ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gilli Nata: ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್; ಪಾರ್ಟಿ ಅರೇಂಜ್, ಹಲವರಿಂದ ಟೀಕೆ

Dog satish: ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ಹೈಲೈಟ್‌ಗಳಲ್ಲಿ ಗಿಲ್ಲಿ ಕೂಡ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಕ್ರೇಜ್‌ ಕೂಡ ಜಾಸ್ತಿ ಇದೆ. ಗಿಲ್ಲಿಯೇ ಈ ಬಿಗ್‌ಬಾಸ್‌ ವಿನ್ನರ್‌ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಗಿಲ್ಲಿ ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದು ಎಲಿಮಿನೇಟ್‌ ಆದ ಸ್ಪರ್ಧಿ ಡಾಗ್‌ ಸತೀಶ್‌ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದೂ ಇದೆ. ಗಿಲ್ಲಿ ಎಷ್ಟು ಕೆಟ್ಟವನು ಅಂದ್ರೆ ಲೈಫಲ್ಲಿ ನಾನು ಅವನಷ್ಟು ಕೆಟ್ಟವನನ್ನ, ಕೊಳಕನನ್ನ, ಕಳ್ಳನನ್ನ ನೋಡೇ ಇಲ್ಲ ಎಂದಿದ್ದರು. ಆದರೀಗ ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.

ಗಿಲ್ಲಿ ಔಟ್‌ ಆದ ಎಂದು ಕುಣಿದು ಕುಪ್ಪಳಿಸಿದ ಡಾಗ್​ ಸತೀಶ್!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 5, 2026 10:28 AM

ಬಿಗ್‌ಬಾಸ್‌ ಕನ್ನಡ ಸೀಸನ್‌-12ರ (Bigg Boss Kannada 12) ಹೈಲೈಟ್‌ಗಳಲ್ಲಿ ಗಿಲ್ಲಿ (Gilli Nata) ಕೂಡ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಕ್ರೇಜ್‌ ಕೂಡ ಜಾಸ್ತಿ ಇದೆ. ಗಿಲ್ಲಿಯೇ ಈ ಬಿಗ್‌ಬಾಸ್‌ ವಿನ್ನರ್‌ (Bigg Boss Winner) ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಗಿಲ್ಲಿ ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದು ಎಲಿಮಿನೇಟ್‌ (Eliminate) ಆದ ಸ್ಪರ್ಧಿ ಡಾಗ್‌ ಸತೀಶ್‌ ಹಲವು ಸಂದರ್ಶನಗಳಲ್ಲಿ ಗಿಲ್ಲಿ ಬಗ್ಗೆ ಕೆಟ್ಟದ್ದಾಗಿ ಕಮೆಂಟ್‌ ಮಾಡಿದ್ದೂ ಇದೆ. ಗಿಲ್ಲಿ ಎಷ್ಟು ಕೆಟ್ಟವನು ಅಂದ್ರೆ ಲೈಫಲ್ಲಿ ನಾನು ಅವನಷ್ಟು ಕೆಟ್ಟವನನ್ನ, ಕೊಳಕನನ್ನ, ಕಳ್ಳನನ್ನ ನೋಡೇ ಇಲ್ಲ ಎಂದಿದ್ದರು. ಆದರೀಗ ಗಿಲ್ಲಿ ಹೊರ ಹೋಗಿದ್ದಾರೆ ಎಂದು ಅವರು ಸಂಭ್ರಮಿಸಿದ್ದಾರೆ.

ಗಿಲ್ಲಿ ಔಟ್ ಆಗಿ ಆಚೆ ಬಂದಾಯ್ತು

ಗಿಲ್ಲಿ ನಟ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಸತೀಶ್ ಕುಣಿದಾಡಿದ್ದಾರೆ. ‘ಗಿಲ್ಲಿ ಔಟ್ ಆಗಿ ಆಚೆ ಬಂದಾಯ್ತು. ಇದಕ್ಕೆ ಕಾರಣ ನಾನೇ. ಪಾರ್ಟಿ ಕೊಡಿಸ್ತಾ ಇದೀನಿ. ಅವನನ್ನು ಹೊರಗೆ ಕಳಿಸಬೇಕು ಎಂದು ಹಠ ಹಿಡಿದಿದ್ದೆ. ಅದನ್ನು ಸಾಧಿಸಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ - ರಕ್ಷಿತಾ ನಡುವೆ ಹೊಡೆದಾಟ; ನಾಮಿನೇಶನ್‌ ವೇಳೆ ಭರ್ಜರಿ ಕೂಗಾಟ

ಈ ವಿಡಿಯೋ ವೈರಲ್‌ ಆಗುತ್ತಿದೆ. ನಾನು ಮೊದಲೇ ಹೇಳಿದ್ದೆ. ಅವನು ಹೊರಕ್ಕೆ ಬರುತ್ತಾನೆ ಎಂದು. ನಾನು ಹೇಳಿದ್ದು ನಿಜ ಆಗಿದೆ. ಆದ್ದರಿಂದ ಗ್ರ್ಯಾಂಡ್​ ಪಾರ್ಟಿ ಕೊಡುತ್ತಿದ್ದೇನೆ, ಎಲ್ಲರೂ ಬರಬೇಕು ಎಂದು ಹೇಳಿದ್ದಾರೆ. ಕುಣಿದು ಕುಪ್ಪಳಿಸುತ್ತಿರುವ ಡಾಗ್ ಸತೀಶ್​ ಅವರಿಗೆ ಏನಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ.

ಸತೀಶ್ ಹೇಳಿಕೆಯನ್ನು ಅಲ್ಲಿದ್ದವರೇ ನಂಬಿಲ್ಲ, ಇನ್ನು ಜನರು ನಂಬೋದು ಹೇಗೆ? ಭಾನುವಾರ ಸ್ಪಂದನಾ ಎಲಿಮಿನೇಟ್ ಆಗಿದ್ದಾರೆ. ಕಳೆದ ವಾರ ಗಿಲ್ಲಿ ನಾಮಿನೇಟ್ ಆಗಿರಲೇ ಇಲ್ಲ ಎಂದು ಕಮೆಂಟ್‌ ಮಾಡಿದ್ದಾರೆ.

ಏಕವಚನದಲ್ಲಿ ಮಾತನಾಡಿದ್ದಾನೆ

ಈ ಹಿಂದೆ ಡಾಗ್‌ ಸತೀಶ್‌ ಅವರು ಗಿಲ್ಲಿ ಬಗ್ಗೆ ಹೊರಗಡೆ ಗಿಲ್ಲಿ ಬಗ್ಗೆ ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ ಇದ್ದಾರೆ. ಗಿಲ್ಲಿ ಬಗ್ಗೆ ಕಾಮಿಡಿ ಮಾತ್ರ ತೋರಿಸುತ್ತಿರುವುದರಿಂದ ಅವನನ್ನು ತುಂಬಾ ಒಳ್ಳೆಯವನು ಅಂದುಕೊಂಡಿದ್ದಾರೆ. ಆದರೆ ಗಿಲ್ಲಿ ಕೆಟ್ಟ ಮಾತುಗಳನ್ನ, ಬೇರೆಯವರಿಗೆ ಅವಮಾನ ಮಾಡುವ ಮಾತುಗಳನ್ನ ಆಡಿದ್ದಾನೆ. ಗಿಲ್ಲಿ ತನಗಿಂತ ಹಿರಿಯರಿಗೂ ಇದನ್ನೇ ಮಾಡಿದ್ದಾನೆ. ಒಬ್ಬರಿಗೂ ಬಿಡದಂತೆ ಏಕವಚನದಲ್ಲಿ ಮಾತನಾಡಿದ್ದಾನೆ. ಉಳಿದವರ ಬಗ್ಗೆ ಚೀಪ್‌ ಆಗಿ ಮಾತಾಡೋದು ಎಂದು ಆರೋಪ ಮಾಡಿದ್ದರು.

ಇದನ್ನೂ ಓದಿ: Bigg Boss Kannada 12: ಒರಗಿಕೊಳ್ಳೋಕೆ ರಘು ತೊಡೆ, ಹೆಗಲು ಬೇಕು! ರಾಶಿಕಾ ವಿರುದ್ಧ ಅಶ್ವಿನಿ ಹೇಳಿಕೆ, ಫ್ಯಾನ್ಸ್‌ ಗರಂ

ಇನ್ನು ಸುದೀಪ್ ಅವರು ಸಹ ಈ ವಾರದ ಎಲಿಮಿನೇಷನ್ ಅನ್ನು ಸರಳವಾಗಿಯೇ ಮುಗಿಸಿದರು. ಈ ಹಿಂದಿನ ಕೆಲ ವಾರ ಬೇರೆ ಬೇರೆ ರೀತಿಯಲ್ಲಿ ಎವಿಕ್ಷನ್ ಅನ್ನು ಕೆಲ ಆಕ್ಟಿವಿಟಿಗಳ ಮೂಲಕ ಮಾಡಲಾಗಿತ್ತು. ನಾಮಿನೇಷನ್​​ನಿಂದ ಸೇಫ್ ಆಗುವುದಕ್ಕೂ ಆಕ್ಟಿವಿಟಿ ನೀಡಲಾಗಿತ್ತು. ಆದರೆ ಈ ವಾರ ಅದೇನೂ ಇಲ್ಲದೆ, ಬಹಳ ಸರಳವಾಗಿ ಸ್ಪಂದನಾರ ಹೆಸರು ಹೇಳುವ ಮೂಲಕ ಎವಿಕ್ಷನ್ ಪ್ರಕ್ರಿಯೆ ಪೂರ್ಣ ಮಾಡಲಾಯ್ತು.