ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸುದೀಪ್​​ ಅವರನ್ನೇ ಇಮಿಟೇಟ್ ಮಾಡಿದ ಗಿಲ್ಲಿ! ಬಿದ್ದು ಬಿದ್ದು ನಕ್ಕ ಕಿಚ್ಚ

BBK 12: ಗಿಲ್ಲಿ ಅವರು ಸುದೀಪ್‌ ಅವರನ್ನ ಇಮಿಟೇಟ್‌ ಮಾಡಿದ್ದಾರೆ. ಕಿಚ್ಚ ಸುದೀಪ್‌ ಅಂತೂ ಬಿದ್ದು ಬಿದ್ದು ನಕ್ಕಿದ್ದಾರೆ .ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ. ಗಿಲ್ಲಿಯವರು ಸುದೀಪ್ ಸ್ಟೈಲ್​ನಲ್ಲಿ ಡೈಲಾಗ್ ಹೊಡೆದು ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡಿದ್ದಾರೆ. ಸುದೀಪ್ ಅವರು, ಗಿಲ್ಲಿಯಾಗಿದ್ದು, ಗಿಲ್ಲಿ ಸುದೀಪ್ ಆಗಿ ಗೆಟಪ್ ಚೇಂಜ್ ಮಾಡಿದ್ದಾರೆ. ಇಲ್ಲಿದೆ ಪ್ರೋಮೋ.

ಬಿಗ್‌ ಬಾಸ್‌ ಕನ್ನಡ

ಶನಿವಾರ ಕಿಚ್ಚ ಸುದೀಪ್‌ (Kichcha Sudeep) ಅವರು ಸ್ಪರ್ಧಿಗಳಿಗೆ ಮಾಸ್‌ ಕ್ಲಾಸ್‌ ತೆಗೆದುಕೊಂಡರೆ, ಭಾನುವಾರ ಮಾತ್ರ ಸ್ಪರ್ಧಿಗಳೊಂದಿಗೆ ತಮಾಷೆ (Comedy) ಮಾಡ್ತಾರೆ. ಈಗ ಹೊಸ ಪ್ರೋಮೋದಲ್ಲಿ (Promo) ಗಿಲ್ಲಿ ಅವರು ಕಿಚ್ಚ ಸುದೀಪ್‌ ಆಗಿದ್ದಾರೆ. ಹೌದು ಸುದೀಪ್‌ ಅವರನ್ನ ಇಮಿಟೇಟ್‌ (imitate) ಮಾಡಿದ್ದಾರೆ. ಕಿಚ್ಚ ಸುದೀಪ್‌ ಅಂತೂ ಬಿದ್ದು ಬಿದ್ದು ನಕ್ಕಿದ್ದಾರೆ (laugh). ಉಳಿದ ಸ್ಪರ್ಧಿಗಳು ನಗೆಗಡಲಲ್ಲಿ ತೇಲಿದ್ದಾರೆ.

ಗಿಲ್ಲಿಯ ಮಸ್ತ್‌ ಕಾಮಿಡಿ

ಮೊದಲಿಗೆ ಕಿಚ್ಚ ಅವರು, ʻಇಂದು ನನ್ನನ್ನು ಗಿಲ್ಲಿ ಅವರು ಇಮಿಟೇಟ್‌ ಮಾಡಬೇಕುʼ ಎಂದರು ಕಿಚ್ಚ. ʻಈಗ ನಾನು ಗಿಲ್ಲಿ ಆಗುವೆʼ ಎಂದು ಗಿಲ್ಲಿ ರೀತಿ ನಿಂತುಕೊಂಡರು ಕಿಚ್ಚ. ಆ ಬಳಿಕ ಕಿಚ್ಚ ಅವರು ಸುದೀಪ್‌ ರೀತಿ ಬ್ರೆಸ್‌ಲೆಟ್‌ ಹಾಕಿಕೊಂಡು, ʻನೋಡಿ ರಿಷಾ ಅವರೇ ಈ ಮನೆಯಲ್ಲಿ ಕೂಗಾಡಿದ್ರೆ ಮಾತ್ರ ಪ್ಲಾಬ್ಲಂ ಆಗಲ್ಲ, ವಾಂತಿ ಮಾಡಿದ್ರೂ ಆಗತ್ತೆʼ ಎಂದು ಡೈಲಾಗ್‌ಹೇಳಿದರು.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆ ಛತ್ರ ಅಲ್ಲ; ರಾಶಿಕಾ -ರಿಷಾಗೆ ಕಿಚ್ಚ ಸುದೀಪ್‌ ಎಚ್ಚರಿಕೆ

ಕಾವ್ಯ ಅವರಿಗೆ ಗಿಲ್ಲಿ ಕವನ ಮೂಲಕ ಡೈಲಾಗ್‌ ಕೊಟ್ಟರು. ʻಬಿಗ್‌ ಬಾಸ್‌ ಮನೆಯಲ್ಲಿ ನಾನು ಒಂಥರ ಅಪ್ಸರಾ. ಅವಳ ಕಣ್ಣುಗಳ ನೋಡೋದಕ್ಕೆ ಸುಂದರʼ ಎಂದು ಹೇಳಿದ್ದಾರೆ. ಅದಕ್ಕೆ ಸುದೀಪ್‌ ಅವರು, ʻನಾನು ಹೇಳಿದ ಹಾಗೇ ಇಲ್ವಲ್ಲʼ ಎಂದು ಗಿಲ್ಲಿ ಕಾಳೆಲದರು. ಆದ್ರೆ ಗಿಲ್ಲಿ ಸುದೀಪ್‌ ಅವರ ಡೈಲಾಗ್‌ನಂತೆ, ʻಕೊನೆಯಲ್ಲಿ ಹೇಳಬೇಕು ಅನ್ನಿಸಿತು ಹೇಳ್ದೆʼ ಎಂದಿದ್ದಾರೆ. ಹೀಗೆ ಹೇಳುತ್ತಲೇ ಕಿಚ್ಚ ನಕ್ಕಿದ್ದಾರೆ.



ಓವರ್‌ಕಾನ್‌ಫಿಡೆನ್ಸ್‌ ಬೇಡ

ನಿನ್ನೆಯ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಗಿಲ್ಲಿ ಅವರಿಗೆ ಓವರ್‌ಕಾನ್‌ಫಿಡೆನ್ಸ್‌ ಬೇಡ ಎಂದು ವಾರ್ನ್‌ ಮಾಡಿದ್ದರು. ಅಂತಿಮವಾಗಿ ಇಬ್ಬರೂ ಚೆನ್ನಾಗಿ ಆಟ ಆಡುತ್ತಿದ್ದೀರಿ ಆದರೆ ಆ ಆಟದಲ್ಲಿ ಸ್ಪಷ್ಟತೆ ಇರಲಿ, ಮಾತು ಹಾಗೂ ವರ್ತನೆಗಳ ಮೇಲೆ ಲಗಾಮು ಇರಲಿ ಎಂದರು. ರಕ್ಷಿತಾ ಬಗ್ಗೆ ಮನೆಯವರು ತಪ್ಪು ಮಾಡಿದಾಗ ನಾನು ನಿಮ್ಮ ಪರ ನಿಂತಿದ್ದೆ. ಆದರೆ ಈಗ ನೀವು ತಪ್ಪು ಮಾಡಿದಾಗ ಹೇಳುವುದು ನನ್ನ ಕರ್ತವ್ಯ, ಇನ್ನೊಮ್ಮೆ ಇಂಥಹಾ ತಪ್ಪುಗಳನ್ನು ಮಾಡಬೇಡಿ’ ಎಂದಿದ್ದರು.
ಇದನ್ನೂ ಓದಿ: Bigg Boss Kannada 12: ಕಾಡಿ ಬೇಡಿ ಬಿಗ್‌ ಬಾಸ್‌ ಮನೆ ಒಳಗೆ ಹೋಗಿರೋದು ಯಾರು? ಜಾಹ್ನವಿಗೆ ಕಿಚ್ಚನ ನೇರ ಪ್ರಶ್ನೆ

ಈ ವಾರ ಈ ವಾರ ಬಿಗ್‌ ಬಾಸ್‌ʼ ಮನೆಯಲ್ಲಿ ಈ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್‌ ಆಗಿದ್ದರು. ನಿನ್ನೆ ರಕ್ಷಿತಾ ಅಶ್ವಿನಿ ಸೇಫ್‌ ಆಗಿದ್ದಾರೆ

Yashaswi Devadiga

View all posts by this author