Bigg Boss Kannada 12: `ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ
Ashwini Gowda: ಈ ವೀಕೆಂಡ್‌ನಲ್ಲಿ ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್ ಸ್ಟೆಪ್ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಕಂಡು ಕಾವ್ಯಗೆ ನೆಟ್ಟಿಗರು ಕಮೆಂಟ್ ಮಾಡ್ತಾ ಇದ್ದಾರೆ.
ಬಿಗ್ ಬಾಸ್ ಕನ್ನಡ -
ಅಶ್ವಿನಿ (Ashwini) ಹಾಗೂ ಗಿಲ್ಲಿ (Gilli Nata) ಸದಾ ಗಲಾಟೆ ಮಾಡಿಕೊಳ್ಳುತ್ತಲೇ ಇರ್ತಾರೆ. ಹಾವು ಮುಂಗುಸಿ ಥರ ಇರುವ ಈ ಜೋಡಿ ಈ ವೀಕೆಂಡ್‌ನಲ್ಲಿ ವೀರ ಮದಕರಿ (Dance) ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್ ಸ್ಟೆಪ್ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಕಂಡು ಕಾವ್ಯಗೆ (Kavya) ನೆಟ್ಟಿಗರು ಕಮೆಂಟ್ ಮಾಡ್ತಾ ಇದ್ದಾರೆ.
ಸುದೀಪ್ ಅವರು ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ ಮತ್ತು ಅಶ್ವಿನಿ ಅವರನ್ನು ಒಟ್ಟಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ‘ಅಶ್ವಿನಿ ಮತ್ತು ಗಿಲ್ಲಿ ಅವರು ಜುಂ ಜುಂ ಮಾಯಾ, ಹಾಡಿಗೆ ಸಖತ್ ಆಗಿ ಸ್ಟೆಪ್ಪು ಹಾಕಿದ್ದಾರೆ. ಇಬ್ಬರ ಡ್ಯಾನ್ಸು ನೋಡಿ ಮನೆ ಮಂದಿ ನಕ್ಕು ಸುಸ್ತಾಗಿದ್ದಾರೆ.
ಹಾವು ಏಣಿ ಟಾಸ್ಕ್
ಬಿಗ್ ಬಾಸ್ ವೀಕೆಂಡ್‌ನಲ್ಲಿ ಸುದೀಪ್ ಕೆಲವೊಂದು ಚಟುವಟಿಕೆ ಕೊಡುತ್ತಾರೆ. ಈ ವಾರ ಹಾವು ಏಣಿ ಟಾಸ್ಕ್ ಕೊಟ್ಟಿದ್ದರು. ಗಿಲ್ಲಿ ನನಗೆ ಹಾವಾಗಿದ್ದಾರೆ ಅಂತ ಸ್ವತಃ ಕಾವ್ಯ ಹೇಳಿದರು. ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಸಾಕಷ್ಟು ಜಗಳ ಆಗಿದೆ. ಒಬ್ಬರು ನನ್ನ ಜರ್ನಿಯಲ್ಲಿ ಏಣಿ ಆಗಿದ್ದಾರೆ, ಇನ್ನೊಬ್ಬರು ಹಾವಾಗಿದ್ದಾರೆ ಅನ್ನೋದನ್ನ ಸ್ಪರ್ಧಿಗಳು ಹೇಳಬೇಕಿತ್ತು. ಗಿಲ್ಲಿ ಅವರು ಕಾವ್ಯ ಅವರು ತನ್ನ ಪಾಲಿಗೆ ಏಣಿ ಆಗಿದ್ದಾರೆ ಅಂದರು. ಅದೇ ರಘು ಅವರು ಮಾಳು ಅಂದರು. ಆದರೆ ರಘು ಅವರು ಗಿಲ್ಲಿ ತನಗೆ ಹಾವಾಗಿದ್ದಾನೆ ಎಂದಿದ್ದಾರೆ.
ಅಶ್ವಿನಿ ಕೂಡ ಗಿಲ್ಲಿ ಅವರೇ ಹಾವಾಗಿದ್ದಾರೆ ಎಂದರು. ರಘು ಗಿಲ್ಲಿ ಬಗ್ಗೆ ಕಾರಣ ಕೊಟ್ಟಿದ್ದು ಹೀಗೆ. ಬಂದಾಗಿನಿಂದ ಗಿಲ್ಲಿ ನನ್ನ ವ್ಯಕ್ತಿತ್ವ ಚೇಂಜ್ ಮಾಡಲು ಟ್ರೈ ಮಾಡ್ತಾನೆ ಇದ್ದರು. ಅಶ್ವಿನಿ ಮಾತನಾಡಿ, ಮನಸ್ಸನ್ನ ಒಡೆಯುವುದು.
ಇದನ್ನೂ ಓದಿ: Bigg Boss Kannada 12: ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?
ನಿರಂತರವಾಗಿ ಹಾಗೇ ಮಾಡ್ತಾ ಇರೋದು ಗಿಲ್ಲಿ. ಕಾವ್ಯ ಮಾತನಾಡಿ, ನನ್ನ ಕಾವು ಅಂತ ರೇಗಿಸೋದಾಗಿರಲಿ, ಬೇರೆ ಅವರ ಕಣ್ಣಿಗೆ ಬೇರೆ ಥರ ಕಾಣಿಸತ್ತೆ, ಹರ್ಟ್ ಆಗ್ತಿದೆ, ಅಂದಾಗ ಅಲ್ಲೇ ಸ್ಟಾಪ್ ಮಾಡ್ತಾನೆ ಅಂದುಕೊಂಡಿದ್ದೆ ಎಂದಿದ್ದಾರೆ.