ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್‌ ಮನವಿ ಮಾಡಿದ್ದೇನು?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ ಅವರು ಸಖತ್‌ ಆಕ್ಟಿವ್‌ ಆಗಿದ್ದಾರೆ. ಹಿಂದಿನ ವಾರ ಸೇಫ್‌ ಕೂಡ ಆಗಿದ್ದರು. ಧ್ರುವಂತ್‌ ಅವರಿಗೆ ಗಿಲ್ಲಿ ಅವರ ಕಾಮಿಡಿ ಬಗ್ಗೆ ಆಕ್ಷೇಪವಿದೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಗಿಲ್ಲಿ ಅವರ ಬಳಿ ದೇವರ ಮುಂದೆಯೇ ವಿಶೇಷ ಮನವಿ ಮಾಡಿದ್ದಾರೆ ಧ್ರುವಂತ್‌. ಸೋಲುವರೆಗೂ ಸೋಲಬೇಡಿ ಅಂತ ಸುದೀಪ್‌ ಹೇಳಿರುವ ಮಾತನ್ನು ಧ್ರುವಂತ್‌ ಈಗ ಪಾಲಿಸುತ್ತಿದ್ದಾರೆ.

ಗಿಲ್ಲಿಗೆ ಕೈ ಮುಗಿದು ಧ್ರುವಂತ್ ಮನವಿ ಮಾಡಿದ್ದೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 9, 2025 9:33 AM

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಧ್ರುವಂತ್‌ (Dhruvanth) ಅವರು ಸಖತ್‌ ಆಕ್ಟಿವ್‌ ಆಗಿದ್ದಾರೆ. ಹಿಂದಿನ ವಾರ ಸೇಫ್‌ ಕೋಡ ಆಗಿದ್ದರು. ಧ್ರುವಂತ್‌ ಅವರಿಗೆ ಗಿಲ್ಲಿ ಅವರ ಕಾಮಿಡಿ ಬಗ್ಗೆ ಆಕ್ಷೇಪವಿದೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ (Gilli Nata) ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಗಿಲ್ಲಿ ಅವರ ಬಳಿ ದೇವರ ಮುಂದೆಯೇ ವಿಶೇಷ ಮನವಿ ಮಾಡಿದ್ದಾರೆ ಧ್ರುವಂತ್‌. ಸೋಲುವರೆಗೂ ಸೋಲಬೇಡಿ ಅಂತ ಸುದೀಪ್‌ (Sudeep) ಹೇಳಿರುವ ಮಾತನ್ನು ಧ್ರುವಂತ್‌ ಈಗ ಪಾಲಿಸುತ್ತಿದ್ದಾರೆ. ಗೇಮ್‌ವನ್ನು ಚೆನ್ನಾಗಿ ಆಡುತ್ತಿದ್ದಾರೆ.

ನನ್ನ ಆಟವನ್ನು ಅವಮಾನಿಸಬೇಡಿ

ದೇವರ ಮುಂದೆ ಗಿಲ್ಲಿಯನ್ನು ಕರೆದುಕೊಂಡು ಹೋಗಿ ಧ್ರುವಂತ್‌, ಸ್ನೇಹಪೂರ್ವಕವಾಗಿ ಒಂದು ಮಾತು ಹೇಳುತ್ತೇನೆ. ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೇನೆ. ಅದಕ್ಕೆ ಸಾಕ್ಷಿಯೇ ಈ ದೇವಿ. ನೀವು ದಯವಿಟ್ಟು ನನ್ನನ್ನು ಮತ್ತು ನನ್ನ ಆಟವನ್ನು ಅವಮಾನಿಸಬೇಡಿ. ನನ್ನ ಹಿಂದೆ ಹೇಗೆ ಇರುತ್ತೀರೋ ಅದು ನನಗೆ ಗೊತ್ತಿಲ್ಲ. ಅದು ನಿಮ್ಮ ವ್ಯಕ್ತಿತ್ವ. ನಿಮಗೆ ಅಭ್ಯಂತರ ಇಲ್ಲ ಎಂದರೆ ನಮ್ಮನ್ನು ಬಿಟ್ಟು ಬಿಡಿ. ಹೆಂಗೋ ಬಡಜೀವ ಬದುಕಿಕೊಳ್ಳುತ್ತದೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಬೇರೆಯವರನ್ನು ಅಪಹಾಸ್ಯ ಮಾಡುವ ಮೂಲಕ ಗಿಲ್ಲಿ ನಟ ಅವರು ಕ್ರೆಡಿಟ್‌ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಧ್ರುವಂತ್ ಆರೋಪ.ಧೈರ್ಯದಿಂದ ಆಟ ಮುಂದುವರಿಸುವಂತೆ ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಸಲಹೆ ನೀಡಿದ್ದರು. ‘ಸೋಲುವವರೆಗೂ ಸೋಲಬೇಡಿ’ ಎಂದು ಧೈರ್ಯ ತುಂಬಿದ್ದರು. ಆ ಕಾರಣದಿಂದ ಧ್ರುವಂತ್ ಅವರು ಈಗ ಬಿಗ್ ಬಾಸ್ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ರಜತ್‌-ಧ್ರುವಂತ್‌ ನಡುವೆಯೂ ಮನಸ್ತಾಪ

ಕಳೆದ ವಾರ ಸುದೀಪ್‌ ಅವರ ಮುಂದೆಯೇ ರಜತ್‌ ಹಾಗೂ ಧ್ರುವಂತ್‌ ಜಗಳ ಮಾಡಿಕೊಂಡಿದ್ದರು. ಇದೀಗ ಮತ್ತೆ ಮನೆಯಲ್ಲಿ ನಾಮಿನೇಶನ್‌ ಸಂದರ್ಭದಲ್ಲಿ ಕಿತ್ತಾಡಿಕೊಂಡಿದ್ದಾರೆ. ಧ್ರುವಂತ್‌ ಅವರನ್ನು ಹೊಡೆಯಲು ಮುಂದಾಗಿದ್ದರು ರಜತ್‌. ಕಾವ್ಯ ಅವರು ರಜತ್‌ ಹಾಗೂ ಗಿಲ್ಲಿಯನ್ನು ನಾಮಿನೇಟ್‌ ಮಾಡಿದ್ದಾರೆ.

ʻಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆʼ ಎಂದಿದ್ದಾರೆ. ಅದಕ್ಕೆ ರಜತ್‌ ಕೋಪಗೊಂಡು, ʻತಮಾಷೆನೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾʼ ಅಂತ ಕೂಗಾಡಿದ್ದಾರೆ. ಅದೇ ವೇಳೆಗೆ ಧ್ರುವಂತ್‌ ಹಾಗೂ ರಜತ್‌ ನಡುವೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಅದೇ ವೇಳೆಗೆ ಧ್ರುವಂತ್‌ ಅವರು ರಜತ್‌ಗೆ ಇದೇನು ಲಾಸ್ಟ್‌ ಸೀಸನ್‌ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ ಎಂದಿದ್ದಾರೆ. ರಜತ್‌ಗೆ ಇದು ಕೋಪ ತರಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಧ್ರುವಂತ್‌ ಮೇಲೆ ಹರಿಹಾಯ್ದಿದ್ದಾರೆ.