Bigg Boss Kannada 12: ಚಾನೆಲ್ ವಿರುದ್ಧ ಗಂಭೀರ ಆರೋಪ ಮಾಡಿದ ಜಾಹ್ನವಿ; ಕಾರಣ ಇದು
ಬಿಗ್ ಬಾಸ್ (Bigg Boss Kannada 12) ಸ್ಪಂದನಾ ಸೋಮಣ್ಣ (Spandana Somanna) ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವಾಹಿನಿಯೇ (Channel) ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಜಾಹ್ನವಿ ಅವರು ಆರೋಪಿಸಿದ್ದರು. ಈ ಬಗ್ಗೆ ಸೂರಜ್ ತಿಳಿ ಹೇಳಿದ್ದಾಗಿದೆ, ನಿನ್ನೆಯ ಸಂಚಿಕೆಯಲ್ಲಿ ಈ ಬಗ್ಗೆ ಕಾವ್ಯ (Kavya Shaiva) ಕೂಡ ಜಾಹ್ನವಿ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಪ್ರತಿವಾರವೂ ಎಲಿಮಿನೇಷನ್ (Elimination) ನಡೆಯುತ್ತದೆ. ವೀಕ್ಷಕರು ಹಾಕುವ ವೋಟ್‌ಗಳ ಆಧಾರದ ಮೇಲೆ ಇದು ನಡೆಯುತ್ತದೆ ಎನ್ನುತ್ತದೆ ಬಿಗ್ಬಾಸ್. ಆದರೆ ಜಾಹ್ನವಿ ಆರೋಪ ಮಾತ್ರ ಬೇರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಜಾಹ್ನವಿ (Jhanvi bigg boss) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬಾನೆಲ್ ವಿರುದ್ಧವೇ ನಾಲಿಗೆ ಹರಿಬಿಟ್ಟಿದ್ದಾರೆ. ಸ್ಪಂದನಾ ಸೋಮಣ್ಣ ಸೇರಿದಂತೆ ಕೆಲವು ಸ್ಪರ್ಧಿಗಳನ್ನು ವಾಹಿನಿಯೇ ಉದ್ದೇಶಪೂರ್ವಕವಾಗಿ ಸೇವ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ಸೂರಜ್ ತಿಳಿ ಹೇಳಿದ್ದಾಗಿದೆ, ನಿನ್ನೆಯ ಸಂಚಿಕೆಯಲ್ಲಿ ಈ ಬಗ್ಗೆ ಕಾವ್ಯ ಕೂಡ ಜಾಹ್ನವಿ ಅವರಿಗೆ ಬುದ್ಧಿವಾದ ಹೇಳಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ನಮ್ಮಮ್ಮ ಸೂಪರ್ ಸ್ಟಾರ್’ ಶೋನಲ್ಲಿ ಮೊದಲು ಭಾಗಿಯಾಗಿ ಬಳಿಕ, ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ಜಾಹ್ನವಿ ರನ್ನರ್ ಅಪ್ ಆದರ. ಬಳಿಕ ಕಲರ್ಸ್ ಕನ್ನಡ ಸವಿರುಚಿ ಕಾರ್ಯಕ್ರಮದಲ್ಲಿಯೇ ನಿರೂಪಕಿ ಆದವರು ಜಾಹ್ನವಿ. ಇದೀಗ ವಾಹಿನಿ ವಿರುದ್ಧವೇ ಮಾತನಾಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
ವಾಹಿನಿಯೇ ಉಳಿಸಿಕೊಂಡಿದೆ!
ಸೂರಜ್ - ರಾಶಿಕಾ ಮತ್ತು ಸ್ಪಂದನಾ ಅವರನ್ನು ವಾಹಿನಿಯೇ ಉಳಿಸಿಕೊಂಡಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆ ವೇಳೆ ಸೂರಜ್ ಅವರು ಜಾಹ್ನವಿ ಅವರು ಮಾತನಾಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ.
ʻರಾಶಿಕಾ - ಸೂರಜ್‌ದು ಏನೋ ಟ್ರ್ಯಾಕ್ ನಡೆಯುತ್ತಿದೆ, ಚಾನೆಲ್‌ನವರು ಬಿಡಲ್ಲ ಅಂತ ನೀವೇ ಹೇಳಿದ್ರಿ. ಆದರೆ, ನಮ್ಮಲ್ಲಿ ಟ್ರ್ಯಾಕ್ ಇಲ್ಲ. ಚಾನೆಲ್ ವತಿಯಿಂದ ಇವರು ಹೋಗ್ತಾರೆ, ಹೋಗಲ್ಲ ಅಂದ್ರೆ, ನಿಮ್ಮ ಹಳ್ಳವನ್ನ ನೀವೇ ತೋಡಿಕೊಳ್ಳಬೇಡಿʼ ಎಂದು ಹೇಳಿದರು.
ಸ್ಪಂದನಾ ಮೇಲೂ ಆರೋಪ
ಇನ್ನು ಸ್ಪಂದನಾ ವಿಚಾರವಾಗಿ ಜಾಹ್ನವಿ ಮಾತನಾಡಿ, ʻಇಡೀ ಮನೆಗೆ ಗೊತ್ತು ಸ್ಪಂದನಾ ವೀಕ್ ಅಂತ. ಅದರೂ ಸೇವ್ ಆಗ್ತ ಇದ್ದಾಳೆ. ಟಾಸ್ಕ್‌ನಲ್ಲೂ ಇಲ್ಲ. ಅವಳು ಇಲ್ಲಿ ಸೀರಿಯಲ್ ಹೀರೋಯಿನ್. ಮತ್ತು ಹೊರಗಡೆ ಫ್ಯಾನ್. ಅವಳನ್ನ ಎತ್ತುತ್ತಾಯಿದ್ದಾರೆ ಅಂತ ನನಗೆ ಅನಿಸೋದು. ಯಾಕಂದ್ರೆ, ಮಾತಾಡೋಕೆ ಬರಲ್ಲ. ನಮ್ಮ ಚಾನೆಲ್‌ನವರು ನಮ್ಮ ಕಡೆಯವರು ಸುಮ್ನಿರಿ ಇನ್ನೇನು ಹೋಗ್ತಾಳೆ, ಎನ್ನುವಾಗ ಯಾಕೆ ಉಳ್ಕೊಳ್ತಾಳೆ. ಫ್ಯಾನ್ ಫಾಲೋವಿಂಗ್. ಅದೂ ಮ್ಯಾಟರ್ ಆಗುತ್ತೆ ಇಲ್ಲಿ’’ ಎಂದು ಜಾಹ್ನವಿ ಆರೋಪಿಸಿದ್ದಾರೆ.
#bbk12
— Vanya (@Vanya17458999) November 12, 2025
Jaanu Akka- Why did you bring Channel here???😭
Suraj-Rashi track, Spandana colors heroine- you have literally given the weekend topic.
Nimma kathe Govinda 🙏🏻
ಕಾವ್ಯ ಬಳಿಯೂ ಇದೇ ಚರ್ಚೆ!
ʻಪದೇ ಪದೇ ಸ್ಪಂದನಾ ಏಕೆ ಸೇವ್ ಆಗ್ತಾ ಇದ್ದಾಳೆ? ಇಲ್ಲಿ ವೋಟ್ ಕೂಡ ಮುಖ್ಯನೇ ಇಲ್ಲ ಅಂತಿಲ್ಲ. ನಮ್ಮ ಚಾನೆಲ್ ಅಂದಾಗ, ಪುಶ್ ಕೂಟ್ಟೇ ಕೊಡ್ತಾರೆ. ಅಭಿ ಹಾಗೇ ಸ್ಪಂದನಾನೇʼ ಇದ್ದಿದ್ದು ಎಂದರು. ಕಾವ್ಯ ಈ ಬಗ್ಗೆ ಮಾತನಾಡಿ, ʻಇಲ್ಲಿ ನಾವು ಬಹುತೇಕರು ಕಲರ್ಸ್‌ನಿಂದಲೇ ಬಂದಿದ್ದು. ಆದರೆ ನೀವು ಕಲರ್ಸ್‌ನವರು ಸೇಫ್ ಮಾಡ್ತಾರೆ ಅಂತ ಅದಾಗ, ಆಡಿಯನ್ಸ್‌ಗೆ ತಪ್ಪಾದ ಮೆಸೇಜ್ ಕೊಟ್ಟ ಹಾಗಾ ಅನ್ನಿಸುತ್ತೆʼ ಎಂದರು. ಅದಕ್ಕೆ ಜಾಹ್ನವಿ ಅವರು ʻನಾನು ಹಾಗೇ ಹೇಳೇ ಇಲ್ಲ. ಆದರೆ ನನ್ನ ಅಭಿಪ್ರಾಯ ಇದುʼ ಎಂದು ಹೇಳಿದರು.
ಇದನ್ನೂ ಓದಿ: Bigg Boss Kannada 12: ಓವರ್ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ? ರಘು ಆಟಕ್ಕೆ ಬಹುಪರಾಕ್ ಅಂತಿದ್ದಾರೆ ವೀಕ್ಷಕರು!
ಪ್ರತಿವಾರವೂ ಎಲಿಮಿನೇಷನ್ ನಡೆಯುತ್ತದೆ. ವೀಕ್ಷಕರು ಹಾಕುವ ವೋಟ್‌ಗಳ ಆಧಾರದ ಮೇಲೆ ಇದು ನಡೆಯುತ್ತದೆ ಎನ್ನುತ್ತದೆ ಬಿಗ್ಬಾಸ್. ಆದರೆ ಜಾಹ್ನವಿ ಆರೋಪ ಮಾತ್ರ ಬೇರೆ. ಜಾಹ್ನವಿ ಹೀಗೆಲ್ಲಾ ಹೇಳಬಾರದಿತ್ತು. ವೀಕೆಂಡ್‌ನಲ್ಲಿ ಕ್ಲಾಸ್ ತೆಗೆದುಕೊಳ್ಳ ಬೇಕು ಅಂತ ಕಮೆಂಟ್ ಮಾಡ್ತಿದ್ದಾರೆ.