Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ
Rashika Shetty: ಬಿಗ್ ಬಾಸ್ ಮನೆಯಲ್ಲಿ ‘ಟಿಕೆಟ್ ಟು ಟಾಪ್ 6’ ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಹೆಚ್ಚಾಗಿದೆ. ನಿನ್ನೆಯ ಈ ಟಾಸ್ಕ್ ವೇಳೆ ಗಿಲ್ಲಿ ನಟ ಅವರು ಸೋತರು. ಇದರಿಂದ ಧ್ರುವಂತ್ ಅವರಿಗೆ ಫಿನಾಲೆ ಹಾದಿ ಸುಲಭವಾಯಿತು. ಇದೀಗ ಧ್ರುವಂತ್ ಹಾಗೂ ಅಶ್ವಿನಿ ಅವರು ಆಡಯವ ಸಮಯದಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಮಾತುಗಳಿಂದ ಚುಚ್ಚಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ‘ಟಿಕೆಟ್ ಟು ಟಾಪ್ 6’ (Ticket To Top 6) ಟಾಸ್ಕ್‌ನಲ್ಲಿ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ಹೆಚ್ಚಾಗಿದೆ. ನಿನ್ನೆಯ ಈ ಟಾಸ್ಕ್ ವೇಳೆ ಗಿಲ್ಲಿ ನಟ (Gilli Nata) ಅವರು ಸೋತರು. ಇದರಿಂದ ಧ್ರುವಂತ್ ಅವರಿಗೆ ಫಿನಾಲೆ ಹಾದಿ ಸುಲಭವಾಯಿತು. ಇದೀಗ ಧ್ರುವಂತ್ ಹಾಗೂ ಅಶ್ವಿನಿ ಅವರು ಆಡಯವ ಸಮಯದಲ್ಲಿ ರಾಶಿಕಾ (Rashika Shetty), ಅಶ್ವಿನಿ (Ashwini Gowda) ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಮಾತುಗಳಿಂದ ಚುಚ್ಚಿದ್ದಾರೆ.
ರಭಸವಾಗಿ ನೀರು ಚಲ್ಲಿದ ರಾಶಿಕಾ
ರಾಶಿಕಾ ಅವರು ಧ್ರುವಂತ್ ಹಾಗೂ ಅಶ್ವಿನಿ ಮುಖಕ್ಕೆ ರಭಸವಾಗಿ ನೀರು ಚಲ್ಲಿದ್ದಾರೆ. ಒಳ್ಳೆಯವರಂತೂ ಅಲ್ಲ, ಒಳ್ಳಯವರಾಗಿ ತೋರಿಸಿಕೊಳ್ಳೋ ಮನಸ್ಥಿತಿ ಇಲ್ಲ ಎಂದಿದ್ದಾರೆ. ಇನ್ನು ರಾಶಿಕಾ ಹಾಗೂ ರಘು ನೀರು ಎರೆಚುವಾಗ, ಧ್ರುವಂತ್ ಕೂಗಾಡಿದ್ದಾರೆ. ಈ ರೀತಿ ರಭಸವಾಗಿ ನೀರು ಎರಚಿದರೆ ಮುಖ ಏನಾಗಬೇಡ? ರೂಲ್ಸ್ ಬುಕ್ ಒಮ್ಮೆ ಓದಿಕೊಳ್ಳಿ ಎಂದು ಹೇಳಿದ್ದಾರೆ. ಇನ್ನು ಅಶ್ವಿನಿ ಕೂಡ ಕಣ್ಣಿಗೆ ನೀರು ಹೋಗಿದೆ ಎಂದು ಕೂಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನ ಸೋಲಿಸಿದ ಧ್ರುವಂತ್! ʻಟಾಸ್ಕ್ ಆಡೋಕೆ ಬರಲ್ಲ' ಅಂತ ಹೀಯಾಳಿಸಿದ ರಾಶಿಕಾ
ಕೌಂಟರ್ ಕೊಟ್ಟ ರಾಶಿಕಾ
ಇಷ್ಟೆಲ್ಲ ಹೇಳುವಾಗ, ಇದೆಲ್ಲ ನಾಟಕಗಳು ಎಂದಿದ್ದಾರೆ ರಾಶಿಕಾ. ನಿನ್ನ ಥರ ಒಂದು ಸಿನಿಮಾ ಮಾಡಿಕೊಂಡು ಬಂದಿಲ್ಲ ಎಂದಿದ್ದಾರೆ ಅಶ್ವಿನಿ. ಅದಕ್ಕೆ ರಾಶಿಕಾ, ಅದಕ್ಕೆ ಇವತ್ತಿಗೂ ನೀನು ಯಾರೂ ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ. ನಿಮ್ಮ ಥರ ಯಾರಿಗೂ ನಾಟಕ ಮಾಡಿಕೊಂಡು ಮ್ಯಾನುಪುಲೆಟ್ ಮಾಡಿಕೊಂಡು ಯಾರಿಗೂ ಗೊತ್ತಾಗೋದು ಬೇಡ. ನಿನ್ನ ಥರ ಮಾನ ಮಾರ್ಯಾದೆ ತೆಗೆದುಕೊಂಡು ಹೋಗ್ತಾ ಇಲ್ಲ ಅಂತ ಅಶ್ವಿನಿಗೆ ಕೌಂಟರ್ ಕೊಟ್ಟಿದ್ದಾರೆ ರಾಶಿಕಾ.
ಆರು ಮಂದಿಗೆ ಟಿಕೆಟ್ ಫಿನಾಲೆಯ ಟಾಸ್ಕ್ ನೀಡಲಾಗಿದೆ. ಮೊದಲಿಗೆ ಮುಖಕ್ಕೆ ನೀರು ಎರಚುವ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಸ್ಪರ್ಧಿಗಳ ಏಕಾಗ್ರತೆ ಭಂಗ ಮಾಡಲು ಉಳಿದ ಸ್ಪರ್ಧಿಗಳು ಹರಸಾಹಸಪಡಬೇಕು.
ಕಲರ್ಸ್ ಕನ್ನಡ ಪ್ರೋಮೋ
ಕೈಗಳಿಂದ ಕಂಬವನ್ನು ಗಟ್ಟಿಯಾಗಿ ಹಿಡಿಯಬೇಕು. ಉಳಿದ ಇಬ್ಬರು ಏಕಾಗ್ರತೆಯನ್ನು ಕೆಡಿಸುವಂತೆ ಮುಖಕ್ಕೆ ನೀರು ಎರಚಬೇಕು. ರಘು - ರಾಶಿಕಾ ಅವರು ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಧ್ರುವಂತ್, ಅಶ್ವಿನಿ ಅವರು ನೀರು ಎರಚಿದ್ದಾರೆ. ಆಟದ ಭರದಲ್ಲಿ ವ್ಯಕ್ತಿತ್ವವನ್ನು ಕೆಳಗೆ ಇಡಬಾರದು ಎಂದು ರಾಶಿಕಾಗೆ ಅಶ್ವಿನಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?
ಕೆಲವು ದಿನಗಳ ಹಿಂದಷ್ಟೆ ಅಶ್ವಿನಿ ಹಾಗೂ ರಾಶಿಕಾ ಒಳ್ಳೆಯ ಗೆಳೆಯರಂತಿದ್ದರು ಆದರೆ ಕಳೆದ ಕೆಲ ದಿನಗಳಿಂದ ಇದು ಬದಲಾಗಿದೆ. ಇಬ್ಬರೂ ಕೂಡ ಪರಸ್ಪರ ಹಾವು-ಮುಂಗುಸಿ ಆಗಿದ್ದಾರೆ. ಸದ್ಯ ಫಿನಾಲೆ ಓಟದಲ್ಲಿ ಧನುಷ್, ಧ್ರುವಂತ್ ಆಯ್ಕೆ ಆಗಿದ್ದಾರೆ. ಗಿಲ್ಲಿ ಅವರಿಗೆ ಇದರಿಂದ ತೀವ್ರ ಹಿನ್ನಡೆ ಆಗಿದೆ. ಹಾಗಾಗಿ ಕಾವ್ಯಾ, ರಘು, ರಾಶಿಕಾ, ರಕ್ಷಿತಾ, ಧನುಷ್ ಅವರಿಗೆ ಶಾಕ್ ಆಗಿದೆ. ಅಲ್ಲದೇ ಗಿಲ್ಲಿಯನ್ನು ಬೆಂಬಲಿಸುವ ಪ್ರೇಕ್ಷಕರಿಗೂ ಬೇಸರ ಆಗಿದೆ.