ಅಬ್ಬಬ್ಬಾ! ಗಿಲ್ಲಿ ನಟನಿಗೆ 1 ತಿಂಗಳಲ್ಲಿ 5 ಲಕ್ಷ ಫಾಲೋವರ್ಸ್; ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಸಾಧನೆ ಮಾಡಿದ ʻಬಿಗ್ ಬಾಸ್ʼ ಸ್ಪರ್ಧಿ, ಕ್ರೇಜ್ ಅಂದ್ರೆ ಇದು ಗುರು!
ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ನಟ ಅವರು 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಬಿಗ್ ಬಾಸ್ ಕನ್ನಡ 12ರಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೇವಲ ಒಂದು ಲಕ್ಷ ಫಾಲೋವರ್ಸ್‌ನೊಂದಿಗೆ ಶೋ ಆರಂಭಿಸಿದ್ದ ಇವರು, ಕಳೆದ ಮೂರು ತಿಂಗಳಲ್ಲಿ 9 ಲಕ್ಷ ಬೆಂಬಲಿಗರನ್ನು ಗಳಿಸಿದ್ದಾರೆ. ಫಿನಾಲೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಅವರ ಕ್ರೇಜ್ ಮುಗಿಲುಮುಟ್ಟಿದೆ.
-
ʻಬಿಗ್ ಬಾಸ್ʼ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟನಿಗೆ ಎಂಥ ಕ್ರೇಜ್ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಕಾಲಿಟ್ಟ ದಿನದಿಂದಲೂ ಗಿಲ್ಲಿ ನಟ ತಮ್ಮದೇ ಆದ ಒಂದು ಕ್ರೇಜ್ ಅನ್ನು ಹುಟ್ಟುಹಾಕಿದ್ದಾರೆ. ಗಿಲ್ಲಿಯಿಂದಾಗಿ ಮನರಂಜನೆ ಹಚ್ಚಾಗಿದೆ ಎಂಬ ಮಾತುಗಳನ್ನು ವೀಕ್ಷಕರು ಹೇಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ಹೊಸ ಸಾಧನೆ ಮಾಡಿದ್ದಾರೆ.
ಒಂದು ಮಿಲಿಯನ್ ಫಾಲೋವರ್ಸ್!
ಹೌದು, ಗಿಲ್ಲಿ ನಟ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಇದು ಸಣ್ಣ ಸಾಧನೆ ಏನಲ್ಲ. ಏಕೆಂದರೆ, ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಕಾಲಿಡುವಾಗ ಅವರಿಗೆ ಇದ್ದಿದ್ದು ಬರೀ 1.02 ಲಕ್ಷ ಫಾಲೋವರ್ಸ್. ಆದರೆ ಆನಂತರದ 100 ದಿನ ಕಳೆಯುವುದರಲ್ಲಿ ಗಿಲ್ಲಿ ನಟ ಅವರ ಫಾಲೋವರ್ಸ್ ಸಂಖ್ಯೆ 10 ಲಕ್ಷ ದಾಟಿದೆ. ಅಚ್ಚರಿ ಎಂದರೆ, ಕಳೆದ 30 ದಿನಗಳಲ್ಲಿ 5 ಲಕ್ಷ ಬೆಂಬಲಿಗರು ಬಂದರೆ, ಕಳೆದ 2 ದಿನಗಳಲ್ಲಿ 2 ಲಕ್ಷ ಫಾಲೋವರ್ಸ್ ಬಂದಿರುವುದು ಗಿಲ್ಲಿ ನಟ ಅವರ ಕ್ರೇಜ್ ಅನ್ನು ತೋರಿಸಿದೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಗಿಲ್ಲಿ ಟೀಮ್ ಹೇಳಿದ್ದೇನು?
"1.02 ಲಕ್ಷ followers ಇಂದ ಶುರುವಾದ Bigg Boss ಪಯಣದಲ್ಲಿ ಇಂದು 1M followers ತಲುಪಿದೆ. ಸಣ್ಣ ಸಣ್ಣ ಹೆಜ್ಜೆಯಿಂದ ಆರಂಭವಾದ ಈ ದಾರಿಲಿ ಸಿಕ್ಕ ಜೊತೆಗಾರರು, ಬೆಂಬಲಿಗರು, ಅಭಿಮಾನಿಗಳ ಪ್ರೀತಿಗೆ ಮನಸ್ಸು ತುಂಬಿ ಬರುತ್ತೆ!!! ಈ 1 ಮಿಲಿಯನ್ ಕೇವಲ ಸಂಖ್ಯೆಯಲ್ಲ, ಇದು ಒಬ್ಬ ಕಲಾವಿದನಿಗೆ ತನ್ನ ಕಲೆ ಮೇಲೆ ಹೆಚ್ಚಿದ ನಂಬಿಕೆ-ವಿಶ್ವಾಸದ ಕುರುಹು!!! ಅಂಥದ್ದೇ ನಂಬಿಕೆಯಿಂದ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಜವಾಬ್ದಾರಿಯನ್ನ ನಮಗೆ ವಹಿಸಿದ ಗಿಲ್ಲಿ ಹಾಗೂ ನಮ್ಮ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸೋ ಗಿಲ್ಲಿ ಅಭಿಮಾನಿಗಳಿಗೆ ನಮ್ಮ ತಂಡದ ಕಡೆಯಿಂದ ತುಂಬು ಮನಸ್ಸಿನ ಧನ್ಯವಾದಗಳು!! ಹೀಗೆ ಒಟ್ಟಾಗಿ ಹೆಜ್ಜೆ ಹಾಕುತ್ತ ಜೊತೆಗೆ ಸಾಗೋಣ.. ನಗುತ್ತ ಎಲ್ಲರನ್ನು ನಗಿಸೋಣ" ಎಂದು ಗಿಲ್ಲಿ ನಟ ಅವರ ಸೋಶಿಯಲ್ ಮೀಡಿಯಾ ಟೀಮ್ ಹೇಳಿಕೊಂಡಿದೆ.
ಗಿಲ್ಲಿ ನಟನ ಹೊಸ ಸಾಧನೆ
ಫಿನಾಲೆಗೆ ಇನ್ನೂ 10 ದಿನಗಳಷ್ಟೇ ಬಾಕಿ
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನೂ 10 ದಿನಗಳಷ್ಟೇ ಬಾಕಿ ಉಳಿದಿದ್ದು, ಯಾರು ವಿನ್ನರ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಸದ್ಯ ಬಿಗ್ ಬಾಸ್ ಮನೆಯೊಳಗೆ ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧನುಷ್, ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಕಾವ್ಯ ಇದ್ದಾರೆ. ಇವರಲ್ಲಿ ಯಾರು ಕೊನೆವರೆಗೂ ಇದ್ದು, ಗೆಲುವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕು.