ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸ್ಪಂದನಾಗೆ ರಜತ್‌ ಭರ್ಜರಿ ಕೌಂಟರ್‌! ಅಶ್ವಿನಿಗೆ ಗಿಲ್ಲಿ ಹೇಳಿದ್ದೇನು ಗೊತ್ತಾ?

Rajath:ಕಳೆದ ಸೀಸನ್ ಸ್ಪರ್ಧಿ ರಜತ್ ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅರ್ಧ ಸೀಸನ್ ಮುಗಿದ ಬಳಿಕ ಅವರು ವೈಲ್ಡ್ ಕಾರ್ಡ್ಮೂ ಲಕ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿನ್ನೆಯ ನಾಮಿನೇಶನ್‌ ಪ್ರಕ್ರಿಯೆ ವೇಳೆ ಕೆಟ್ಟ ಪದಗಳನ್ನು ಬಳಿಸಿದ್ದಾರೆ. ನಾಮಿನೇಟ್ ಮಾಡಿದ ಬಳಿಕ ಸ್ಪರ್ಧಿಗಳನ್ನು ನೀರಿಗೆ ತಳ್ಳಬೇಕು. ರಜತ್‌ ಸಡೆ, ವೇಸ್ಟ್ ನನ್ ಮಗ ಈ ರೀತಿಯ ಪದಗಳನ್ನು ಅವರು ಬಳಸಿದ್ದಾರೆ.

Bigg Boss Kannada : ಸ್ಪಂದನಾಗೆ ರಜತ್‌ ಭರ್ಜರಿ ಕೌಂಟರ್‌!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 10, 2025 11:27 AM

ಕಳೆದ ಸೀಸನ್ ಸ್ಪರ್ಧಿ ರಜತ್ (Bigg Boss rajath) ಅವರು ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅರ್ಧ ಸೀಸನ್ ಮುಗಿದ ಬಳಿಕ ಅವರು ವೈಲ್ಡ್ ಕಾರ್ಡ್ (Wild Card Entry) ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿನ್ನೆಯ ನಾಮಿನೇಶನ್‌ ಪ್ರಕ್ರಿಯೆ ವೇಳೆ ಕೆಟ್ಟ ಪದಗಳನ್ನು ಬಳಿಸಿದ್ದಾರೆ. ನಾಮಿನೇಟ್ ಮಾಡಿದ ಬಳಿಕ ಸ್ಪರ್ಧಿಗಳನ್ನು ನೀರಿಗೆ ತಳ್ಳಬೇಕು. ರಜತ್‌ ಸಡೆ, ವೇಸ್ಟ್ ನನ್ ಮಗ ಈ ರೀತಿಯ ಪದಗಳನ್ನು ಅವರು ಬಳಸಿದ್ದಾರೆ. ಅವರ ಮಾತಿನಿಂದ ಹಲವರಿಗೆ ಕಿರಿಕಿರಿ ಆಗಿದೆ. ಸ್ಪಂದನಾಗಂತೂ (Spandana) ರಜತ್‌ ಅವರು ಸಖತ್‌ ಕೌಂಟರ್‌ ಕೊಟ್ಟಿದ್ದಾರೆ.

ನೀನು ಸುಮ್ಮನೆನೇ ಬಂದಿರೋದು!

ಸ್ಪಂದನಾ ಅವರು ರಜತ್‌ ಅವರನ್ನು ನಾಮಿನೇಟ್‌ ಮಾಡಿದ್ದರು. ಸ್ಪಂದನಾ ಕೊಟ್ಟ ಕಾರಣಕ್ಕೆ ರಜತ್‌ ಟ್ರಿಗರ್‌ ಆದರು. ʻಏನು ಮಾಡದೇ ಮುಂಚೆ ಇಲ್ಲಿಯವರೆಗೂ ಇದ್ದೀನಾʼ ಅಂತ ಸ್ಪಂದನಾ ಕೇಳಿದ್ದಾರೆ. ಅದಕ್ಕೆ ರಜತ್‌, ʻನೀನು ಸುಮ್ಮನೇನೆ ಬಂದಿರೋದು. ಅಧ್ಬುತವಾದ ಟಾಸ್ಕ್‌ ಏನಾದರೂ ಮಾಡಿದ್ದೀಯಾ? ನೀನು ಸುಮ್ಮನೆನೇ ಬಂದಿರೋದು. ಆದರೆ ನೀನು ನನಗೆ ಹೇಳ್ತಾ ಇದ್ದೀಯಾ. ಸುಮ್ಮನೆ ಬಂದಿರೋದು ಅಂತ. ನಾನು ಆಟ ಶುರು ಮಾಡಿ ಒಂದು ವಾರವಾಯ್ತುʼ ಎಂದು ಅಬ್ಬರಿಸಿದ್ದಾರೆ ರಜತ್‌.

ವೈರಲ್‌ ವಿಡಿಯೋ



ಇದನ್ನೂ ಓದಿ: Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್‌ ಮನವಿ ಮಾಡಿದ್ದೇನು?

ಅನೇಕರಿಗೆ ಕೋಪ

ಈಗ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಬಂದಿರುವ ಅವರು ಇಡೀ ಮನೆಯ ವಾತಾವರಣವನ್ನು ಬದಲಾಯಿಸಿದ್ದಾರೆ. ಜಗಳದ ವೇಳೆ ಕೆಟ್ಟ ಪದಗಳನ್ನು ಬಳಸಿದ್ದರಿಂದ ಅನೇಕರಿಗೆ ಕೋಪ ಬಂದಿದೆ. ಧ್ರುವಂತ್, ಅಶ್ವಿನಿ ಗೌಡ ಜೊತೆ ರಜತ್ ಅವರು ಕಿರಿಕ್ ಮಾಡಿಕೊಂಡಿದ್ದಾರೆ.

ಅಶ್ವಿನಿ ಗೌಡ ಮತ್ತು ರಜತ್ ನಡುವೆ ಕೂಡ ದೊಡ್ಡ ಜಗಳ ಆಗಿದೆ. ರಜತ್ ಆಡಿದ ಮಾತುಗಳು ತುಂಬಾ ಕೀಳುಮಟ್ಟದಲ್ಲಿ ಇವೆ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ನೀನು ಕಣೇ ಕಚಡ ಎಂದು ರಜತ್ ಅವರು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿ, ನೀನು ಫ್ರೀ ಪ್ರಾಡಕ್ಟ್‌! ಗಿಲ್ಲಿ ಮಾತಿಗೆ ಕಾವ್ಯ ಕಣ್ಣೀರು

ಗಿಲ್ಲಿ ಅವರು ಅಶ್ವಿನಿಯನ್ನು ಸಖತ್‌ ಆಗಿಯೇ ಟಾರ್ಗೆಟ್‌ ಮಾಡಿದರು. ಜಾನ್ವಿಯನ್ನು ತೆಗೆದುಕೊಂಡು ಅಶ್ವಿನಿ ಅವರು ಫೂಟೇಜ್ ತೆಗೆದುಕೊಳ್ಳುತ್ತಿದ್ದರು. ಅವರು ಹೋದಮೇಲೆ ಮಂಕಾಗಿದ್ದರು. ತಾವು ಬದಲಾಗುತ್ತೇನೆ ಎಂದೆಲ್ಲ ಹೇಳಿಕೊಂಡರು. ಅವರೇನು ಚೇಂಜಸ್‌ ಆಗಿಲ್ಲ . ಹಾಗೇ ಮರಳಿ ಬಂದಿದ್ದಾರೆ ಎಂದು ಗಿಲ್ಲಿ ಹೇಳಿದ್ದಾರೆ.