ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ವಿಲನ್‌ ಆದ್ರೆ, ರಕ್ಷಿತಾ ಕುತಂತ್ರಿ ಎಂದ ಕಾವ್ಯ!

Gilli Nata: ಈ ವಾರ ಬಿಗ್‌ ಬಾಸ್‌ ಮನೆಯನ್ನ ವಿಲನ್‌ ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು. ಗಿಲ್ಲಿ ನಟ ಅಶ್ವಿನಿ ಗೌಡಗೆ ಒಂದು ಸೀಕ್ರೆಟ್‌ ಟಾಸ್ಕ್‌ ಕೊಟ್ಟಿದ್ದರು ಬಿಗ್‌ ಬಾಸ್‌. ಆ ವೇಳೆ ಕಾವ್ಯ ಶೈವ ಅವರನ್ನು ಅಳಿಸಬೇಕು, ಇನ್ನೊಂದು ಕಿಚ್ಚನ ಚಪ್ಪಾಳೆ ಫೋಟೋವನ್ನು ಯಾರಿಗೂ ಗೊತ್ತಾಗದ ಹಾಗೆ ಕದ್ದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು. ಈ ಎರಡೂ ಟಾಸ್ಕ್‌ ಗೆದ್ದರೆ ಡೈರೆಕ್ಟ್‌ ಆಗಿ ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಬಹುದು. ಅದನ್ನ ಯಶಸ್ವಿಯಾಗಿಯೇ ನಿಭಾಯಿಸಿದ್ದರು ಗಿಲ್ಲಿ. ಆದರೀಗ ಗಿಲ್ಲಿಗೆ ಕಾವ್ಯ ಅವರು ವಿಲನ್‌ ಪಟ್ಟ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಈ ವಾರ ಬಿಗ್‌ ಬಾಸ್‌ (Bigg Boss Kannada 12) ಮನೆಯನ್ನ ವಿಲನ್‌ ಕಂಟ್ರೋಲ್‌ಗೆ ತೆಗೆದುಕೊಂಡಿದ್ದರು. ಗಿಲ್ಲಿ ನಟ (Gilli Nata) , ಅಶ್ವಿನಿ ಗೌಡಗೆ ಒಂದು ಸೀಕ್ರೆಟ್‌ ಟಾಸ್ಕ್‌ ಕೊಟ್ಟಿದ್ದರು ಬಿಗ್‌ ಬಾಸ್‌. ಆ ವೇಳೆ ಕಾವ್ಯ ಶೈವ ಅವರನ್ನು ಅಳಿಸಬೇಕು, ಇನ್ನೊಂದು ಕಿಚ್ಚನ ಚಪ್ಪಾಳೆ ಫೋಟೋವನ್ನು ಯಾರಿಗೂ ಗೊತ್ತಾಗದ ಹಾಗೆ ಕದ್ದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು. ಈ ಎರಡೂ ಟಾಸ್ಕ್‌ ಗೆದ್ದರೆ ಡೈರೆಕ್ಟ್‌ ಆಗಿ ಕ್ಯಾಪ್ಟನ್ಸಿ (Captaincy Task) ಟಾಸ್ಕ್‌ ಗೆಲ್ಲಬಹುದು. ಅದನ್ನ ಯಶಸ್ವಿಯಾಗಿಯೇ ನಿಭಾಯಿಸಿದ್ದರು ಗಿಲ್ಲಿ. ಆದರೀಗ ಗಿಲ್ಲಿಗೆ (Gilli Kavya) ಕಾವ್ಯ ಅವರು ವಿಲನ್‌ ಪಟ್ಟ ಕೊಟ್ಟಿದ್ದಾರೆ.

ವಿಲನ್‌ ಯಾರು?

ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಈ ಮನೆಯ ವಿಲನ್‌ ಯಾರು? ಅಂತ ಹೇಳಬೇಕಿತ್ತು. ಕಾವ್ಯ ಅವರು ಗಿಲ್ಲಿ ಹಾಗೂ ರಕ್ಷಿತಾಗೆ ವಿಲನ್‌ ಪಟ್ಟ ಕೊಟ್ಟಿದ್ದಾರೆ. ರಕ್ಷಿತಾಗೆ ಬಹುತೇಕರು ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್‌ ಮನವಿ ಮಾಡಿದ್ದೇನು?

ಕಲರ್ಸ್‌ ಕನ್ನಡ ಪ್ರೋಮೋ



ರಕ್ಷಿತಾ ಬಗ್ಗೆ ಕಾವ್ಯ ಮಾತನಾಡಿ, ಒಂದೊಂದು ವ್ಯಕ್ತಿಗೆ ಒಂದೊಂದು ಫಾರ್ಮುಲ್‌ ಯೂಸ್‌ ಮಾಡ್ತಾಳೆ. ವ್ಯಕ್ತಿತ್ವ, ಭಾಷೆ ಅನ್ನೋದು ಅವಳ ಸ್ಟ್ರಾಟಜಿ. ಕನ್ನಿಂಗ್‌ ವ್ಯಕ್ತಿತ್ವ ಅಂದರೆ ರಕ್ಷಿತಾ ಎಂದರು. ಅದಕ್ಕೆ ರಕ್ಷಿತಾ ಕೂಡ ಸಿಟ್ಟಿಗೆದ್ದು, ಕಾವ್ಯ ಅವರು ಒಳ್ಳೆಯ ಕಾಂಪಿಟೇಟರ್‌ ಅಲ್ಲ ಎಂದಿದ್ದಾರೆ. ಅದಕ್ಕೆ ಕಾವ್ಯ ಇದ್ದವರು, ನಿನ್ನ ಥರ ನಾನು ಓವರ್‌ ಡ್ರಾಮಾ ಮಾಡಲ್ಲ. ವಾದ ಮಾಡಬೇಕು ಅಂದರೆ ಅರ್ಧಕ್ಕೆ ಸ್ಟಾಪ್‌ ಮಾಡಲ್ಲ. ಪುಕ್ಕಳಿ ನಾನಲ್ಲ ಅಂತ ಅಬ್ಬರಿಸಿದ್ದಾರೆ.

ಕಾವ್ಯ ಪ್ರಶ್ನೆ

ಗಿಲ್ಲಿ ಬಗ್ಗೆ ಕಾವ್ಯಾಗೆ ಅಸಮಾಧಾನ ಶುರು ಆಗಿದೆ. ಆದರೂ ನಿನ್ನೆಯ ಸಂಚಿಕೆಯಲ್ಲಿ ಗಿಲ್ಲಿ ಸೀಕ್ರೆಟ್‌ ಟಾಸ್ಕ್‌ ಕೊಟ್ಟಿರೋ ಬಗ್ಗೆ ಕಾವ್ಯ ಪ್ರಶ್ನೆ ಮಾಡಿದ್ದರು. ಆದರೂ ಎಲ್ಲಿಯೂ ಕಾವ್ಯ ಅದನ್ನ ಬಿಟ್ಟುಕೊಡಲಿಲ್ಲ. ಗಿಲ್ಲಿ ನಟ ರೇಗಿಸ್ತಾರೆ, ಎಷ್ಟು ಹೇಳಿದರೂ ಕೇಳೋದಿಲ್ಲ, ಹಾಗಾಗಿ ನಾಮಿನೇಟ್‌ ಮಾಡ್ತೀನಿ ಎಂದು ಕಾರಣ ಕೊಟ್ಟು ಕಾವ್ಯ ಶೈವ ನಾಮಿನೇಟ್‌ ಮಾಡಿದ್ದರು. ಆ ಬಳಿಕ ಗಿಲ್ಲಿ ನಟ ಅವರು ಇದೇ ವಿಷಯ ಇಟ್ಟುಕೊಂಡು ಒಂದಿಷ್ಟು ಮಾತನಾಡಿ ಕಣ್ಣೀರು ಹಾಕಿಸಿದ್ದಾರೆ.

ಗಿಲ್ಲಿ ನಟ ಅವರು ಕಾವ್ಯಗೆ, “ನೀನು ಪ್ರಿ ಪ್ರೊಡಕ್ಟ್‌, ಇದುವರೆಗೂ ಏನೂ ಮಾಡಿಲ್ಲ. ಮೇಕಪ್‌ ಹಾಕಿಕೊಂಡು ಕೂತಿದ್ಯಾ ಅಷ್ಟೇ. ನಿನ್ನ ಜೊತೆ ನಾನು ಜಂಟಿಯಾಗಿ ಬರಬಾರದಿತ್ತು. ಒಂದೇ ತಟ್ಟೆಯಲ್ಲಿ ಊಟ ಮಾಡಿ ಮಚ್ಚು ಹಾಕ್ತೀಯಾ, ಬೆನ್ನಿಗೆ ಚೂರಿ ಹಾಕ್ತೀಯಾ.

ಇದನ್ನೂ ಓದಿ: Bigg Boss Kannada 12: ಸ್ಪಂದನಾಗೆ ರಜತ್‌ ಭರ್ಜರಿ ಕೌಂಟರ್‌! ಅಶ್ವಿನಿಗೆ ಗಿಲ್ಲಿ ಹೇಳಿದ್ದೇನು ಗೊತ್ತಾ?

ಸ್ಪಂದನಾ ಲಕ್ಕಿ ಅಲ್ಲ, ನೀನು ಲಕ್ಕಿ” ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಕಾವ್ಯ ಶೈವಗೆ ಬೇಸರ ಆಗಿದೆ. ಕಾವ್ಯ ಬೇಸರ ಮಾಡಿಕೊಂಡರು ಎಂದು ಗಿಲ್ಲಿ ಊಟ ಮಾಡಿಲ್ಲ.

Yashaswi Devadiga

View all posts by this author