ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಗಿಲ್ಲಿ (Gilli Comedy) ಅವರು ತಮಾಷೆ ಮೂಲಕವೇ ಹೈಲೈಟ್ ಆದವರು. ಇತ್ತೀಚೆಗೆ ಗಿಲ್ಲಿ ಹಾಗೂ ರಘು (Gilli and Raghu) ಅವರ ತಮಾಷೆಯನ್ನು ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಿತಾಪತಿಗೆ 'ಮೋಟು ಪತ್ಲು' (Motu Patlu) ಜೋಡಿ ಎಂದೇ ಕರೆಯುತ್ತಿದ್ದಾರೆ. ರಘು ಅವರು ಎಲ್ಲೇ ಇದ್ದರೂ , ಅವರನ್ನ ಅಂಟಿಕೊಂಡೇ ಇರ್ತಾರೆ ಗಿಲ್ಲಿ. ಆದರೀಗ ಕ್ಯಾಪ್ಟನ್ ರಘು ಅವರ ಟಾರ್ಚರ್‌ಗೆ (Raghu Captain) ಗಿಲ್ಲಿ ಹೈರಾಣು ಆಗಿದ್ದಾರೆ. ರಘು ಕೂಡ ಗಿಲ್ಲಿ ಅವರನ್ನ ಸಖತ್ ಬೆಂಡೆತ್ತಿದ್ದಾರೆ.
ಗಿಲ್ಲಿಗೆ ಸಖತ್ ಬೆಂಡೆತ್ತಿದ ರಘು!
ಗಿಲ್ಲಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕೆಲಸ ,ಮಾಡೋದು ಅಂದ್ರೆ ಆಗೋದೇ ಇಲ್ಲ.ಕಿಚ್ಚನ ಪಂಚಾಯಿತಿಯಲ್ಲೂ ಈ ವಿಚಾರ ಬಂದಿತ್ತು. ಕಿಚ್ಚ ತಮಾಷೆ ಮಾಡುತ್ತಲೇ ಈ ಬಗ್ಗೆ ಹೇಳಿದ್ದರು. ಮಾಳು ಕ್ಯಾಪ್ಟನ್ ಆದಾಗಲೂ ಗಿಲ್ಲಿ ಕೆಲಸ ಮಾಡುತ್ತಲೇ ಇರಲಿಲ್ಲ. ಆದರೀಗ ಕ್ಯಾಪ್ಟನ್ ರಘು ಅವರು ಗಿಲ್ಲಿ ಅವರನ್ನ ಬೆಂಡೆತ್ತಿದ್ದಾರೆ.
ಇದನ್ನೂ ಓದಿ: Bigg Boss Kannada: ಎರಡನೇ ಬಾರಿಗೆ ಕ್ಯಾಪ್ಟನ್ ಆದ್ರಾ ರಘು? ಡೇಂಜರ್ಸ್ ಝೋನ್‌ನಲ್ಲಿ ಕಾಕ್ರೋಚ್ ಸುಧಿ!
ಗಿಲ್ಲಿ ನಟನ ಬಳಿ ಕೆಲಸ ಮಾಡಿಸಿದ್ದಾರೆ. ಈ ಟಾರ್ಚರ್‌ಗೆ ಗಿಲ್ಲಿ ನಟ ಹೈರಾಣಾಗಿ ಹೋಗಿದ್ದಾರೆ. ಗಿಲ್ಲಿ ಎಲ್ಲೇ ಕುಳಿತುಕೊಂಡರೂ ಅವರನ್ನ ಬಿಡುತ್ತಿಲ್ಲ ರಘು. ಟೇಬಲ್‌ನಿಂದ ಹಿಡಿದು ಎಲ್ಲವೂ ಕ್ಲೀನ್ ಆಗಬೇಕು ಎಂದು ಆರ್ಡರ್ ಮಾಡಿದ್ದಾರೆ. ಗಿಲ್ಲಿ ಕೂಡ ಪೊರಕೆ ಹಿಡಿದುಕೊಂಡೇ ಓಡಾಡುತ್ತಿದ್ದಾರೆ. ಎದೆ ಮೇಲೆ ಕಾಲು ಹಾಕಿ ಹಿಂಸೆ ಕೊಡ್ತಾ ಇದ್ದಾನೆ ಅಂತ ಗಿಲ್ಲಿ ತಮಾಷೆ ಮಾಡಿದ್ದಾರೆ. ಅಷ್ಟೇ ಅಲ್ಲ ಬೇರೆ ಅವರಿಗೆ ಪ್ರೀತಿಯಿಂದ ಮಾತನಾಡಿಸಿದಂತೆ, ನನಗೂ ಪ್ರೀತಿಯಿಂದ ಮಾತನಾಡಿಸಿ ಅಂತ ಕಾಲೆಳೆದಿದ್ದಾರೆ ಗಿಲ್ಲಿ.
ರಘು ಆಟಕ್ಕೆ ಬಹುಪರಾಕ್ ಅಂತಿದ್ದಾರೆ ವೀಕ್ಷಕರು!
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಘು ಅವರು ಬರು ಬರುತ್ತಲೇ ಕ್ಯಾಪ್ಟನ್ ಆದವರು. ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದವರು ರಘು. ಈ ವಾರ ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ಈ ಬಾರ ಬಿಗ್ ಬಾಸ್ ಸೀಸನ್ 12 ಟ್ವಿಸ್ಟ್‌ಗಳಿಂದ ಕೂಡಿತ್ತು. ನಾಮಿನೇಟ್ ಆಗದವರು ನಾಮಿನೇಟ್ ಆದ್ರು, ಡೇಂಜರ್ಜ್ ಝೋನ್‌ನಲ್ಲಿ ದ್ದವರು ಸೇಫ್ ಆದ್ರು. ಗೇಮ್ ವಿಚಾರಕ್ಕೆ ಬರೋದಾದರೆ, ಮನೆಯ ಕ್ಯಾಪ್ಟನ್ ಮಾಳು ನಿಪನಾಳ ಅವರು ಕಾಕ್ರೋಚ್ ಸುಧಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಅವರ ಜೊತೆ ರಘು ಕೂಡ ನೇರವಾಗಿ ನಾಮಿನೇಟ್ ಆಗಿದ್ದರು.
ಈ ವಾರ ರಘು ಅವರು ನಾಮಿನೇಟ್ ಆಗದೇ ಇರುವ ತಂಡದಲ್ಲಿ ಇದ್ದರು. ಈ ವೇಳೆ ಟಾಸ್ಕ್ ಗೆದ್ದ ತಂಡದವರು ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಿ, ನಾಮಿನೇಟ್ ತಂಡಕ್ಕೆ ಕಳುಹಿಸಬೇಕಿತ್ತು.
ಇದನ್ನೂ ಓದಿ: Bigg Boss Kannada 12: ಓವರ್ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ? ರಘು ಆಟಕ್ಕೆ ಬಹುಪರಾಕ್ ಅಂತಿದ್ದಾರೆ ವೀಕ್ಷಕರು!
ಆಗ ರಕ್ಷಿತಾ ಶೆಟ್ಟಿ ಅವರು ಹಠ ಹಿಡಿದು ರಘು ಅವರನ್ನು ನಾಮಿನೇಟ್ ಮಾಡಿದರು. ಜಿಮ್ ಬಾಲ್ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ, ರಾಶಿಕಾ, ರಿಷಾ, ಅಶ್ವಿನಿ ಹೊರಬಂದು ಜಾಹ್ನವಿ ಗೆಲುವು ಸಾಧಿಸಿದರು. ಪುರುಷರ ತಂಡದಲ್ಲಿ ರಘು ಗೆಲುವು ಸಾಧಿಸಿದರು. ಕೊನೆಯ ಹಂತದಲ್ಲಿ ರಘು ಹಾಗೂ ಜಾಹ್ನವಿಗೆ ಆಟ ಇತ್ತು. ಇದರಲ್ಲಿ ರಘು ವಿನ್ ಆಗಿದ್ದಾರೆ.