Bigg Boss Kannada 12: ಕಾಡಿ ಬೇಡಿ ಬಿಗ್ ಬಾಸ್ ಮನೆ ಒಳಗೆ ಹೋಗಿರೋದು ಯಾರು? ಜಾಹ್ನವಿಗೆ ಕಿಚ್ಚನ ನೇರ ಪ್ರಶ್ನೆ
BBK 12: ಬಿಗ್ ಬಾಸ್ ಸ್ಪಂದನಾ ಸೋಮಣ್ಣ ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಜಾಹ್ನವಿ ಅವರು ಆರೋಪಿಸಿದ್ದರು. ಪದೇ ಪದೇ ಸ್ಪಂದನಾ ಏಕೆ ಸೇವ್ ಆಗ್ತಾ ಇದ್ದಾಳೆ? ಇಲ್ಲಿ ವೋಟ್ ಕೂಡ ಮುಖ್ಯನೇ ಇಲ್ಲ ಅಂತಿಲ್ಲ. ನಮ್ಮ ಚಾನೆಲ್ ಅಂದಾಗ, ಪುಶ್ ಕೂಟ್ಟೇ ಕೊಡ್ತಾರೆ. ಅಭಿ ಹಾಗೇ ಸ್ಪಂದನಾನೇ ಎಂದು ಆರೋಪಿಸಿದ್ದರು. ಈ ಬಗ್ಗೆ ಕಿಚ್ಚ ಅವರು ಜಾಹ್ವನಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್‌ನಲ್ಲಿ (Bigg Boss Kannada 12) ಸ್ಪಂದನಾ ಸೋಮಣ್ಣ (Spandana Somanna) ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಈ ಹಿಂದೆ ಜಾಹ್ನವಿ (Jhanvi) ಆರೋಪಿಸಿದ್ದರು. ಬಿಗ್ ಬಾಸ್ ವೋಟ್ (Bigg Boss Vote) ಆಧಾರದ ಮೇಲೆ ನಿಂತಿದೆ ಎನ್ನೋದು ಗೊತ್ತೇ ಇರುವ ವಿಚಾರ. ಆದರೂ ಜಾಹ್ನವಿ ಅವರು ಧಾರಾವಾಹಿ ಕಾಣಿಸಿಕೊಳ್ಳುವವರನ್ನು ಬಿಗ್ಬಾಸ್ ಮನೆಯಿಂದ ಬೇಗ ಹೊರಗೆ ಕಳಿಸಲ್ಲ, ಎತ್ತುತ್ತದೆ ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಸುದೀಪ್ (Sudeep) ಮುಂದೆಯೂ ಹೇಳಿ ಸಮರ್ಥಿಸಿಕೊಳ್ಳಲು ನೋಡಿದರು. ಆದರೆ ಕಿಚ್ಚ ನೀವೇ ತಾನೆ ಚಾನೆಲ್ ಬಳಿ ರಿಕ್ವೆಸ್ಟ್ ಮಾಡಿ ಹೋಗಿರೋದು ಎಂದು ನೇರವಾಗಿ ಹೇಳಿದ್ದಾರೆ.
ಜಾಹ್ನವಿ ಆರೋಪ ಏನು?
ʻಇಡೀ ಮನೆಗೆ ಗೊತ್ತು ಸ್ಪಂದನಾ ವೀಕ್ ಅಂತ. ಅದರೂ ಸೇವ್ ಆಗ್ತ ಇದ್ದಾಳೆ. ಟಾಸ್ಕ್‌ನಲ್ಲೂ ಇಲ್ಲ. ಅವಳು ಇಲ್ಲಿ ಸೀರಿಯಲ್ ಹೀರೋಯಿನ್. ಮತ್ತು ಹೊರಗಡೆ ಫ್ಯಾನ್. ಅವಳನ್ನ ಎತ್ತುತ್ತಾಯಿದ್ದಾರೆ ಅಂತ ನನಗೆ ಅನಿಸೋದು. ಯಾಕಂದ್ರೆ, ಮಾತಾಡೋಕೆ ಬರಲ್ಲ. ನಮ್ಮ ಚಾನೆಲ್‌ನವರು ನಮ್ಮ ಕಡೆಯವರು ಸುಮ್ನಿರಿ ಇನ್ನೇನು ಹೋಗ್ತಾಳೆ, ಎನ್ನುವಾಗ ಯಾಕೆ ಉಳ್ಕೊಳ್ತಾಳೆ. ಫ್ಯಾನ್ ಫಾಲೋವಿಂಗ್. ಅದೂ ಮ್ಯಾಟರ್ ಆಗುತ್ತೆ ಇಲ್ಲಿ’’ ಎಂದು ಜಾಹ್ನವಿ ಆರೋಪಿಸಿದ್ದರು.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ
ಚಾನೆಲ್ ಎತ್ತುತ್ತಿದ್ದಾರೆ
ಕಿಚ್ಚನ ಮುಂದೆಯೂ ಜಾಹ್ನವಿ ಮಾತನಾಡಿ, ಸ್ಪಂದನಾರನ್ನ ಚಾನೆಲ್ ಎತ್ತುತ್ತಿದ್ದಾರೆ. ಫ್ಯಾನ್ ಫಾಲೋವಿಂಗ್ ಮ್ಯಾಟರ್ ಆಗುತ್ತೆ ಅಂತ ನಾನು ಹೇಳಿದ್ದೀನಿ. ಚಾನೆಲ್ ಉಳಿಸಿಕೊಳ್ಳೋಕೆ ಪ್ರಯತ್ನ ಪಡುತ್ತದೆ ಅನ್ನೋದು ನನ್ನ ಅಭಿಪ್ರಾಯ’ ಎಂದರು.
ಆ ಬಳಿಕ ಕಿಚ್ಚ ಮಾತನಾಡಿ, ನೀವೇ ರಿಕ್ವೆಸ್ಟ್ ಮಾಡಿ ಚಾನೆಲ್ ಹತ್ತಿರ ಒಳಗೆ ಹೋಗಿರೋದು. ಈ ಸತ್ಯ ನಿಮಗೆ ಅನಿಸಿದರೆ ಯಾಕೆ ಹೋಗಬೇಕು?’ ಚಂದ್ರಪ್ರಭ ಕೂಡ ವಾಹಿನಿಯಿಂದಲೇ ಬಂದಿರೋದು ಅವರೇ ಹೊರ ಹೋಗಿದ್ದಾರೆ. ಸೂರಜ್‌ಗೆ ವಾಹಿನಿ ಗೊತ್ತಿಲ್ಲ. ಇಲ್ಲಿ ಮೈಕ್ ಇರೋದು ನೀವು ಮಾತಾಡೋದನ್ನ ಕೇಳಿಸಿಕೊಳ್ಳೋಕೆ, ಕ್ಯಾಮರಾ ಇರೋದು ನಿಮ್ಮ ನಡವಳಿಕೆ ನೋಡೋಕೆ.
ಕಾಡಿ ಬೇಡಿ ಒಳಗೆ ಹೋಗಿರುವುದು
ಈ ಶೋ ಅನ್ನು ವಾಹಿನಿಯೊಟ್ಟಿಗೆ ನೇರ ಸಂಬಂಧ ಇಲ್ಲದಿರುವವರೇ ಗೆದ್ದಿರುವುದು ಹೆಚ್ಚು ಎಂದರು.
ಯಾವಾಗ ಜಾಹ್ನವಿ ಅವರು ಬ್ರೇಕ್ನಲ್ಲಿ ಮತ್ತೆ ನಾನು ಹೇಳಿದ್ದು ಸರಿ ಎಂಬಂತೆ ಮಾತನಾಡಿದರೋ ಕಿಚ್ಚನಿಗೆ ಕೋಪ ಬರಿಸುವಂತೆ ಮಾಡಿದೆ. ನೀವು ಇದೇ ವಾಹಿನಿಯನ್ನು ಕಾಡಿ ಬೇಡಿ ಒಳಗೆ ಹೋಗಿರುವುದು ಎಂಬುದನ್ನು ಮರೆಯಬೇಡಿ’ ಎಂದು ಖಡಕ್ ಆಗಿ ಅಂದರು.
ಜಾಹ್ನವಿ ಹಾಗೂ ಅಶ್ವಿನಿ ಅವರು ಚೇಂಜಿಂಗ್ ರೂಮ್‌ನಲ್ಲಿ ಸೀಕ್ರೆಟ್ ಆಗಿ ಮಾತನಾಡಿರೋದು ಕೂಡ ಸುದೀಪ್ ಚರ್ಚೆ ಮಾಡಿದರು.
ಇದನ್ನೂ ಓದಿ: Bigg Boss Kannada 12: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ? ಗಿಲ್ಲಿ ಸೀಕ್ರೆಟ್ ಮ್ಯಾಚ್ ಬಗ್ಗೆ ಸುದೀಪ್ ಕೆಂಡ!
ಚೇಂಜಿಂಗ್ ರೂಮ್ ಇರೋದು ಖಾಸಗಿತನಕ್ಕಾಗಿ ನೀಡಿರುವ ಜಾಗ. ಆದರೆ ನೀವು ಅಲ್ಲಿ ಹಾಗೆ ಮಾತನಾಡಿರೋದು ಸರಿಯಾ? ಎಂದು ಗರಂ ಆಗಿಯೇ ಕ್ಲಾಸ್ ತೆಗೆದುಕೊಂಡರು.