ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ..ʼ; ಛೇ! ಇಷ್ಟೆಲ್ಲಾ ಹೇಳಿಸಿಕೊಂಡ ಮೇಲೂ ʻಬಿಗ್‌ ಬಾಸ್‌ʼ ಮನೆಯಲ್ಲಿ ಧ್ರುವಂತ್ ಇರಬೇಕಾ, ಬೇಡ್ವಾ?

BBK 12 Gilli Nata: 'ಬಿಗ್ ಬಾಸ್ ಕನ್ನಡ ಸೀಸನ್ 12' ರ ಸ್ಪರ್ಧಿ ಧ್ರುವಂತ್ ಅವರು ಮನೆಯೊಳಗೆ ಇತರರಿಂದ 'ವಂಚಕ, ದಂಡಪಿಂಡ, ಊಸರವಳ್ಳಿ, ವಿಷಕಾರಿ' ಎಂಬಂತಹ ನೆಗೆಟಿವ್ ಮಾತುಗಳನ್ನು ಕೇಳಿ ಬೇಸತ್ತಿದ್ದು, ಮನೆಯಿಂದ ಹೊರಹೋಗುವ ನಿರ್ಧಾರವನ್ನು ದೃಢಪಡಿಸಿದ್ದಾರೆ.

BBK 12: 'ವಂಚಕ, ಮೋಸಗಾರ..' ಎಂದೆಲ್ಲಾ ಹೇಳಿದ್ದಕ್ಕೆ ಧ್ರುವಂತ್‌ಗೆ ಬೇಜಾರು!

-

Avinash GR
Avinash GR Dec 3, 2025 3:16 PM

ಕಳೆದ ವಾರ ಕಿಚ್ಚ ಸುದೀಪ್‌ ಅವರ ಎದುರಲ್ಲೇ ಧ್ರುವಂತ್‌ ಅವರು ಮನೆಯಿಂದ ಹೊರಗೆ ಹೋಗುವ ಮಾತುಗಳನ್ನಾಡಿದ್ದರು. ಅವಮಾನ ಸಹಿಸಿಕೊಂಡು, ಇನ್ನೊಬ್ಬರಿಂದ ನೆಗೆಟಿವ ಮಾತುಗಳನ್ನು ಹೇಳಿಸಿಕೊಂಡು ಬಿಗ್‌ ಬಾಸ್‌ ಮನೆಯಲ್ಲಿ ಇರುವುದಕ್ಕಿಂತ ಹೊರಗೆ ಹೋಗುವುದೇ ಉತ್ತಮ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಹಾಗೆಲ್ಲಾ ಕಳುಹಿಸಲು ಸಾಧ್ಯವಿಲ್ಲ ಎಂದು ಸ್ವತಃ ಸುದೀಪ್‌ ಹೇಳಿದ್ದರು. ಆದರೂ ಬಿಗ್‌ ಬಾಸ್‌ನಿಂದ ಹೊರಗೆ ಹೋಗುವ ಆಲೋಚನೆಯಿಂದ ಧ್ರುವಂತ್‌ ಹೊರಗೆ ಬಂದಂತೆ ಕಾಣುತ್ತಿಲ್ಲ!

ಗಿಲ್ಲಿ ನಟನ ಜೊತೆ ನಡೆದ ಮಾತುಕತೆಯೇ ಇದಕ್ಕೆ ಸಾಕ್ಷಿ!

ಗಿಲ್ಲಿ: ಏನಣ್ಣ ಸಮಾಚಾರ? ಹೊರಡಲು ಸಕಲ ಸಿದ್ಧತೆ ಮಾಡಿಕೊಂಡ?

ಧ್ರುವಂತ್:‌ ಸಮಾಚಾರ ಏನಿಲ್ಲ, ನೀವು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ಈ ಸಲ ನಾನು ಹೊರಟರೆ, ಎಷ್ಟೋ ಜನಕ್ಕೆ ಇಲ್ಲಿ ತಣ್ಣಗೆ ಇರುತ್ತದೆ.

ಗಿಲ್ಲಿ: ನನ್ನ ಆಶೀರ್ವಾದ ಏನಿಲ್ಲಪ್ಪ. ನಾನೇದರೂ ನಿಂಗೆ ನಾಮಿನೇಟ್‌ ಮಾಡಿದ್ದರೆ, ನನ್ನ ಆಶೀರ್ವಾದ ಇರೋದು. ನೀನು ಒಳ್ಳೆಯ ಸ್ಪರ್ಧಿ ಆಗಿರೋದ್ರಿಂದ, ಇಲ್ಲಿರಬೇಕು ಎಂದು ನಾನು ಬಯಸುತ್ತೇನೆ. ನೀನಿದ್ರೆ ಆಟಕ್ಕೊಂದು ಕಳೆ, ಮೆರುಗು ಬರುತ್ತದೆ.

ಧ್ರುವಂತ್:‌ ನಾನಾ? ನಾನು ಒಳ್ಳೆಯ ಸ್ಪರ್ಧಿಯಾ? ನರಿ ಬುದ್ಧಿ, ಕುತಂತ್ರಿ, ಮೊಸಳೆ ಕಣ್ಣೀರು, ಮುಖವಾಡ..

(ಧ್ರುವಂತ್‌ ಹೀಗೆ ಹೇಳುತ್ತಿದ್ದಂತೆಯೇ, ಮನೆಯ ಹುಲಿ ಚಿತ್ರದ ಮೇಲೆ ಬರೆದಿದ್ದ ನೆಗೆಟಿವ್‌ ಗುಣಗಳನ್ನೆಲ್ಲಾ ಗಿಲ್ಲಿ ಹೇಳುವುದಕ್ಕೆ ಆರಂಭಿಸಿದರು)

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

ಗಿಲ್ಲಿ: ಜಂಭ, ಊಸರವಳ್ಳಿ, ಅರ್ಥಹೀನ, ಮೂರ್ಖ, ವಂಚಕ, ವಿಷಕಾರಿ, ಮೋಸಗಾರ, ಸ್ವಾರ್ಥಿ, ದಂಡಪಿಂಡ, ಹೇಡಿ, ದುರ್ಬಲ, ಕ್ರೌರ್ಯ.. ಇದನ್ನೆಲ್ಲಾ ನಿನಗೆ ನೀನೇ ಹೇಳಿಕೊಳ್ಳುತ್ತಿರುವುದು. ನಾವೇನಾದರೂ ಹೇಳಿದ್ವ?

ಧ್ರುವಂತ್:‌ ನಾನು ಹೇಗೆ ಒಳ್ಳೆಯ ಕಾಂಪಿಟೇಟರ್‌ ಆಗುತ್ತೇನೆ?

ಗಿಲ್ಲಿ: ಹಾಗಾದರೆ, ಹೊರಗೆ ಹೋಗಬೇಕು ಎಂದು ಫಿಕ್ಸ್‌ ಆಗಿಬಿಟ್ಟಿದ್ದೀಯಾ?

ಧ್ರುವಂತ್: ಎರಡನೇ ವಾರದಲ್ಲೇ ನಾನು ಫಿಕ್ಸ್‌ ಆಗಿದ್ದೀನಿ. ಆದರೆ ಈ ಸಲ ಓಪನ್‌ ಆಗಿ ಹೇಳ್ತಾ ಇದ್ದೇನೆ ಅಷ್ಟೇ.

BBK 12: 'ಗಿಲ್ಲಿ ನಟ ಹುಲಿ, ಒನ್‌ ಮ್ಯಾನ್‌ ಆರ್ಮಿ, ಅವ್ನೇ ಬಿಗ್‌ ಬಾಸ್‌ ಶೋ ನಡೆಸ್ತಾ ಇದ್ದಾನೆ'; ಜೊತೆಗಿದ್ದ ಸ್ಪರ್ಧಿಯಿಂದಲೇ ಬಂತು ಅಚ್ಚರಿಯ ಮಾತು!

ಗಿಲ್ಲಿ: ಎರಡನೇ ವಾರದಲ್ಲೇ ಫಿಕ್ಸ್‌ ಆಗಿದ್ದಾ? ಹಾಗಾದರೆ, ಸುಮ್ನೆ ಇಷ್ಟವಿಲ್ಲದೇ ಇಲ್ಲಿದ್ದೆ ಅಲ್ವಾ..?

ಧ್ರುವಂತ್:‌ ಇಷ್ಟ ಇಲ್ಲದೇ ಅಂತ ಅಲ್ಲ. ಯಾವಾಗ ಬೇಕಾದರೂ ನಾನು ಹೋಗಬಹುದು ಎಂದು ನಿಷ್ಠೆಯಿಂದ ಆಡುತ್ತಿದ್ದೆ, ನಿಷ್ಠೆಯಿಂದ ಬಟ್ಟೆಯನ್ನು ಪ್ಯಾಕ್‌ ಮಾಡುತ್ತಿದ್ದೆ. ನನ್ನ ಆಟಕ್ಕೆ ನಾನು ಮೋಸ ಮಾಡಿಕೊಂಡಿಲ್ಲ.

ಗಿಲ್ಲಿ: ನಿನ್ನನ್ನ ಕಳಿಸೋದಿಲ್ಲ ಎಂದರೆ ಎನು ಮಾಡ್ತಿಯಾ?

ಧ್ರುವಂತ್:‌ ಅದು ಅವರ ಇಚ್ಛೆ. ನನ್ನ ಪರಮಾತ್ಮ, ಬಿಗ್‌ ಬಾಸ್‌ ಇಚ್ಛೆ. ಎಲ್ಲರನ್ನು ಆಚೆ ಕಳುಹಿಸಿ, ನನ್ನನ್ನು ವಿನ್‌ ಮಾಡಿ ಅಂತ ಹೇಳ್ತಿನಿ, ಅದನ್ನು ಬಿಗ್‌ ಬಾಸ್‌ ಮಾಡ್ತಾರಾ? ಇಲ್ಲ ತಾನೇ. ಹಾಗೇ ಇದು. ಇಲ್ಲಿ ಧೈರ್ಯ ಇಲ್ಲದೇ ಇರುವವರಿಂದ ವಂಚಕ, ಮೋಸಗಾರ ಅಂತ ಕರೆಸಿಕೊಳ್ಳಲು ನನಗೆ ಇಷ್ಟವಿಲ್ಲ.

ಗಿಲ್ಲಿ: ಒಟ್ನಲ್ಲಿ ನೀನು ಹೊರಗೆ ಹೋಗಬೇಕು ಎಂದು ಫಿಕ್ಸ್‌ ಆಗಿದ್ದೀಯಾ.