ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಕುಚಿಕು ಅಂತಿದ್ದ ರಘು ಹಾಗೂ ಗಿಲ್ಲಿ (Raghu Nad Gilli) ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟ ಆಗುತ್ತಿಲ್ಲ. ಆಗಾಗ ರಘು ಅವರು ಕಿಚನ್ ರೂಂಗೆ ಮಾತ್ರ ಸೀಮಿತ ಅಂತ ಗಿಲ್ಲಿ ಹೇಳುವ ಮಾತು ಅವರಿಗೆ ನೋವು ತರಿಸಿದೆ. ಈ ಬಗ್ಗೆ ಸ್ಪಂದನಾ (Spandana), ಕಾವ್ಯ (Kavya) ಮುಂದೆ ಬೇಸರ ಹೊರ ಹಾಕಿದ್ದಾರೆ. ಈ ವೇಳೆಗಿಲ್ಲಿಯ ಹಿಂದೆಯೇ ಗಿಲ್ಲಿ ಬಗ್ಗೆ ಆಪ್ತ ಗೆಳೆಯರು ಮಾತನಾಡಿದ್ದಾರೆ. ಕಾವ್ಯ ಕೂಡ ಗಿಲ್ಲಿ ಬಗ್ಗೆಯೇ ಮಾತನಾಡಿದ್ದಾರೆ.
ರಘು ಮೊದಲಿಗೆ ಮಾತನಾಡಿ, ʻನನ್ನ ಪರ್ಸನಾಲಿಟಿ ಚೇಂಜ್ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಬುಕ್ ಅನ್ನೋ ಟಾಸ್ಕ್‌ನಲ್ಲಿ ಮಾತನಾಡಿದ ರೀತಿ ತಲೆ ಕೆಟ್ಟು ಹೋಗೋ ಥರ ಮಾಡಿತು, ಡ್ರಾವ್ ಬ್ಯಾಕ್ ಆಗಿ ಬಿಡೋಣ ಅನ್ನಿಸುತ್ತೆʼ ಎಂದರು. ಅದಕ್ಕೆ ಕಾವ್ಯ ಇದ್ದವರು,ʻ ನೀವು ಒಂದು ಶೋ ವಿನ್ನರ್. . ನಾನು ಯಾಕೆ ಕುಕ್ ಮಾಡಲಿ ಅಂತ ಇದ್ದಿದ್ದರೆ ಹಾಗಿದ್ರೆ ಆ ಶೋಗೆ ನೀವು ಹೋಗೋ ಹಾಗೇ ಇರಲಿಲ್ಲ. ನನ್ನ ಪರ್ಸನಾಲಿಟಿ ಅಂತ ಇದ್ದರೆ ʼಎಂದಿದ್ದಾರೆ ಎಂದಿದ್ದಾರೆ. ಇನ್ನು ಸೂರಜ್ ಕೂಡ ʻನೀವು ಒಂದು ಕಡೆ ಶೆಫ್ ಅಂತ ಪ್ರೂವ್ ಆದಾಗ ಯಾವತ್ತೂ ಯಾರೆ ಅಂದರೂ ತೆಲೆ ಕೆಡಿಸಿಕೊಳ್ಳಬಾರದುʼ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: `ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ
ವೈರಲ್ ಪೋಸ್ಟ್
ಸ್ಪಂದನಾ ಕೂಡ, ಗಿಲ್ಲಿ ಹತ್ತಿರ ಮಾತನಾಡಿ ಎಂದಿದ್ದಾರೆ. ಅದಕ್ಕೆ ರಘು, ʻಸುದೀಪ್ ಅವರ ಮುಂದೆ ಬೇರೆ ಥರ ಮಾತಾಡ್ತಾನೆ ಎಂದಿದ್ದಾರೆ ರಘು. ಅದಕ್ಕೆ ಕಾವ್ಯ ಕೂಡ, ಗಿಲ್ಲಿಗೆ ಸೀರಿಯೆಸ್ ಆಗೇ ಹೇಳಿ, ಫನ್‌ಆಗಿ ತೆಗೋಬೇಡ ಅಂತ. ಮೀರಿನೂ ಮಾಡ್ತಾನೆ ಅಂದ್ರೆ ಎಂದಿದ್ದಾರೆ. ರಘು ಮಾತನಾಡಿ, ಕಳಪೆ ಕೊಟ್ಟಾಗ ಹೇಳಿದ್ದೀನಿ, ಆಕ್ಟಿವಿಟಿ ರೂಂನಲ್ಲೂ ಹೇಳಿದ್ದೀನಿ. ಎಷ್ಟು ಅಂತ ಹೇಳಲಿ. ಅವನಿಗೆ ಅದೆಲ್ಲ ಅರ್ಥ ಆಗೊಲ್ಲ. ಈಗ ಅಡುಗೆ ಮನೆಗೆ ಹೋಗಬೇಕು ಅಂತ ಅನ್ನಿಸಲ್ಲʼ ಎಂದಿದ್ದಾರೆ. ʻನನ್ನ ವಿಷಯಕ್ಕೂ ಹಾಗೇ ಆಗಿದೆ. ಇನ್ನು ಹೇಳೋ ಥರ ಹೇಳಬೇಕು ಎಂದಿದ್ದಾರೆ ಕಾವ್ಯ.
ಗಿಲ್ಲಿ ಬಳಿ ಧ್ರುವಂತ್ ಮನವಿ
ಇನ್ನೊಂದು ಕಡೆ, ಧ್ರುವಂತ್ ಕೂಡ ಗಿಲ್ಲಿ ಬಳಿ ಮನವಿ ಮಾಡಿದ್ದಾರೆ. ಗಿಲ್ಲಿ ಮಾಡುವ ಕಾಮಿಡಿಯನ್ನು ಅವರು ವಿರೋಧಿಸುತ್ತಾ ಬಂದಿದ್ದಾರೆ. ಮನೆಯ ಒಳಗೆ ಇರುವ ದೇವರ ಪ್ರತಿಮೆಯ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು ಧ್ರುವಂತ್ ಅವರು ಕೈ ಮುಗಿದು ಒಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12 : ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್! ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ?
ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೇನೆ. ಅದಕ್ಕೆ ಸಾಕ್ಷಿಯೇ ಈ ದೇವಿ. ನೀವು ದಯವಿಟ್ಟು ನನ್ನನ್ನು ಮತ್ತು ನನ್ನ ಆಟವನ್ನು ಅವಮಾನಿಸಬೇಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.