ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12 : ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ?

Gilli Nata: ಬಿಗ್ ಬಾಸ್ ಮನೆಗೆ ನಟಿ ಕಾವ್ಯಾ ಜೊತೆ ಜೋಡಿಯಾಗಿ ಪ್ರವೇಶ ಮಾಡಿದ್ದ ಗಿಲ್ಲಿ ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಗಿಲ್ಲಿ ನಟ ಹಾಸ್ಯಕ್ಕೆ ಇಂಪ್ರೆಸ್ ಆಗಿದ್ದ ಫ್ಯಾನ್ಸ್, ಇನ್ಸಸ್ಟಾದಲ್ಲಿ ಫಾಲೋ ಮಾಡಲು ಶುರು ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾ ಫಾಲೋವರ್ಸ್‌ ಎಷ್ಟು ಗೊತ್ತಾ?

ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಈಗ ಎಷ್ಟಾಗಿದೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 8, 2025 8:10 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಗಿಲ್ಲಿ (Gilli Nata) ಹವಾ ಜೋರಾಗಿದೆ. ವೀಕ್ಷಕರು ಗಿಲ್ಲಿ ಕಾಮಿಡಿ ಬಗ್ಗೆ ಹೊಗಳುತ್ತಲೇ ಇರ್ತಾರೆ. ಬಹುತೇಕರು ಗಿಲ್ಲಿ ಇಂದಲೇ ಈ ಬಾರಿ ಟಿಆರ್‌ಪಿ ಅಂತ ಕಮೆಂಟ್‌ ಮಾಡಿದ್ದೂ ಇದೆ. ಇದೀಗ ಗಿಲ್ಲಿಗೆ ಫ್ಯಾನ್ಸ್‌ ಫಾಲೋವರ್ಸ್‌ ಹೆಚ್ಚಾಗಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ, ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರ ಆಗ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾ ಫಾಲೋವರ್ಸ್‌ (Instagram Followers) ಎಷ್ಟು ಗೊತ್ತಾ?

ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ

ಬಿಗ್ ಬಾಸ್ ಮನೆಗೆ ನಟಿ ಕಾವ್ಯಾ ಜೊತೆ ಜೋಡಿಯಾಗಿ ಪ್ರವೇಶ ಮಾಡಿದ್ದ ಗಿಲ್ಲಿ ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಗಿಲ್ಲಿ ನಟ ಹಾಸ್ಯಕ್ಕೆ ಇಂಪ್ರೆಸ್ ಆಗಿದ್ದ ಫ್ಯಾನ್ಸ್, ಇನ್ಸಸ್ಟಾದಲ್ಲಿ ಫಾಲೋ ಮಾಡಲು ಶುರು ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

ಗಿಲ್ಲಿ ನಟ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿದ್ದಿದ್ದು 1 ಲಕ್ಷ ಫಾಲೋವರ್ಸ್. ದ್ರೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಿದ್ದಂತೆ ಗಿಲ್ಲಿ ಫಾಲೋವರ್ಸ್ ಸಂಖ್ಯೆ 5 ಲಕ್ಷಕ್ಕೆ ಏರಿದೆ.

ಗಿಲ್ಲಿ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಲಿದೆ ಎನ್ನುವ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ. ಗಿಲ್ಲಿ ಆಟವನ್ನು ನೋಡಿ ವೀಕ್ಷಕರು ಗಿಲ್ಲಿ ಕೈನಲ್ಲಿ ಬಿಗ್ ಬಾಸ್ ಟ್ರೋಫಿ ನೋಡ್ಬೇಕು, ಬಿಗ್ ಬಾಸ್ ವಿನ್ನರ್ ಗಿಲ್ಲಿ ಆಗ್ಬೇಕು ಅಂತ ಕಮೆಂಟ್ ಶುರು ಮಾಡಿದ್ದಾರೆ.

ಸೀಸನ್‌ ಮೊದಲ ಕಿಚ್ಚನ ಚಪ್ಪಾಳೆ

ರಕ್ಷಿತಾ ಶೆಟ್ಟಿ ಅವರ ಮೇಲೆ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ, ಕೊನೆಕೊನೆಗೆ ವೈಯಕ್ತಿಕ ದಾಳಿಯನ್ನು ಕೂಡ ಮಾಡುವುದಕ್ಕೆ ಮುಂದಾದವರು ಅಶ್ವಿನಿ ಗೌಡ ಮತ್ತು ಜಾಹ್ನವಿ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಅಂತಿಮವಾಗಿ ಅವರಿಬ್ಬರು ಮಾಡಿದ ಮಿಸ್ಟೇಕ್ ಏನು ಎಂಬುದನ್ನು ಕಿಚ್ಚ ಸುದೀಪ್ ಅವರು ಸಾಕ್ಷಿಸಮೇತ ಎಲ್ಲರ ಮುಂದಿಟ್ಟರು, ಅಶ್ವಿನಿ ಗೌಡ ಬಹಿರಂಗವಾಗಿ ರಕ್ಷಿತಾಗೆ ಕ್ಷಮೆ ಕೇಳಿದರು. ಇದು ಒಂದು ಕಡೆಯಾದರೆ, ಯಾವಾಗ ಇವರಿಬ್ಬರು ರಕ್ಷಿತಾ ವೈಯಕ್ತಿಕ ದಾಳಿ ಆರಂಭಿಸಿದರೋ, ಆಗಿನಿಂದಲೂ ರಕ್ಷಿತಾ ಪರ ನಿಂತವರು ಗಿಲ್ಲಿ ನಟ.