ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈ ನಡುವೆ ಸ್ಪರ್ಧಿಗಳ ಮಧ್ಯೆ ಅಸಲಿ ಆಟ ಶುರುವಾದಂತಿದೆ. ಅಶ್ವಿನಿ (Ashwini Gowda) ಅವರ ಹಿಂದೆಯೇ ತಿರುಗಾಡಿಕೊಂಡು ಇರ್ತಿದ್ದ ಧ್ರುವಂತ್, ಈಗ ಅವರ ವಿರುದ್ಧವೇ ಆರೋಪ ಮಾಡ್ತಿದ್ದಾರೆ. ನಿನ್ನೆಯ (ನ.25) ಎಪಿಸೋಡ್‌ನಲ್ಲಿ ಧ್ರುವಂತ್ ಅವರು ಜಾಹ್ನವಿ ಹಾಗೂ ಅಶ್ವಿನಿ ವಿರುದ್ಧ ಖಡಕ್ ಆಗಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ಗಿಲ್ಲಿ ಬಳಿ ಧ್ರುವಂತ್ (Dhruvanth) ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ಅಶ್ವಿನಿ ಗೌಡ ಅವರ ದುಡ್ಡಿಗಾಗಿ ಜಾಹ್ನವಿ (Gilli Nata) ಈ ರೀತಿ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಧ್ರುವಂತ್ ಮಾತನಾಡಿದ್ದಾರೆ.
ಜಾಹ್ನವಿ ದಡ್ಡರಲ್ಲ
ಮೊದಲಿಗೆ ಗಿಲ್ಲಿ ಬಳಿ ಧ್ರುವಂತ್ ಮಾತನಾಡಿ,ʻ ಅಶ್ವಿನಿ ಅವರಿಗೆ ನಾವು ಹೇಳಿದ್ದೇ ಸರಿ ಆಗಬೇಕು ಅನ್ನೋ ವ್ಯಕ್ತಿತ್ವ. ಮೊದಲಿಗೆ ಎಲ್ಲರ ಬಳಿ ಹೋಗ್ತಾರೆ, ಅವರು ಹೇಗೆ? ಇವರು ಹೇಗೆ? ಅಂತ ಪ್ರತಿಯೊಬ್ಬರ ಬಳಿ ಅಭಿಪ್ರಾಯ ತೆಗೆದುಕೊಂಡು, ಅದರ ವಿರುದ್ಧ ಮಾತನಾಡುತ್ತಾರೆ. ಅವರಿಗಿಂತ ಜಾಹ್ನವಿ ಇನ್ನೂ ಹೆಚ್ಚು. ಅವರ ಅಷ್ಟು ಸ್ಮಾರ್ಟ್ ಈ ಮನೆಯಲ್ಲಿ ಯಾರೂ ಇಲ್ಲ. ನಾವು ಆಲೋಚನೆ ಮಾಡುತ್ತಿರುವುದು ಬರೀ ಮನೆಯ ಒಳಗಿನ ವಿಷಯ. ಜಾಹ್ನವಿ ದಡ್ಡರಲ್ಲʼ ಎಂದು ಹೇಳಿದ್ದಾರೆ.
ಅಶ್ವಿನಿ ಬಿಲ್ಡಪ್‌ಗೆ ಜಾಹ್ನವಿ ಫಿದಾ?
ʻಅಶ್ವಿನಿ ಅವರು ಜಾಹ್ನವಿ ಮುಂದೆ ಸಖತ್ ಬಿಲ್ಡಪ್ ಕೊಟ್ಟಿರ್ತಾರೆ, ನಾನು ಹೋರಾಟಗಾರ್ತಿ, ನನಗೆ ಅಪ್ಪ ಸಾಕಷ್ಟು ಮಾಡಿ ಇಟ್ಟಿದ್ದಾರೆ, 100 ಮನೆ ಇದೆ ಹಾಗೇ ಹೀಗೆ ಅಂತ. ಜಾಹ್ನವಿ ಅದೆಲ್ಲ ಯೋಚನೆ ಮಾಡಿರ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇರೋದಾದರೂ ಎಲ್ಲರೂ ಎಷ್ಟು ದಿನ? ಇನ್ನು ಒಂದು ತಿಂಗಳು ಇರುತ್ತೆ. ಅಥವಾ ಮಧ್ಯದಲ್ಲೇ ಹೋಗಬಹುದು. ಹೊರಗೆ ಹೋದಮೇಲೆ ಕಷ್ಟ,ಸುಖಕ್ಕೆ ಒಬ್ಬರು ಬೇಕಲ್ವಾ?' ಎಂದು ಪರೋಕ್ಷವಾಗಿ ದುಡ್ಡಿನ ಆಸೆಗೆ ಅಶ್ವಿನಿ ಅವರ ಹಿಂದೆ ಬಿದ್ದಿದ್ದಾರೆ ಎಂದು ಧ್ರುವಂತ್ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಬಗ್ಗೆ 'ವಂಶದ ಕುಡಿ' ಹೀಗೆ ಹೇಳೋದಾ? ಚಿಕ್ಕ ಕೆಲ್ಸ ಅಂದಿದಕ್ಕೆ ಚಳಿ ಬಿಡಿಸಿದ ರಕ್ಷಿತಾ ಶೆಟ್ಟಿ
ಧ್ರುವಂತ್ ಮಾಸ್ಟರ್ ಮೈಂಡ್
ಅಷ್ಟೇ ಅಲ್ಲದೇ ನಾಮಿನೇಷನ್ ವೇಳೆಯೂ ಜಾಹ್ನವಿ ಹಾಗೂ ಅಶ್ವಿನಿ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ ಧ್ರುವಂತ್. ಆದರೆ ಜಾಹ್ನವಿ ಮಾತ್ರ ಅಶ್ವಿನಿ ಅವರ ಬಳಿ, ಧ್ರುವಂತ್ ಮಾಸ್ಟರ್ ಮೈಂಡ್. ಬೇರೆಯವರಿಗೆ ಹೋಲಿಸಿದರೆ ಅವನು ಭಿನ್ನವಾಗಿದ್ದಾರೆ. ಬೇರೆಯವರೆಲ್ಲ ಸೇಫ್ ಆಗಿ ಆಡುತ್ತಿದ್ದಾರೆ ಎಂದಿದ್ದಾರೆ.
ಫೇಕ್ ಮುಖವಾಡ
ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ʻಫೇಕ್ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್ ಲೀಡ್ ಮಾಡಿರೋದು ಯಾರೂ ಇಲ್ಲʼ ಎಂದಿದ್ದಾರೆ.
ಇದರಿಂದ ಕೋಪಗೊಂಡ ಅಶ್ವಿನಿ, ʻಧ್ರುವಂತ್ ಅವರೇ ಫೇಕ್. ನನ್ನ ಜಾಹ್ನವಿ ಅವರನ್ನು ಅವರ ತೆಕ್ಕೆಗೆ ತೆಗೆದುಕೊಳ್ಳಲು ನೋಡಿದರು ಆದರೆ ಅದು ಆಗಿಲ್ಲ. ಮಲ್ಲಮ್ಮ ಥರ ಅಲ್ಲ ನಾವು ನಿಮ್ಮ ತೆಕ್ಕೆಗೆ ಬೀಳೋಕೆʼ ಎಂದು ಅಬ್ಬರಿಸಿದ್ದಾರೆ.ʻಫೇಕ್ ಅಲ್ಲಿ ಮಾತಾಡೋ ನಿಮಗೆ ಇಷ್ಟು ಇರಬೇಕಾದರೆ, ತಾಕತ್ ತೋರಿಸೋ ನನಗೆ ಎಷ್ಟು ಇರಬೇಡʼ ಎಂದು ಕೂಗಾಡಿದ್ದಾರೆ ಅಶ್ವಿನಿ.