ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಒಂದು ತುತ್ತು ಕೊಡು ಅಣ್ಣ ಅಂತ ಅದೆಷ್ಟೇ ಕೇಳಿಕೊಂಡರು ಕೊಡದ ಕುಚಿಕು! ರಘು ವರ್ತನೆ ಬಗ್ಗೆ ಗಿಲ್ಲಿ ಫ್ಯಾನ್ಸ್‌ ಬೇಸರ

Gilli Raghu: ನಿನ್ನೆಯ ಎಪಿಸೋಡ್‌ನಲ್ಲಿ ಕುಚಿಕು ರಘು ಅವರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಕಳಪೆಯನ್ನು ನಾನು ಗಿಲ್ಲಿಗೆ ನೀಡುತ್ತಿದ್ದೇನೆ. ಯಾಕೆಂದರೆ, ತುಂಬಾ ದಿವಸದಿಂದ ನೋಡ್ತಾ ಇದ್ದೇನೆ. ಕಾಮಿಡಿ ಮತ್ತು ಪರ್ಸನಲ್‌ ಸ್ಪೇಸ್‌ ಮಧ್ಯೆ ಒಂದು ಲೈನ್‌ ಇರುತ್ತದೆ. ಆ ಲೈನ್‌ ಅನ್ನು ಕ್ರಾಸ್‌ ಮಾಡಬಾರದು. ಕಾಮಿಡಿ ಮಾಡಲಿ, ಆದರೆ ಲಿಮಿಟ್‌ ಕ್ರಾಸ್‌ ಮಾಡಬಾರದು. ಈ ವಾರ ಅಂತೂ ತುಂಬಾ ಲಿಮಿಟ್‌ ಕ್ರಾಸ್‌ ಮಾಡಿದ. ನನಗೆ ತುಂಬಾ ಹರ್ಟ್‌ ಆಯ್ತು ಎಂದು ಕಾರಣ ಕೊಟ್ಟರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯ (Bigg Boss Kannada 12) ಈ ವಾರ ಗಿಲ್ಲಿಗೆ ಕಳಪೆ (Gilli Nata Kalape) ಪಟ್ಟ ಸಿಕ್ಕಿದೆ. ಚೈತ್ರಾ ಉತ್ತಮ ಪಡೆದುಕೊಂಡಿದ್ದಾರೆ. ಚೈತ್ರಾ ಕುಂದಾಪುರ (Chaithra Kundapura) ಅವರಿಗೆ ಕಳೆದ ಸೀಸನ್‌ನಲ್ಲಿ ಉತ್ತಮ ಪಟ್ಟ ಸಿಗೋದಕ್ಕೆ ಸುಮಾರು 100 ದಿನಗಳೇ ಬೇಕಾಯ್ತು. ಆದರೆ ಗಿಲ್ಲಿಗೆ ಇದು ಎರಡನೇ ಬಾರಿ ಕಳಪೆ ಸಿಕ್ಕಿದೆ.

ಅಷ್ಟೇ ಅಲ್ಲ ಗಿಲ್ಲಿಗೆ ಕಳಪೆ ಸಿಕ್ಕಿದ್ದಕ್ಕಿಂತ ಕುಚಿಕು ರಘು ವರ್ತನೆ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ ಗಿಲ್ಲಿ ಫ್ಯಾನ್ಸ್‌. ಇದೀಗ ಲೈವ್‌ ವಿಡಿಯೋ (Live video) ಒಂದು ವೈರಲ್‌ ಆಗುತ್ತಿದೆ. ಒಂದು ತುತ್ತು ತಿನಿಸು ಅಂತ ಅದೆಷ್ಟೇ ಗೆಳೆಯನಿಗೆ ಕೇಳಿಕೊಂಡರೂ ರಘು ಮಾತ್ರ ಗಿಲ್ಲಿಗೆ ಕ್ಯಾರೇ ಅನ್ನಲಿಲ್ಲ. ಈ ವಿಡಿಯೋ ಕಂಡು ಗಿಲ್ಲಿ ಫ್ಯಾನ್ಸ್‌ (Gilli Fans) ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಜಂಟಿ ಕ್ಯಾಪ್ಟನ್‌ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು

ಕುಚಿಕು ರಘು ಈಗ ದೂರ ದೂರ!

ನಿನ್ನೆಯ ಎಪಿಸೋಡ್‌ನಲ್ಲಿ ಕುಚಿಕು ರಘು ಅವರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ ಕಳಪೆಯನ್ನು ನಾನು ಗಿಲ್ಲಿಗೆ ನೀಡುತ್ತಿದ್ದೇನೆ. ಯಾಕೆಂದರೆ, ತುಂಬಾ ದಿವಸದಿಂದ ನೋಡ್ತಾ ಇದ್ದೇನೆ. ಕಾಮಿಡಿ ಮತ್ತು ಪರ್ಸನಲ್‌ ಸ್ಪೇಸ್‌ ಮಧ್ಯೆ ಒಂದು ಲೈನ್‌ ಇರುತ್ತದೆ. ಆ ಲೈನ್‌ ಅನ್ನು ಕ್ರಾಸ್‌ ಮಾಡಬಾರದು. ಕಾಮಿಡಿ ಮಾಡಲಿ, ಆದರೆ ಲಿಮಿಟ್‌ ಕ್ರಾಸ್‌ ಮಾಡಬಾರದು. ಈ ವಾರ ಅಂತೂ ತುಂಬಾ ಲಿಮಿಟ್‌ ಕ್ರಾಸ್‌ ಮಾಡಿದ. ನನಗೆ ತುಂಬಾ ಹರ್ಟ್‌ ಆಯ್ತು ಎಂದು ಕಾರಣ ಕೊಟ್ಟರು.

ವೈರಲ್‌ ವಿಡಿಯೋ



ಫ್ಯಾನ್ಸ್‌ ಬೇಸರ

ಇದಕ್ಕಿಂತ ಹೆಚ್ಚಾಗಿ ರಘು ಅವರು ಗಿಲ್ಲಿಗೆ ಮಾಡಿದ ವರ್ತನೆ ಬಗ್ಗೆ ಫ್ಯಾನ್ಸ್‌ ಬೇಸರ ಹೊರ ಹಾಕಿದ್ದಾರೆ. ರಘು ಅರು ಚಪಾತಿ ತಿನ್ನುತ್ತಿರುತ್ತಾರೆ. ಒಂಚೂರ್‌ ಟೇಸ್ಟ್‌ ಮಾಡ್ತೀನಿ ಕೊಡಣ್ಣ ಅಂತ ರಘುಗೆ ಗಿಲ್ಲಿ ಪ್ರೀತಿ ಇಂದ ಕೇಳ್ತಾರೆ. ಆದ್ರೆ ರಘು ಮಾತ್ರ ಕೊಡೋದೇ ಇಲ್ಲ. ಅಲ್ಲಿಂದ ಗಿಲ್ಲಿ ಎದ್ದು ಹೋಗ್ತಾರೆ. ಅದೇ ಕ್ಷಣಕ್ಕೆ ರಾಶಿಕಾ ಬಂದು ರಘು ತಟ್ಟೆಯಲ್ಲಿ ಕೈ ಹಾಕಿ ತಿನ್ನುತ್ತಾರೆ. ರಘು ಮಾತ್ರ ಏನೂ ಹೇಳುವುದಿಲ್ಲ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಸಮಾಧಾಮ ಹೊರ ಹಾಕಿದ್ದಾರೆ ಫ್ಯಾನ್ಸ್‌.



ಫ್ಯಾನ್ಸ್‌ ಕಮೆಂಟ್‌

ಒನ್ ತುತ್ತು ಊಟ ಕೇಳಿದ್ದು ಗಿಲ್ಲಿ. ಫುಲ್ ಪ್ಲೇಟ್ ಕೇಳಿಲ್ಲ. ರಘು ಮನುಷ್ಯನೇ ಅಲ್ಲ.ಮಾನವೀಯತೆ ಇಂದ ಸ್ವಲ್ಪ ಊಟ ಕೊಡು ಅಂಥ ಕೇಳಿದಕ್ಕೆ ಕೊಡಲ್ಲ ಅಂತಿಯಲ್ಲ ಎಂದು ಕಮೆಂಟ್‌ ಮಾಡಿದ್ದಾರೆ. ರಘು ಅವರ ವರ್ತನೆ ತುಂಬಾ ಕೆಟ್ಟದಾಗಿ ಕಾಣಿಸಿತು.

ಇಷ್ಟು ದಿವಸ ಮುಖವಾಡ ಹಾಕೊಂಡು ಇದ್ರೂ ರಘು ಸರ್ , ಇವಾಗ ಗೊತ್ತಾಗ್ತಾಯಿದೆ ಅವರ ನಿಜವಾದ ಮುಖ ಒಂದು ತುತ್ತು ಊಟ ಕೊಡಕ್ಕಾಗ್ಲಿಲ್ಲ. ರಘುಗೆ ಮನುಷ್ಯತ್ವ ಇಲ್ಲ ಅಂತ ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟಗೆ ಕಳಪೆ! ಎಚ್ಚರಿಕೆಯಿಂದಿರು ಅಂತ ವಾರ್ನ್‌ ಮಾಡಿದ್ದೇಕೆ ಚೈತ್ರಾ ಕುಂದಾಪುರ?

ರಘು ಕಳಪೆ ಕೊಟ್ಟ ಬಳಿಕವೂ ಸ್ಪಂದನಾ, ರಕ್ಷಿತಾ, ಚೈತ್ರಾ ಅವರ ಮುಂದೆ ಗಿಲ್ಲಿ ಬಗ್ಗೆಯೇ ದೂರನ್ನ ಹೇಳಿದರು. ಇಲ್ಲಿ ಮೂರು ತಿಂಗಳಲ್ಲಿ ನಾನು ನನ್ನನ್ನು ಡೌನ್‌ ಮಾಡಿಕೊಳ್ಳಲು ಆಗಲ್ಲ. ಅವನ ತಮಾಷೆ ಅತಿರೇಕವಾಗುತ್ತೆ. ಇತ್ತೀಚೆಗೆ ಕಾಮಿಡಿ ಅತಿರೇಕವಾಗುತ್ತಿದೆ. ನನ್ನ ಹೈಟ್ ಬಗ್ಗೆ, ಬಾಡಿ ಬಗ್ಗೆ ಮಾತನಾಡುತ್ತಾನೆ. ನಾಲ್ಕು ಜನರ ಮುಂದೆ ಮಾತನಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ಈ ಶೋನ ಕೋಟಿ ಕೋಟಿ ಜನರು ನೋಡುತ್ತಾ ಇರುತ್ತಾರೆ. ನನ್ನ ವರ್ಚಸ್ಸನ್ನು ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ’ ಎಂದು ರಘು ಹೇಳಿದರು.

Yashaswi Devadiga

View all posts by this author