಿದರು.
ಸುದೀಪ್ ಹೇಳಿದ್ದೇನು?
ಚಂದ್ರಪ್ರಭ ಅವರೇ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಗೌರವ ಇದೆ. ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮನುಷ್ಯನಿಗೆ ನಡೆ ನುಡಿ ತುಂಬಾ ಮುಖ್ಯ. ನಮ್ಮ ನಡೆ ಹೇಗೆ ಇರುತ್ತೋ ಹಾಗೇ ನುಡಿಯಲ್ಲಿ ಇರಬೇಕು ಎಂದು ಅವರು ಹಾಗೂ ರಿಷಾ ಇರೋ ವಿಟಿಯನ್ನ ತೋರಿಸಿದ್ದಾರೆ.
ಇದನ್ನೂ ಓದಿ: Bigg Boss Kannada: ಗಿಲ್ಲಿಗೆ ಹೊಡೆದ ರಿಷಾ ಔಟ್ ಆಗೋದು ಫಿಕ್ಸ್? ಮನೆಮಂದಿ ನಿರ್ಧಾರ ಏನು?
ಇದಾದ ಬಳಿಕ ಸುದೀಪ್ ಅವರು ‘ತಂಗಿ ಎಂದು ಕರೆಯುವ ನೀವು ಈ ರೀತಿಯ ವಿಚಾರಗಳನ್ನು ವೈಯಕ್ತಿಕವಾಗಿ ಕರೆದು ಹೇಳಬೇಕು. ನನ್ನ ತಂಗಿ ಆಗಿದ್ದರೆ ನಾನು ಎಲ್ಲರ ಮುಂದೆ ಬಹಿರಂಗವಾಗಿ ಈ ಬಗ್ಗೆ ಹೇಳ್ತಾ ಇರಲಿಲ್ಲ’ ಎಂದರು. ಆ ಬಳಿಕ ಚಂದ್ರಪ್ರಭ ಅವರು ಕ್ಷಮೆ ಕೇಳಿದರು.