Bigg Boss Kannada 12: ಬಿಗ್ ಬಾಸ್ ಮನೆ ಛತ್ರ ಅಲ್ಲ; ರಾಶಿಕಾ -ರಿಷಾಗೆ ಕಿಚ್ಚ ಸುದೀಪ್ ಎಚ್ಚರಿಕೆ
BBK 12: ಮೊದಲಿಗೆ ರಾಶಿಕಾ ಬಗ್ಗೆ ಧ್ರುವಂತ್ ಹೇಳಿರುವ ಮಾತುಗಳನ್ನ ವಿಟಿಯಲ್ಲಿ ತೋರಿಸಿದರು. ರಾಶಿಕಾ ಅವರು ಅಭಿ ಹತ್ರ ಹೋದರೂ ವರ್ಕ್ ಆಗಲಿಲ್ಲ, ನನ್ನ ಬಳಿ ಬಂದ್ರು ವರ್ಕ್ ಆಗಲಿಲ್ಲ, ಈಗ ಸೂರಜ್ ಬಳಿ ಹೋಗಿದ್ದಾರೆ ಎಂದು ಹೇಳಿದ್ದರು. ಇದನ್ನ ಸ್ವತಃ ಕಾವ್ಯ ಅವರೇ ರಾಶಿಕಾ ಬಳಿ ಹೇಳಿದ್ದರು. ಈ ವಿಟಿ ನೋಡಿ ರಾಶಿಕಾ ತಪ್ಪು ಎಂದಿದ್ದಾರೆ. ಆದರೆ ಸುದೀಪ್ ಈ ವೇಳೆ ರಾಶಿಕಾ ಅವರು ಧ್ರುವಂತ್ ಅವರ ಕೆಲವು ವಸ್ತುಗಳನ್ನು ಇಟ್ಟುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು.
ಬಿಗ್ ಬಾಸ್ ಕನ್ನಡ -
ಕಿಚ್ಚ ಸುದೀಪ್ (Sudeep) ಅವರು ಧ್ರುವಂತ್ (Dhruvanth) ಹಾಗೂ ರಾಶಿಕಾ (Rashika) ವಿಚಾರಕ್ಕೆ ನಿನ್ನೆ ಸ್ವಲ್ಪ ತಾಳ್ಮೆ ಕಳೆದುಕೊಂಡೇ ಮಾತನಾಡಿದರು. 'ರಾಶಿಕಾ ಅವರು ಅಭಿ ಹತ್ರ ಹೋದರೂ ವರ್ಕ್ ಆಗಲಿಲ್ಲ, ನನ್ನ ಬಳಿ ಬಂದ್ರು ವರ್ಕ್ ಆಗಲಿಲ್ಲ, ಈಗ ಸೂರಜ್ ಬಳಿ ಹೋಗಿದ್ದಾರೆ'' ಎಂದು ಧ್ರುವಂತ್ ಹೇಳಿದ್ರು ಎಂಬ ಕಾರಣಕ್ಕೆ ರಾಶಿಕಾ ಕಿಡಿಕಾರಿದ್ದರು.
ಇದೆಲ್ಲಾ ಸುಳ್ಳು ಅಂದ್ಮೇಲೆ ಧ್ರುವಂತ್ ವಸ್ತುಗಳನ್ನ ರಾಶಿಕಾ (Rashika) ಯಾಕೆ ಇಟ್ಟುಕೊಂಡಿದ್ರು ಅನ್ನೋದು ವೀಕ್ಷಕರ ಪ್ರಶ್ನೆಯೂ ಕೂಡ ಆಗಿತ್ತು. ರಾಶಿಕಾ ಶೆಟ್ಟಿ ಹಾಗೂ ರಿಷಾ ಗೌಡ (Risha Gowda) ಅವರು ನಡೆದುಕೊಂಡ ರೀತಿ ಬಗ್ಗೆ ಸುದೀಪ್ ಗರಂ ಆದರು.
ತಪ್ಪು ಎಂದ ರಾಶಿಕಾ
ಮೊದಲಿಗೆ ರಾಶಿಕಾ ಬಗ್ಗೆ ಧ್ರುವಂತ್ ಹೇಳಿರುವ ಮಾತುಗಳನ್ನ ವಿಟಿಯಲ್ಲಿ ತೋರಿಸಿದರು. ರಾಶಿಕಾ ಅವರು ಅಭಿ ಹತ್ರ ಹೋದರೂ ವರ್ಕ್ ಆಗಲಿಲ್ಲ, ನನ್ನ ಬಳಿ ಬಂದ್ರು ವರ್ಕ್ ಆಗಲಿಲ್ಲ, ಈಗ ಸೂರಜ್ ಬಳಿ ಹೋಗಿದ್ದಾರೆ ಎಂದು ಹೇಳಿದ್ದರು. ಇದನ್ನ ಸ್ವತಃ ಕಾವ್ಯ ಅವರೇ ರಾಶಿಕಾ ಬಳಿ ಹೇಳಿದ್ದರು.
ಈ ವಿಟಿ ನೋಡಿ ರಾಶಿಕಾ ತಪ್ಪು ಎಂದಿದ್ದಾರೆ. ಆದರೆ ಸುದೀಪ್ ಈ ವೇಳೆ ರಾಶಿಕಾ ಅವರು ಧ್ರುವಂತ್ ಅವರ ಕೆಲವು ವಸ್ತುಗಳನ್ನು ಇಟ್ಟುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದರು. ನಿಮಗೆ ಆಗದೇ ಇರೋ ವ್ಯಕ್ತಿಯ ವಸ್ತುಗಳನ್ನು ಇಟ್ಟುಕೊಂಡರೇ ಜನ ಇವರ ಮಧ್ಯೆ ಏನೋ ಇದೆ ಅಂತ ಅಂದುಕೊಳ್ತಾರೆ ಎಂದರು.
ಧ್ರುವಂತ್ ಕೂಡ ಯಾರೋ ಒಬ್ಬರ ಮಗನೇ
ಆ ಬಳಿಕ ಸುದೀಪ್ ಅವರು ರಿಷಾ ಅವರಿಗೆ, ಧ್ರುವಂತ್ ಜೊತೆ ಲವ್ ಟ್ರ್ಯಾಕ್ ಶುರು ಮಾಡಿ ಎಂದು ರಾಶಿಕಾ ಹೇಳಿದಾಗ ರಿಷಾ ಗೌಡ ವಾಕರಿಕೆ ಬಂದಂತೆ ನಡೆದುಕೊಂಡಿದ್ದರು.
ಈ ವಿಚಾರಕ್ಕೆ ಸುದೀಪ್ ಸಿಟ್ಟಾದರು. ‘ಧ್ರುವಂತ್ ಕೂಡ ಯಾರೋ ಒಬ್ಬರ ಮಗನೇ. ಅವರ ಬಗ್ಗೆ ಹೀಗೆ ಹೇಳೋಕೆ ಹೇಗೆ ಮನಸ್ಸು ಬರುತ್ತದೆ? ಲವ್ ಸ್ಟೋರಿ ಮಾಡಿ ಗೆಲ್ಲಬಹುದು ಎಂದುಕೊಳ್ಳಬೇಡಿ. ಈ ಮನೆ ಛತ್ರ ಅಲ್ಲ. ಬಿಗ್ ಬಾಸ್ ಮನೆಯನ್ನ ಹಾಳು ಮಾಡಬೇಡಿ’ ಎಂದು ರಾಶಿಕಾ ಹಾಗೂ ರಿಷಾಗೆ ಎಚ್ಚರಿಕೆ ನೀಡಿದರು.
ಅಸಲಿಗೆ ಆಗಿದ್ದೇನು?
ಈ ಬಗ್ಗೆ ಇಡೀ ಮನೆಯವರ ಮುಂದೆ ರಾಶಿಕಾ ವಿಚಾರವಾಗಿ ಧ್ರುವಂತ್ ಅವರು ವಿಲನ್ ಆಗಿದ್ದರು. ನೀವೇನು ಹೃತಿಕ್ ರೋಷನ್.. ಇವ್ರೆಲ್ಲಾ ಫ್ಯಾನ್ಸ್.. ನಿಮ್ಮ ಹಿಂದೆ ಬಂದು ಮಾತಾಡಿ, ಮಾತಾಡಿ ಅಂತ ನಿಮ್ಮನ್ನ ಕೇಳಬೇಕು ಅಂತ ನಿರೀಕ್ಷೆ ಮಾಡ್ತಿದ್ದೀರಾ?ʼ ಎಂದು ಅಭಿಷೇಕ್ ಕೂಡ ಧ್ರುವಂತ್‌ಗೆ ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: Bigg Boss Kannada 12: ಕಾಡಿ ಬೇಡಿ ಬಿಗ್ ಬಾಸ್ ಮನೆ ಒಳಗೆ ಹೋಗಿರೋದು ಯಾರು? ಜಾಹ್ನವಿಗೆ ಕಿಚ್ಚನ ನೇರ ಪ್ರಶ್ನೆ
ಆ ಬಳಿಕ ಧನುಷ್ ಜೊತೆ ಧ್ರುವಂತ್ ಮಾತನಾಡಿ, ನನ್ನ ವಸ್ತುಗಳನ್ನ ತೆಗೆದುಕೊಂಡು ರಾಶಿಕಾ ಇಟ್ಟುಕೊಂಡಿದ್ದಾರೆ. ಯಾಕೆ ಇಟ್ಟುಕೊಳ್ಳಬೇಕು?. ನಮಗೆ ಇಂಟರೆಸ್ಟ್ ಇಲ್ಲ ಅಂದ್ರೆ ಬಿಟ್ಬಿಡ್ಬೇಕು” ಎಂದು ಹೇಳಿಕೊಂಡಿದ್ದರು. ತಕ್ಷಣ ರಾಶಿಕಾ ಬಳಿ ಹೋಗಿ, ʻಧ್ರುವಂತ್ ಥಿಂಗ್ಸ್‌ಗಳು ನಿಮ್ಮ ಬಳಿ ಇದೆಯಾʼ ಎಂದು ಕೇಳಿದಾಗ,ಧ್ರುವಂತ್‌ಗೆ ಸೇರಿದ ವಸ್ತುಗಳನ್ನ ರಾಶಿಕಾ ಧನುಷ್ ಕೈಗೆ ಕೊಟ್ಟಿದ್ದರು.