ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ನಾಮಿನೇಶನ್‌ ವೇಳೆ ಗಿಲ್ಲಿ ಮಾಸ್ಟರ್‌ ಪ್ಲ್ಯಾನ್‌! ರಾಶಿಕಾ ಫುಲ್‌ ಶಾಕ್‌, ಗಿಲ್ಲಿ ಫ್ಯಾನ್ಸ್‌ ಖುಷ್‌

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಗಿಲ್ಲಿಗೆ ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಗಿಲ್ಲಿ ಕಾಮಿಡಿ, ಗಿಲ್ಲಿ ಸ್ಟ್ರಾಟಜಿ ಜೊತೆಗೆ ಗಿಲ್ಲಿ ಆಟ ಆಡುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತೆ. ಇದೀಗ ನಾಮಿನೇಶನ್‌ ವೇಳೆಯೂ ಗಿಲ್ಲಿ ಮಾಸ್ಟರ್ ಪ್ಲಾನ್‌ ಎಲ್ಲರಿಗೂ ಅಚ್ಚರಿ ತಂದಿತು. ಬಿಗ್ ಬಾಸ್ ನೀಡಿದ ಹೊಸ ಅವಕಾಶವನ್ನು ರಾಶಿಕಾ ತಪ್ಪಾಗಿ ಊಹಿಸಿ ನಾಮಿನೇಟ್ ಆದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಗಿಲ್ಲಿಗೆ (Gilli Nata) ಅವರದ್ದೇ ಆದ ಫ್ಯಾನ್ಸ್‌ ವರ್ಗ ಇದೆ. ಗಿಲ್ಲಿ ಕಾಮಿಡಿ, ಗಿಲ್ಲಿ ಸ್ಟ್ರಾಟಜಿ ಜೊತೆಗೆ ಗಿಲ್ಲಿ ಆಟ ಆಡುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಲೇ ಇರುತ್ತೆ. ಇದೀಗ ನಾಮಿನೇಶನ್‌ (Nomination) ವೇಳೆಯೂ ಗಿಲ್ಲಿ ಮಾಸ್ಟರ್ ಪ್ಲಾನ್‌ ಎಲ್ಲರಿಗೂ ಅಚ್ಚರಿ ತಂದಿತು. ಬಿಗ್ ಬಾಸ್ ನೀಡಿದ ಹೊಸ ಅವಕಾಶವನ್ನು ರಾಶಿಕಾ (Rashika Shetty) ತಪ್ಪಾಗಿ ಊಹಿಸಿ ನಾಮಿನೇಟ್ ಆದರು.

ಏನಿದು ಟಾಸ್ಕ್‌?

ಈ ವಾರ ಬಿಗ್‌ ಬಾಸ್‌ ಹೊಸ ನಾಮಿನೇಶನ್‌ ವೇಳೆ ಹೊಸ ಅವಕಾಶವನ್ನು ನೀಡಿದ್ದರು. ಆಕ್ಟಿವಿಟಿ ರೂಮ್‌ನಲ್ಲಿ ಸದಸ್ಯ ಹೋಗಬೇಕು. ಎಲ್ಲಾ ಸ್ಪರ್ಧಿಗಳು ಎಷ್ಟು ಜನರನ್ನು ಬೇಕಿದ್ದರೂ ನಾಮಿನೇಟ್ ಮಾಡಬಹುದಿತ್ತು. ಉಳಿದ ಸದಸ್ಯರು ಯಾರನ್ನಾದರೂ ಹೊರಗೆ ಕಳಿಸಲು ಇಚ್ಚಿಸಿದ್ದಲ್ಲಿ ಕೆಂಪು ಬಣ್ಣದ ಬೋರ್ಡ್‌ ತೋರಿಸಬೇಕು. ಹಾಗೇ ನಾಮಿನೇಶನ್‌ನಿಂದ ಸೇಫ್‌ ಮಾಡಿಕೊಳ್ಳಲು ಬಿಗ್‌ ಬಾಸ್‌ ಒಂದು ಅವಕಾಶವನ್ನೂ ನೀಡಿದೆ.ಯಾರು ಯಾರೂ ಹೊರಗೆ ಕಳಿಸಲು ಬಯಿಸಿದ್ದಾರೆ ಎಂದು ಊಹಿಸಬೇಕು. ಅದು ಸರಿಯಾದಲ್ಲಿ ಬಚಾವ್‌ ಆಗ್ತಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟ ದೊಡ್ಡ ಕುತಂತ್ರಿ ಎಂದು ನಾಮಿನೇಟ್‌ ಮಾಡಿದ ರಾಶಿಕಾ!

ಎಷ್ಟು ಮಂದಿ ನಾಮಿನೇಟ್ ಮಾಡಿದ್ದಾರೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಯಾರು ಎಂಬದನ್ನು ಸರಿಯಾಗಿ ಊಹಿಸಬೇಕು. ರಾಶಿಕಾ ಊಹೆಯನ್ನು ಗಿಲ್ಲಿ ನಟ ಅವರು ತಪ್ಪು ಮಾಡಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ಅವರನ್ನ ರಾಶಿಕಾ ನಾಮಿನೇಟ್‌ ಮಾಡಿ ದೊಡ್ಡ ಕುತಂತ್ರಿ ಎಂದಿದ್ದರು. ಆದರೆ ಗಿಲ್ಲಿ ಮಾತ್ರ ರಾಶಿಕಾ ಅವರನ್ನ ನಾಮಿನೇಟ್‌ ಮಾಡೇ ಇಲ್ಲ.



ರಾಶಿಕಾ ಊಹೆ ತಪ್ಪು

ರಾಶಿಕಾ ಲೆಕ್ಕಾಚಾರ ತಪ್ಪಾಗಿದ್ದುಗಿಲ್ಲಿ ಹೆಸರನ್ನು ತಪ್ಪಾಗಿ ಊಹಿಸಿದ್ದರು. ಹೀಗಾಗಿ ರಾಶಿಕಾ ನಾಮಿನೇಟ್ ಆಗಿದ್ದಾರೆ. ಆ ಬಳಿಕ ಗಿಲ್ಲಿ ಅವರು ನಿಮ್ಮ ಹೆಸರು ತೆಗೆದುಕೊಂಡಿಲ್ಲ ಎಂಬುದನ್ನು ಅನೇಕರು ಹೇಳಿದರು. ಇದನ್ನು ಕೇಳಿ ರಾಶಿಕಾ ಶಾಕ್ ಆದರು. ಈ ವಾರ ಕಿಚ್ಚ ಸುದೀಪ್‌ ಅವರು ಹೋಸ್ಟ್‌ ಮಾಡುತ್ತಿಲ್ಲಎಂದು ಅನೌನ್ಸ್‌ ಮಾಡಿದ್ದಾರೆ. ಈ ವಾರ ಫ್ಯಾಮಿಲಿ ವೀಕ್‌ ಇರಲಿದೆ.

ಫ್ಯಾಮಿಲಿ ವೀಕ್‌

ಈ ವಾರ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ. ಆದ್ರೆ ಪ್ರೋಮೋದಲ್ಲಿ ಗಿಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಬೇಸರ ಮಾಡಿಸಿದ್ದಾರೆ ಎಂಬರ್ಥದಲ್ಲಿಯೇ ರಾಶಿಕಾ ತಾಯಿ ಹೇಳಿದಂತೆ ತೋರಿಸಲಾಗಿದೆ.

ರಾಶಿಕಾ ಸೋದರ ಹೆಲ್ಮೆಟ್ ಧರಿಸಿಕೊಂಡು ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳೆಲ್ಲರೂ ಹಿಡಿದು ಹೆಲ್ಮೆಟ್ ಕಳಚಿದಾಗ ಬಂದಂತಹ ವ್ಯಕ್ತಿ ರಾಶಿಕಾ ಸೋದರ ಅಂತ ಗೊತ್ತಾಗಿದೆ. ತದ ನಂತರ ರಾಶಿಕಾ ತಾಯಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಗಿಲ್ಲಿ ಅವರು ಐವರು ಪುರುಷ ಸ್ಪರ್ಧಿಗಳಲ್ಲಿ ನಿಮಗ್ಯಾರು ಇಷ್ಟ ಅಂತ ಕೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಾಶಿಕಾ ತಾಯಿಗೆ ಬೇಸರ ಮಾಡಿದ್ರಾ ಗಿಲ್ಲಿ? ಅಮ್ಮನನ್ನು ಕಂಡು ಸೂರಜ್‌ ಭಾವುಕ

ಈ ಉತ್ತರ ಬಗ್ಗೆ ಪ್ರೋಮೋದಲ್ಲಿ ಇಲ್ಲ. ಆದರೆ ಕೊನೆಯಲ್ಲಿ ರಾಶಿಕಾ ತಾಯಿ ಸ್ವಲ್ಪ ಬೇಸರದಲ್ಲಿಯೇ ಮಾತನಾಡಿದಂತಿದೆ.ಈ ವಾರ ಗಿಲ್ಲಿ, ರಾಶಿಕಾ, ಸ್ಪಂದನಾ, ಅಶ್ವಿನಿ, ಧ್ರುವಂತ್‌, ಧನುಷ್‌, ಮಾಳು, ರಘು, ರಕ್ಷಿತಾ ನಾಮಿನೇಟ್‌ ಆಗಿದ್ದಾರೆ. ಈ ವಾರ ಕಾವ್ಯ ಶೈವ ಅವರು ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ.

Yashaswi Devadiga

View all posts by this author