Bigg Boss Kannada 12: ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಗೆದ್ದ ಗಿಲ್ಲಿ! ಅಶ್ವಿನಿಗೆ ಹೀನಾಯ ಸೋಲು
Gilli Bigg Boss Kannada: ಕಾವ್ಯ ಹಾಗೂ ಸ್ಪಂದನಾ ಉಸ್ತುವಾರಿಗಳಾಗಿದ್ದರೆ, ತಂಡದ ನಾಯಕರುಗಳಾದ ಅಶ್ವಿನಿ ಹಾಗೂ ಗಿಲ್ಲಿ ಆಡಬೇಕಿತ್ತು. ಈ ಹಿಂದೆ ಅಶ್ವಿನಿ ತಂಡ ಎರಡು ಬಾರಿ ವಿನ್ ಆದ್ರೆ, ಈ ವಾರ ಗಿಲ್ಲಿ ತಂಡದ ಮೊದಲ ಗೆಲುವು ಇದಾಗಿತ್ತು. ಈ ಗೆಲುವು ತಂದು ಕೊಟ್ಟಿದ್ದೇ ಗಿಲ್ಲಿ. ಅಷ್ಟೇ ಅಲ್ಲ ರಕ್ಷಿತಾ ಅವರು ಕೂಡ ಸಖತ್ ಆಕ್ಟಿವ್ ಆಗಿ ಆಡಿದ್ದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ನಿನ್ನೆಯ ಎಪಿಸೋಡ್ ಕುತೂಹಲದಿಂದ ಕೂಡಿತ್ತು. ಒನ್ ಮ್ಯಾನ್ ಶೋ ಆಗಿದ್ದರು ಗಿಲ್ಲಿ (Gilli). ಸದಾ ಕಾಮಿಡಿ ಮಾಡಿಕೊಂಡು ಇರ್ತಾನೆ, ತೇಜೋವಧೆ ಮಾಡೋದೆ ಗಿಲ್ಲಿಗೆ ಕೆಲಸ, ಒಂದು ರೂಲ್ಸ್ ಬುಕ್ ಓದೋಕೆ ಬರಲ್ಲ, ವೇಸ್ಟ್ ಸ್ಪರ್ಧಿ ಎಂದು ಅಶ್ವಿನಿ ಗೌಡ ಅವರು ಅಭಿಷೇಕ್ ಬಳಿ ಮಾತನಾಡಿಕೊಂಡಿದ್ದಾರೆ. ಆದ್ರೆ ಫೈನಲ್ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ (Ashwini Gowda) ವಿರುದ್ಧ ತಾನೇ ಅಖಾಡಕ್ಕೆ ಇಳಿದು ಭರ್ಜರಿಯಾಗಿ ಟಾಸ್ಕ್ (Task) ಗೆದ್ದಿದ್ದಾರೆ ಗಿಲ್ಲಿ.
ಅದೃಷ್ಟ ಹೊತ್ತು ತಂದ್ರಾ ರಕ್ಷಿತಾ?
ನಿನ್ನೆ ಉಸ್ತುವಾರಿಗಳೇ ಟಾಸ್ಕ್ ನಿಭಾಯಿಸಬೇಕಿತ್ತು. ಕಾವ್ಯ ಹಾಗೂ ಸ್ಪಂದನಾ ಉಸ್ತುವಾರಿಗಳಾಗಿದ್ದರೆ, ತಂಡದ ನಾಯಕರುಗಳಾದ ಅಶ್ವಿನಿ ಹಾಗೂ ಗಿಲ್ಲಿ ಆಡಬೇಕಿತ್ತು. ಈ ಹಿಂದೆ ಅಶ್ವಿನಿ ತಂಡ ಎರಡು ಬಾರಿ ವಿನ್ ಆದ್ರೆ, ಈ ವಾರ ಗಿಲ್ಲಿ ತಂಡದ ಮೊದಲ ಗೆಲುವು ಇದಾಗಿತ್ತು. ಈ ಗೆಲುವು ತಂದು ಕೊಟ್ಟಿದ್ದೇ ಗಿಲ್ಲಿ. ಅಷ್ಟೇ ಅಲ್ಲ ರಕ್ಷಿತಾ ಅವರು ಕೂಡ ಸಖತ್ ಆಕ್ಟಿವ್ ಆಗಿ ಆಡಿದ್ದರು.
ಇದನ್ನೂ ಓದಿ: Bigg Boss Kannada 12: ಅಶ್ವಿನಿಯವರನ್ನ ಮಾತಿನಲ್ಲೇ ತಿವಿದ ಗಿಲ್ಲಿ; ಟಾಸ್ಕ್ ಮಾಸ್ಟರ್ ಅಂತ ಧ್ರುವಂತ್ ಪ್ರೂವ್!
Gilli won the Mental task against AG aunty🔥🔥🔥
— iamRavan (@Ravan__420) November 20, 2025
The Task Master ❤️🔥#Gilli #BBK12 #BBKSeason12 pic.twitter.com/oJjXPxHUVK
ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡುತ್ತಿರೋ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಪದೇ ಪದೇ ಗಿಲ್ಲಿ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಅಭಿಷೇಕ್ ಮುಂದೆ ಮಾಡಿದ್ದರು. ಗೇಮ್ ಕಾಲು ಭಾಗವಷ್ಟೂ ಕಂಪ್ಲೀಟ್ ಮಾಡದೇ ಗಿಲ್ಲಿ ಮುಂದೆ ಹೀನಾಯ ಸೋಲುಂಡರು.
ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿದೇ ಹವಾ!
ಗಿಲ್ಲಿ ಕೇವಲ ಆಟ ಮಾತ್ರ ಗೆದ್ದಿಲ್ಲ. ಮನರಂಜನೆ ನೀಡುವುದರಲ್ಲೂ ಎತ್ತಿದ ಕೈ. ಶಭಾಷ್ ನಾವ್ ಹಳ್ಳಿ ಜನ ರಾಜಕೀಯ ಅಂತ ಅಂದ್ರೆ ನಾವು ಆಡೋ ಚದುರಂಗ ಚಕ್ರವ್ಯೂಹಕ್ಕಿಂತ ಭೀಕರವಾಗಿರುತ್ತೆ!! ಟ್ರೋಫಿ ಗೆಲ್ಲೋಕೆ ಲೇಔಟ್ ಕಟ್ಟಬೇಕಿಲ್ಲ ಜನರ ಮನಸು ಗೆಲ್ಲಬೇಕು!! ಅದು ನಮ್ಮ ಗಿಲ್ಲಿ ಮಾತ್ರ ಎಂದು ಕಮೆಂಟ್ ಮಾಡಿದ್ದಾರೆ.
ಇದು ನನ್ನ ಗೆಲುವು ಅಲ್ಲ ಬಿಗ್ ಬಾಸ್ ಇದು ನನ್ನ ತಂಡದ ಗೆಲುವು
— ಬಿಸಿಚಾ (@bisichaa) November 20, 2025
- ಗಿಲ್ಲಿ ನಟ #BBK #BBK12 #GilliNata #Gilli pic.twitter.com/vMG5aNqUeS
Gilli ಒಂತರ RCB ಇದ್ದಂಗೆ, task ಗೆದ್ದಿದ್ದಕ್ಕೆ ಈ ರೇಂಜ್ ಗೆ ಹಾವಳಿ . ಇನ್ನು cup ಗೆದ್ದಾಗ ದೀಪಾವಳಿ ನೇ..ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ತಮಗಾದ ಅವಮಾನಕ್ಕೆ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ
ಉರ್ಸೋದು ಅಂತ ಬಂದ್ರೆ ಸೈತಾನ .ಎಂಟರ್ಟೈನ್ಮೆಂಟ್ ಅಂತ ಬಂದ್ರೆ ಸುಲ್ತಾನ .ಬಿಗ್ ಬಾಸ್ ಮನೆಯ ಏಕಚಕ್ರಾಧಿಪತಿ .ನಟ ಚಕ್ರವರ್ತಿ ಗಿಲ್ಲಿ ನಟ ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.