Bigg Boss Kannada 12: ಅಶ್ವಿನಿ ವಿಚಾರವಾಗಿ ರಘು ಕಾಲೆಳೆದ ಗಿಲ್ಲಿ! ಕಾಮಿಡಿ ಕ್ಲಿಪ್ ಸಖತ್ ವೈರಲ್
Gilli Nata: ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದು, ಇದಕ್ಕಾಗಿ ಜೋಡಿ ಟಾಸ್ಕ್ ನೀಡಲಾಗಿದೆ .ಕಾವ್ಯಾ ಶೈವ ಮತ್ತು ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ, ರಾಶಿಕಾ ಶೆಟ್ಟಿ & ಸೂರಜ್ ಸಿಂಗ್, ಅಭಿಷೇಕ್ ಶ್ರೀಕಾಂತ್ ಮತ್ತು ಸ್ಪಂದನಾ ಸೋಮಣ್ಣ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿಗಳು. ಮೊದಲ ಸುತ್ತಿನಲ್ಲಿ ಚೈತ್ರಾ ಮತ್ತು ರಜತ್ ಆಟದಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಕ್ಯಾಪ್ಟನ್ಸಿ ಟಾಸ್ಕ್ (Captaincy Task) ಜೋರಾಗಿದೆ. ಈಗ ಜೋಡಿ ಟಾಸ್ಕ್ ನೀಡಲಾಗಿದ್ದು, ಕಾವ್ಯಾ ಹಾಗೂ ಗಿಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಇವರನ್ನು ಸೋಲಿಸಬೇಕು ಎಂದು ಸೂರಜ್ ಹಾಗೂ ರಾಶಿಕಾ (Sooraj Rashika) ಸೇರಿದಂತೆ ಮನೆಯ ಅನೇಕರು ನಿರ್ಧಾರ ಮಾಡಿದ್ದಾರೆ. ಇದರ ಮಧ್ಯೆ ಗಿಲ್ಲಿಯ ತಮಾಷೆ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಗಿಲ್ಲಿಯ (Gilli Nata) ಕಾಮಿಡಿ ಕ್ಲಿಪ್ ಸಖತ್ ವೈರಲ್ ಆಗುತ್ತಿದೆ. ಲೈವನಲ್ಲಿರೋ ಈ ಸಭಾಷಣೆಗೆ ಬಿದ್ದು ಬಿದ್ದು ನಕ್ಕಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಗಿಲ್ಲಿ ಕಾಮಿಡಿಗೆ ರಜತ್ ಸಾಥ್ ಕೊಟ್ಟಿದ್ದಾರೆ.
ಏನಿದು ಟಾಸ್ಕ್?
ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಇರಲಿದ್ದು, ಇದಕ್ಕಾಗಿ ಜೋಡಿ ಟಾಸ್ಕ್ ನೀಡಲಾಗಿದೆ .ಕಾವ್ಯಾ ಶೈವ ಮತ್ತು ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಮತ್ತು ಮಾಳು ನಿಪನಾಳ, ರಾಶಿಕಾ ಶೆಟ್ಟಿ & ಸೂರಜ್ ಸಿಂಗ್, ಅಭಿಷೇಕ್ ಶ್ರೀಕಾಂತ್ ಮತ್ತು ಸ್ಪಂದನಾ ಸೋಮಣ್ಣ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿಗಳು.
ಇದನ್ನೂ ಓದಿ: Bigg Boss Kannada 12: ಕಾವ್ಯ - ಗಿಲ್ಲಿನ ಸೋಲಿಸಲು ಪಣ ತೊಟ್ಟ ರಾಶಿಕಾ, ಸೂರಜ್
ಜೋಡಿ ಸ್ಪರ್ಧಿಗಳು ಜೊತೆಯಾಗಿ ಒಂದು ಕಾಲಿಗೆ ದಾರ ಕಟ್ಟಿಕೊಂಡು ಮುಂದಿರುವ ಬಾಲ್‌ಗಳನ್ನು ಶೇಖರಿಸಬೇಕು. ಕ ಯಾರು ಹೆಚ್ಚು ಬಾಲ್ ಸಂಗ್ರಹಿಸುತ್ತಾರೋ ಅವರು ವಿನ್. ಮೊದಲ ಸುತ್ತಿನಲ್ಲಿ ಚೈತ್ರಾ ಮತ್ತು ರಜತ್ ಆಟದಿಂದ ಹೊರಗೆ ಉಳಿದಿದ್ದಾರೆ ಎನ್ನಲಾಗಿದೆ.
ವೈರಲ್ ವಿಡಿಯೋ
Rajath and Gilli cracking jokes#BBK12 pic.twitter.com/5tj9MwNXhL
— Venkat ⚡️ (@WealthArigato) December 3, 2025
ರಘು ಹಾಗೂ ಅಶ್ವಿನಿ ಗೌಡ ಅವರು ಬಾಲ್ ಅತ್ಯಂತ ಕಡಿಮೆ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ರಘು ಅವರು ಗೇಮ್ ವಿಚಾರವಾಗಿ ಚೈತ್ರಾ, ರಜತ್, ಗಿಲ್ಲಿ ಮುಂದೆ ಮಾತನಾಡಿದ್ದಾರೆ, ಗಿಲ್ಲಿ ತಮಾಷೆಗೆ ನಕ್ಕಿದ್ದಾರೆ ವೀಕ್ಷಕರು.
ರಘು ಆಯ್ಕೆಯೇ ಸರಿ ಇಲ್ವಾ?
ರಘು ಅವರು ಮೊದಲಿಗೆ ಎಲ್ಲಿ ಮಿಸ್ಟೇಕ್ ಆಯ್ತು ಅಂತ ಆವಾಗಿನಿಂದ ಯೋಚನೆ ಮಾಡ್ತಾ ಇದ್ದೀನಿ ಎನ್ನುತ್ತಾರೆ, ಅದಕ್ಕೆ ಗಿಲ್ಲಿ ಇದ್ದವರು, ನಿನ್ನ ಸೆಲೆಕ್ಷನ್‌ನಲ್ಲಿಯೇ ಮಿಸ್ಟೇಕ್ ಇದೆ ಎಂದು ತಮಾಷೆ ಮಾಡಿದ್ದಾರೆ, ಅಂದರೆ ಅಶ್ವಿನಿ ಆಯ್ಕೆ ಬಗ್ಗೆ ಪರೋಕ್ಷವಾಗಿ ಹೇಳಿದರು.
ಅದಕ್ಕೆ ರಘು ಇದ್ದವರು, ನೀನು ಅಶ್ವಿನಿ ಇದ್ದಿದ್ದರೆ, ಅಂತ ತಮಾಷೆ ಮಾಡಿದರು. ಅದಕ್ಕೆ ಗಿಲ್ಲಿ ಇದ್ದವರು, ಕಾವ್ಯ ದಾನ ಮಾಡಿ ಪುಣ್ಯ ಕಟ್ಟಕೊಂಡೆ ಅಂತ ರಘುಗೆ ತಮಾಷೆ ಮಾಡಿದ್ದಾರೆ. ನೋವಲ್ಲೂ ನಗೋದು ಅಂದ್ರೆ ಇದೆ ಎಂದಿದ್ದಾರೆ ಗಿಲ್ಲಿ. ರಜತ್ ಕೂಡ ಈ ವೇಳೆ ಗಿಲ್ಲಿ ಕಾಮಿಡಿಗೆ ಸಾಥ್ ಕೊಟ್ಟಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್ ಆದ ಅಶ್ವಿನಿ ಗೌಡ
ರಘು ಜೋಡಿಯಾದ ಅಶ್ವಿನಿ ಅವರು ತುಂಬಾ ಸೈಲೆಂಟ್ ಆಗಿದ್ದಾರೆ. ಈ ವಾರ ನಾಮಿನೇಶನ್‌ನಿಂದ ಪಾರಾಗಿದ್ದಾರೆ. ಹೀಗಾಗಿ ಇದೇ ಕಾರಣವನ್ನು ಇಟ್ಟುಕೊಂಡು ಸ್ಪರ್ಧಿಗಳು ನಾಮಿನೇಟ್ ಮಾಡಬಹದು. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರುವ ಚೈತ್ರಾ ಕುಂದಾಪುರ ಮತ್ತು ರಜತ್ ಅವರನ್ನು ನಾಮಿನೇಟ್ ಮಾಡುವಂತಿರಲಿಲ್ಲ.