ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಸದ್ಯ ಗ್ರೂಪಿಸಮ್ (Groupism) ಆದಂತಿದೆ. ಅಶ್ವಿನಿ ಅವರ ಟೀಂಗೆ (Ashwini) ಧ್ರುವಂತ್ (Dhruvant) ಎಂಟ್ರಿ ಆದಂತಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಕೂಡ ಧ್ರುವಂತ್ ಅವರ ವರ್ತನೆ ನಗ್ಗೆ ವೀಕ್ಷಕರು ಕೆಂಡವಾಗಿದ್ದಾರೆ, ಇದೀಗ ಗಿಲ್ಲಿಯನ್ನ (Gilli) ನೇರವಾಗಿ ಟಾರ್ಗೆಟ್ ಮಾಡಿದ್ದಾರೆ ಧ್ರುವಂತ್. ಅಷ್ಟೇ ಅಲ್ಲ ಅಶ್ವಿನಿ ಅವರು ಸಾಥ್ ಕೊಟ್ಟಿದ್ದಾರೆ.
ಗಿಲ್ಲಿ ಬಗ್ಗೆ ವ್ಯಂಗ್ಯ
ಹೊಸ ಪ್ರೋಮೋದಲ್ಲಿ ಮೊದಲಿಗೆ ಅಶ್ವಿನಿ ಅವರು ಗಿಲ್ಲಿ ಬಗ್ಗೆ ವ್ಯಂಗ್ಯ ಮಾಡಿದರು. ಬಳಿಕ ಧ್ರುವಂತ್ ಅವರು ಮನೆಯ ಕೆಲವು ಸದಸ್ಯರ ಮುಂದೆ, ಕಾಮಿಡಿ ಬೇರೆ, ಮನೆಯ ಕೆಲವರ ಮುಂದೆ ಚೀಪ್ ಮಾಡೋದು ಬೇರೆ ಎಂದು ಅಬ್ಬರಿಸಿದ್ದಾರೆ. ಇನ್ನು ರಿಷಿಕಾ ಕೂಡ ಗಿಲ್ಲಿಗೆ ನಾಜೂಕು ಕಲಿತಿಕೋ ಎಂದೂ ಹೇಳಿದ್ದಾರೆ. ಗಿಲ್ಲಿ ಅದಕ್ಕೆ ರಿಷಾ ಅವರಿಗೆ ನಿನಗೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada : ಧ್ರುವಂತ್ ನಡವಳಿಕೆಗೆ ಛೀಮಾರಿ! ರಕ್ಷಿತಾ ಬೆನ್ನಿಗೆ ಚೂರಿ ಹಾಕಿದ್ರಾ? ವೀಕ್ಷಕರು ಗರಂ
ಅಶ್ವಿನಿ ಗೌಡ ಸಾಥ್
ಇನ್ನು ಧ್ರುವಂತ್ ಅವರು ಬೇಕು ಎಂದೇ ಗಿಲ್ಲಿ ಅವರಿಗೆ ನಿಮ್ಮ ಬಗ್ಗೆ ಒಂದೂ ಒಳ್ಳೆ ಮಾತಿಲ್ಲ ಎಂದಿದ್ದಾರೆ. ಅದಿಕ್ಕೆ ಗಿಲ್ಲಿ ಕೂಡ ನಿಮ್ಮ ಬಗ್ಗೆ ಭಾರೀ ಒಳ್ಳೆ ಮಾತಿದೆಯಾ ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲಿಂದ ಗರಂ ಆದ ಧ್ರುವಂತ್ ಕಿರುಚಾಡಲು ಶುರು ಮಾಡಿದರು. ಬೇರೆ ಅವರ ಕಾಲೆಳೆಯುವ ಮೊದಲು ನಿನ್ನ ಬಗ್ಗೆ ತೋರಿಸು ಎಂದಾಗ ಗಿಲ್ಲಿ, ಅದಕ್ಕೆ ನನಗೆ ಕಿಚ್ಚನ ಚಪ್ಪಾಳೆ ಬಂದಿದೆ ಎಂದಿದ್ದಾರೆ. ಇನ್ನು ಧ್ರುವಂತ್ ಕಿರುಚಾಟಕ್ಕೆ ಅಶ್ವಿನಿ ಅವರೇ ಪಕ್ಕದಲ್ಲಿ ನಿಂತು ಸಾಥ್ ಕೊಟ್ಟಿದ್ದಾರೆ.
ಧ್ರುವಂತ್ ನಡವಳಿಕೆಗೆ ಛೀಮಾರಿ!
ಇನ್ನು ನಿನ್ನೆಯ ಸಂಚಿಕೆಯಲ್ಲಿ ಅಶ್ವಿನಿ ತಂಡ ಗ್ರೂಪಿಸಮ್ ಎಂಬ ಹಣೆಪಟ್ಟಿ ಕೂಡ ನೀಡಿತು. ಬಹುತೇಕರು ರಕ್ಷಿತಾ ಅವರಿಗೆ ಲೆಟರ್ ವಿಚಾರವಾಗಿ ಸಮಾಧಾನ ಮಾಡಿದರೆ, ಧ್ರುವಂತ್ ಅವರು ದೂರ ನಿಂತು ನೋಡುತ್ತಲೇ ಇದ್ದರು. ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ಧ್ರುವಂತ್ ರಕ್ಷಿತಾ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದ ಅವರ ವರ್ತನೆ ಕಂಡೇ ವೀಕ್ಷಕರು ಗರಂ ಆಗಿದ್ದಾರೆ.
ಇದನ್ನೂ ಓದಿ: BBK 12: ʻಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆʼ; ಮಾಳು ಖಡಕ್ ಮಾತು!
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಮಲ್ಲಮ್ಮ ಮತ್ತು ಧ್ರುವಂತ್ ಜೊತೆ ಇರುತ್ತಿದ್ದಳು. ಧ್ರುವಂತ್ ನನ್ನು ಅಣ್ಣ ಅಂತಾನೆ ಕರೆಯುತ್ತಿದ್ದಳು. ರಿಷಾ ಧ್ರುವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಸ್ಟಾಂಡ್ ತೆಗೆದುಕೊಂಡು ಮಾತನಾಡಿದ್ದು ಕೂಡ ಇದೇ ರಕ್ಷಿತಾ.