Bigg Boss Kannada 12 Finale: ಗಿಲ್ಲಿ ಬಿಗ್ ಬಾಸ್ ಗೆದ್ದರೆ 20 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದ ಎಂಎಲ್‌ಸಿ ಟಿ.ಎ. ಶರವಣ
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಕೊನೆಯ ಹಂತಕ್ಕೆ ತಲುಪಿದ 6 ಸ್ಪರ್ಧಿಗಳ ಪೈಕಿ ಕಪ್ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಇದೀಗ ಜೆಡಿಎಸ್ ಎಂಎಲ್‌ಸಿ, ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಕ ಟಿ.ಎ. ಶರವಣ ಅವರು ಗಿಲ್ಲಿ ನಟ ಬಿಗ್ ಬಾಸ್ ಗೆದ್ದರೆ ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.
ಗಿಲ್ಲಿ ನಟ ಮತ್ತು ಶರವಣ (ಸಂಗ್ರಹ ಚಿತ್ರ) -
ಬೆಂಗಳೂರು, ಜ. 18: 100ಕ್ಕಿಂತಲೂ ಹೆಚ್ಚು ದಿನಗಳಿಂದ ಪ್ರೇಕ್ಷಕರ ಮನ ರಂಜಿಸಿದ, ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12 Finale) ಫಿನಾಲೆ ನಡೆಯುತ್ತಿದೆ. ಕೊನೆಯ ಹಂತಕ್ಕೆ ತಲುಪಿದ 6 ಸ್ಪರ್ಧಿಗಳ ಪೈಕಿ ಕಪ್ ಯಾರ ಪಾಲಾಗುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೆ ರೋಚಕತೆ ಸೃಷ್ಟಿಸುತ್ತಿರುವ ಈ ಶೋದ ಪ್ರಬಲ ಸ್ಪರ್ಧಿ ಗಿಲ್ಲಿ ನಟನ (Gilli Nata) ಕ್ರೇಝ್ ಅಂತ ಜೋರಾಗಿಯೇ ಇದೆ. ರಾಜ್ಯಾದ್ಯಂತ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಕಪ್ ವಿನ್ ಆಗುತ್ತಾರೆ ನಿರೀಕ್ಷೆ ಇದೆ. ಇದೀಗ ಜೆಡಿಎಸ್ ಎಂಎಲ್‌ಸಿ, ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಕ ಟಿ.ಎ. ಶರವಣ (T.A. Sharavana) ಪ್ರಮುಖ ಘೋಷಣೆಯೊಂದನ್ನು ಮಾಡಿದ್ದು, ಗಿಲ್ಲಿ ನಟ ಬಿಗ್ ಬಾಸ್ ಗೆದ್ದರೆ ಬರೋಬ್ಬರಿ 20 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ರೈತನ ಮಗ ಗಿಲ್ಲಿ ಗೆಲ್ಲಬೇಕು. ಈ ಬಾರಿ ಬಿಗ್ ಬಾಸ್ ಟ್ರೋಫಿ ಗಿಲ್ಲಿಗೆ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ನಾನೂ ಕೂಡ ಪ್ರತಿದಿನ ಬಿಗ್‌ಬಾಸ್ ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಈ ಸೀಸನ್‌ನಲ್ಲಿ ಗಿಲ್ಲಿಯೇ ಗೆಲ್ಲಬೇಕು. ರೈತನ ಮಗನಾಗಿ ಬಂದಿರುವ ಗಿಲ್ಲಿ ತನ್ನ ನಡವಳಿಕೆ, ಶ್ರಮ ಮತ್ತು ಪ್ರಾಮಾಣಿಕತೆಯಿಂದ ಜನರ ಮನ ಗೆದ್ದಿದ್ದಾನೆ" ಎಂದು ತಿಳಿಸಿದ್ದಾರೆ. "ಈ ಸೀಸನ್‌ನಲ್ಲಿ ರಕ್ಷಿತಾ ಅಥವಾ ಅಶ್ವಿನಿ ರನ್ನರ್ ಅಪ್ ಆಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.
ಗಿಲ್ಲಿ ಹುಟ್ಟೂರಿನಲ್ಲಿ ಸಂಭ್ರಮವೋ ಸಂಭ್ರಮ; ಅದ್ಧೂರಿ ಮೆರವಣಿಗೆಗೆ ಸಿದ್ಧತೆ
ಗಿಲ್ಲಿ ಕ್ರೇಝ್ ಜೋರು
ಈ ಬಾರಿಯ ಬಿಗ್ ಬಾಸ್ ಜನಪ್ರಿಯತೆ ಇನ್ನಷ್ಟು ಹೆಚ್ಚಲು ಗಿಲ್ಲಿ ನಟ ಕೂಡ ಕಾರಣ ಎನ್ನುವ ಮಾತು ಜೋರಾಗಿದೆ. ಇದು ನಿಜ ಕೂಡ. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಕ್ರಿಯೆಟ್ ಮಾಡಿರುವ ಹವಾ ಅಂತಹದ್ದು. ಇದಕ್ಕೆ ಸಾಕ್ಷಿ ಎಂಬಂತೆ ಹತ್ತಾರು ಮಂದಿ ಗಿಲ್ಲಿಯ ಫೋಟೊವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಫ್ಯಾನ್‌ಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು. ಈ ವೇಳೆ ಒಬ್ಬ ಅಭಿಮಾನಿ ಕೈಮೇಲೆ ಗಿಲ್ಲಿ ನಟ ಅವರ ಫೋಟೊವನ್ನು ಟ್ಯಾಟೂ ಹಾಕಿಸಿಕೊಂಡು ಬಂದಿದ್ದರು. ಅದನ್ನು ಕಂಡಿದ್ದ ಗಿಲ್ಲಿ ಎಮೋಷನಲ್ ಆಗಿಬಿಟ್ಟಿದ್ದರು.
ತಮ್ಮ ಕಾಮಿಡಿ ಮಾತುಗಳ ಮೂಲಕವೇ ಎಲ್ಲರ ಗಮನ ಸೆಳೆದ ಗಿಲ್ಲಿ ಮಂಡ್ಯ ಮೂಲದವರು. ಗಿಲ್ಲಿ ನಟ ಅವರ ನಿಜವಾದ ಹೆಸರು ನಟರಾಜ್. ಇವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದವರು. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ಕಾಮಿಡಿಯಾಗಿ ಬಳಸಿಕೊಳ್ಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಫೈನಲ್‌ಗೆ ಬಂದಿದ್ದು ಆರು ಮಂದಿ
ಫೈನಲ್‌ಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್, ರಘು ಮತ್ತು ಕಾವ್ಯ ಬಂದಿದ್ದರು. ಆರಂಭದಲ್ಲಿ ಧನುಷ್, ಬಳಿಕ ರಘು, ಕಾವ್ಯ ಎಲಿಮಿನೇಷನ್ ಆಗಿದ್ದಾರೆ. ಇದೀಗ ಕಪ್ ಯಾರ ಮುಡಿಗೇರಲಿದೆ ಎನ್ನುವ ಕುತೂಹಲ ಮೂಡಲಿದೆ.