ಬಿಗ್ ಬಾಸ್ ಮನೆಯಿಂದ ಸೂರಜ್ ಬೆನ್ನಲ್ಲೇ ಮಾಳು ನಿಪನಾಳ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಈ ವಾರ ಡಬಲ್ ಎಲಿಮಿನೇಶನ್ (Double elimination) ಇದೆ ಎಂದು ಬಿಗ್ ಬಾಸ್ ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೂರಜ್ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾ (Spandana) ಹಾಗೂ ಮಾಳು ಅವರು ಡೇಂಜರ್ ಝೋನ್‌ನಲ್ಲಿ ಇದ್ದಿದ್ದರು. ಅದರಂತೆ ಮಾಳು ಔಟ್ ಆಗಿದ್ದಾರೆ.
ಸ್ಪಂದನಾ ಸೇಫ್!
ಮೊದಲಿಗೆ ಬಿಗ್ ಬಾಸ್ ಸ್ಪಂದನಾ ಹಾಗೂ ಮಾಳು ಅವರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಅನೌನ್ಸ್ ಮಾಡಿದ್ದಾರೆ. ಗಿಲ್ಲಿ ಕೂಡ, ಸ್ಪಂದನಾ ಯಾರೂ ಎಂಬುದು ಇದುವರೆಗೂ ಕ್ಲಾರಿಟಿ ಸಿಕ್ಕಿಲ್ಲ ಅಂತ ಗಿಲ್ಲಿ ನಟ ಹೇಳಿದ್ದಾರೆ. ಇನ್ನು ಧನುಷ್ ಕೂಡ ಮಾಳು ಅವರು ಸ್ಟ್ಯಾಂಡ್ ತೆಗೆದುಕೊಂಡಿಲ್ಲ ಎಂದಿದ್ದಾರೆ. ಅಂತೂ ಮಾಳು ಏಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ : Bigg Boss Kannada 12: ಸ್ಪಂದನಾ VS ಮಾಳು; ಬಿಗ್‌ಬಾಸ್ ಮನೆಯಿಂದ ಆಚೆ ಹೋಗೋದು ಯಾರು?
''ಬಿಗ್ ಬಾಸ್'' ಊಹೆಗೆ ನಿಲುಕದ ಕಾರ್ಯಕ್ರಮ. ಅಂದುಕೊಂಡಿದ್ದ ಲೆಕ್ಕಾಚಾರ ತಲೆ ಕೆಳಗಾಗಿಸುವ ಕಾರ್ಯಕ್ರಮ ಇದು.ಮನೆಯ ಒಳಗೆ ಬಂದ ಎರಡನೇ ವಾರಕ್ಕೆ ಸುಸ್ತಾಗಿದ್ದ ಮಾಳು ನಿಪನಾಳ ನನಗೆ ಇಲ್ಲಿ ಇಷ್ಟವಾಗುತ್ತಿಲ್ಲ, ಸೆಟ್ ಆಗ್ತಿಲ್ಲ, ಉತ್ತರ ಕರ್ನಾಟಕದವರು, ನಾನು ಹೊರಗಡೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಮಾಳು ಆಡಿದ ಈ ಮಾತುಗಳಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅರ್ಹರಿಗೆ ಮನೆಯೊಳಗೆ ಪ್ರವೇಶ ಕೊಡಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಮಾಳು ಕ್ಯಾಪ್ಟನ್ ಕೂಡ ಆಗಿದ್ದರು. ಬಿಗ್ ಬಾಸ್ʼ ಮನೆಗೆ ಬಂದಿದ್ದ ಜನರ ವೋಟ್‌ನ ಪ್ರಕಾರ ಕ್ಯಾಪ್ಟನ್ ಆಗಿ ಮಾಳು ನಿಪನಾಳ ಆಯ್ಕೆ ಆಗಿದ್ದರು.
ಇದನ್ನೂ ಓದಿ: Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ
ಅಭಿಷೇಕ್ ಶ್ರೀಕಾಂತ್, ಜಾಹ್ನವಿ, ರಘು, ರಿಷಾ ಗೌಡ, ಮಾಳು ನಿಪನಾಳ್, ಕಾವ್ಯ ಶೈವ ಇವರೆಲ್ಲಾ ಕ್ಯಾಪ್ಟನ್ಸಿ ಓಟದಲ್ಲಿದ್ದರು. ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆ ಮಾಡುವ ಅಧಿಕಾರವನ್ನ ʻಬಿಗ್ ಬಾಸ್ʼ ವೀಕ್ಷಕರಿಗೆ ನೀಡಿದ್ದರು. ಜನರ ವೋಟ್‌ನ ಪ್ರಕಾರ ಈ ವಾರ ಮಾಳು ನಿಪನಾಳ ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆಗಿ ಮನೆಯನ್ನು ನಿಭಾಯಿಸಿದ್ದರು.
ಲ ಉತ್ತರ ಕರ್ನಾಟಕ ಮಾತ್ರವಲ್ಲ ಕರ್ನಾಟಕದಾದ್ಯಂತ ಸಕತ್ ಹವಾ ಕ್ರಿಯೇಟ್ ಮಾಡಿತ್ತು. ಈ ಹಾಡಿನ ಜೊತೆಗೆ ಹಾಡು ಹಾಡಿದ ಗಾಯಕ ಮಾಳು ನಿಪನಾಳ ಕೂಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದರು.