ಶನಿವಾರ ಬಂತು ಅಂದ್ರೆ ಬಿಗ್ ಬಾಸ್ (Bigg Boss Kannada 12) ವೀಕ್ಷಕರು ಕಾಯೋದು ಕಿಚ್ಚನ ಪಂಚಾಯ್ತಿಗೆ. ಅಷ್ಟೇ ಅಲ್ಲ ಅದಕ್ಕೂ ಮುನ್ನ ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕು ಅಂತ ಕಮೆಂಟ್ ಕೂಡ ಮಾಡ್ತಾರೆ. ಈ ವಾರ ಕೂಡ ಲಿಸ್ಟ್ ಹೊರ ಬಿದ್ದಿದೆ. ಬಿಗ್ ಬಾಸ್ ಕನ್ನಡ 12ರ 7ನೇ ವಾರದ ವೀಕೆಂಡ್‌ನಲ್ಲಿ (weekend Panchayti) ಸುದೀಪ್ (Sudeep) ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡಬಹುದು ಎನ್ನಲಾಗಿದೆ.
ತಾನೇ ಹಾಲು ಕದ್ದು, ಗಿಲ್ಲಿ ಮೇಲೆ ಆರೋಪ ಹೊರಿಸಿದ ಜಾಹ್ನವಿ
ಜಾಹ್ನವಿ ಈ ಮುಂಚೆ ರಕ್ಷಿತಾ ಅವರನ್ನು ತಮಾಷೆ ಮಾಡೋಕೆ ಹೋಗಿ ಸುದೀಪ್ ಅವರಿಂದ ಮಂಗಳಾರತಿ ಮಾಡಿಸಿಕೊಂಡಿದ್ದರು. ಈ ವಾರವೂ ಆ ಚಾನ್ಸ್ ಇದೆ. ಹಾಲು ಪ್ಯಾಕೆಟ್ ಕದ್ದು ಗಿಲ್ಲಿ ನಟ ಮೇಲೆ ಆರೋಪ ಹೊರಿಸಿದ್ದಾರೆ.
ಆಹಾರ ಪದಾರ್ಥಗಳು ಕಳುವಾಗುತ್ತಿದೆ ಎಂಬ ಕಾರಣಕ್ಕೆ ಕೆಲವನ್ನ ಕ್ಯಾಪ್ಟನ್ ರೂಮ್‌ನಲ್ಲಿ ಇರಿಸಲಾಗಿತ್ತು. ಸ್ವತಃ ಜಾಹ್ನವಿ ಅವರೇ ಹಾಲು ಪ್ಯಾಕೆಟ್ ಕಳ್ಳತನ ಮಾಡಿ, ಗಿಲ್ಲಿ ನಟನ ಮೇಲೆ ಆರೋಪ ಹೊರಿಸಿದ್ದರು. ಇದಕ್ಕೆ ಸುದೀ ಕೂಡ ಸಾಥ್ ಕೊಟ್ಟಿದ್ದರು. ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Bigg Boss Kannada 12: ಗ್ರೂಪಿಸಮ್ ಮಾಡಿ ಕಳಪೆ ಕೊಡದಲ್ಲ, ಕಾರಣ ಅಂದ್ರೆ ಇದು; ಗಿಲ್ಲಿಗೆ ವೀಕ್ಷಕರಿಂದ ಬಹುಪರಾಕ್
ಚಾನೆಲ್ ಬಗ್ಗೆಯೇ ಆರೋಪ ಹೊರಿಸಿದ ಜಾಹ್ನವಿ
ಸೂರಜ್ - ರಾಶಿಕಾ ಮತ್ತು ಸ್ಪಂದನಾ ಅವರನ್ನು ವಾಹಿನಿಯೇ ಉಳಿಸಿಕೊಂಡಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆ ವೇಳೆ ಸೂರಜ್ ಅವರು ಜಾಹ್ನವಿ ಅವರು ಮಾತನಾಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ʻಪದೇ ಪದೇ ಸ್ಪಂದನಾ ಏಕೆ ಸೇವ್ ಆಗ್ತಾ ಇದ್ದಾಳೆ? ಇಲ್ಲಿ ವೋಟ್ ಕೂಡ ಮುಖ್ಯನೇ ಇಲ್ಲ ಅಂತಿಲ್ಲ. ನಮ್ಮ ಚಾನೆಲ್ ಅಂದಾಗ, ಪುಶ್ ಕೂಟ್ಟೇ ಕೊಡ್ತಾರೆ. ಅಭಿ ಹಾಗೇ ಸ್ಪಂದನಾನೇʼ ಇದ್ದಿದ್ದು ಎಂದರು. ಈ ಬಗ್ಗೆ ಹೆಚ್ಚು ಹೊತ್ತು ಚರ್ಚೆ ನಡೆಯೋ ಸಾಧ್ಯತೆ ಇದೆ.
ಮೈಕ್ ಇಲ್ಲದೇ ಮಾತನಾಡಿದ ಜಾಹ್ನವಿ!
ನಾನು ಹಾಗೂ ಜಾಹ್ನವಿ ಒಂದಿನ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತಾಡಿಕೊಳ್ತೀವಿ. ಅದೂ ಮೈಕ್ಸ್ ಇಲ್ಲದೆ ಇಬ್ಬರೂ ಮಾತಾಡುತ್ತೀವಿ ಅಂತ ಸ್ವತಂ ಅಶ್ವಿನಿ ಅವರೇ ಈ ಬಗ್ಗೆ ರಿವೀಲ್ ಮಾಡಿದ್ದಾರೆ. ರೂಲ್ಸ್ ಬ್ರೇಕ್ ಮಾಡಿರೋ ಬಗ್ಗೆ ಕಿಚ್ಚ ಚರ್ಚೆ ಮಾಡಬಹುದಾಗಿದೆ.
ರಕ್ಷಿತಾರನ್ನ ಹೀಯಾಳಿಸಿದ ಧ್ರುವಂತ್
ರಕ್ಷಿತಾ ಶೆಟ್ಟಿ ಕನ್ನಡ ಮಾತನಾಡಲು ಕಷ್ಟಪಡುತ್ತಿರುವ ಬಗ್ಗೆ ದೊಡ್ಮನೆ ಧ್ರುವಂತ್ ಟೀಕಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ನಾನು ಮಂಗಳೂರಿನವನು. ಆದರೆ, ಮಂಗಳೂರಿನಲ್ಲಿ ಯಾರೊಬ್ಬರೂ ರಕ್ಷಿತಾ ರೀತಿ ಮಾತನಾಡುವುದನ್ನು ನೋಡಿಲ್ಲ. ಅಶ್ವಿನಿ ವಿರುದ್ಧ ಮಾತನಾಡುವ ರಕ್ಷಿತಾ, ಸುದೀಪ್ ಎದುರು ಸೈಲೆಂಟ್ ಆಗಿ ಬಿಡುತ್ತಾರೆ ಎಂದು ಹೇಳಿದ್ದರು. ಈ ಬಗ್ಗೆ ಸುದೀಪ್ ಚರ್ಚೆ ಮಾಡಬಹುದು.
ಹುಡುಗಿಯರ ಬಗ್ಗೆ ಕೆಟ್ಟ ಕಮೆಂಟ್
ರಾಶಿಕಾ ವಿಚಾರವಾಗಿ ಧ್ರುವಂತ್ ಕಮೆಂಟ್‌ವೊಂದನ್ನ ಪಾಸ್ ಮಾಡಿದ್ದರು. ಕಾವ್ಯ ಈ ಬಗ್ಗೆ ರಾಶಿಕಾ ಬಳಿ ಚರ್ಚಿಸಿದ್ದರು. ಆ ನಂತರ ಹೆಣ್ಣು ಮಕ್ಕಳ ಜೊತೆ ಮಾತನಾಡೋಕೆ ನನಗೆ ಇಷ್ಟವೇ ಇಲ್ಲ ಎಂದು ಧ್ರುವಂತ್ ಹೇಳಿದ್ದಾರೆ. ಆಗ ಕಾವ್ಯ ಶೈವ ಅವರು, “ಹೆಣ್ಣು ಮಕ್ಕಳ ಬಳಿ ಮಾತನಾಡೋಕೆ ಇಷ್ಟ ಇಲ್ಲ ಅಲ್ಲ. ಹೆಣ್ಣು ಮಕ್ಕಳಿಗೆ ನಿಮ್ಮ ಜೊತೆ ಮಾತನಾಡೋಕೆ ಇಷ್ಟ ಇಲ್ಲ” ಎಂದು ಹೇಳಿದ್ದಾರೆ. ಈ ಬಗ್ಗೆಯೂ ಸುದೀಪ್ ಚರ್ಚಿಸಬಹುದಾಗಿದೆ.
ಇದನ್ನೂ ಓದಿ: Bigg Boss Kannada 12: ಚಾನೆಲ್ ವಿರುದ್ಧ ಗಂಭೀರ ಆರೋಪ ಮಾಡಿದ ಜಾಹ್ನವಿ; ಕಾರಣ ಇದು
ಕಳಪೆ ಕೊಡುವಾಗ ಗ್ರೂಪಿಸಮ್
ಕಳೆದ ವಾರವಷ್ಟೇ ಈ ಬಗ್ಗೆ ಸುದೀಪ್ ವಾರ್ನ್ ಮಾಡಿದ್ದರೂ, ಈ ವಾರ ಮತ್ತದೇ ರಿಪೀಟ್ ಆಗಿದೆ. ಮಾಳು ಅವರಿಗೆ ಕಳಪೆ ನೀಡುವಾಗ, ಚರ್ಚಿಸಿಯೇ ನೀಡಿದ್ದಾರೆ ಬಕೆಟ್ ಗ್ಯಾಂಗ್.