Bigg Boss Kannada 12: ಗ್ರೂಪಿಸಮ್ ಮಾಡಿ ಕಳಪೆ ಕೊಡದಲ್ಲ, ಕಾರಣ ಅಂದ್ರೆ ಇದು; ಗಿಲ್ಲಿಗೆ ವೀಕ್ಷಕರಿಂದ ಬಹುಪರಾಕ್
ಬಿಗ್ ಬಾಸ್ ಮನೆಯ (Bigg Boss Kannada 12) ಬಹುತೇಕ ಮನೆಯ ಎಲ್ಲ ಸದಸ್ಯರು ಮಾಳು (Malu) ಅವರಿಗೆ ಕಳಪೆ (Kalapte) ಕೊಟ್ಟರು. ಆದರೆ ಗಿಲ್ಲಿ (Gilli) ಹಾಗೆ ಮಾಡಲಿಲ್ಲ. ಸೂಕ್ತ ಕಾರಣಗಳನ್ನು ನೀಡಿದರು. ಗ್ರೂಪಿಸಮ್ (groupism) ಮಾಡಿ ಕಳಪೆ ಕೊಟ್ಟ ಸ್ಪರ್ಧಿಗಳ ಮುಂದೆ ಗಿಲ್ಲಿ ಕೊಟ್ಟ ಕಾರಣಗಳಿಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ. ಈ ವಾರ ಅಶ್ವಿನಿ ಗೌಡ (Ashwini Gowda) ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಈ ವಾರ ಬೇರೆ ರೀತಿಯ ಅಶ್ವಿನಿ ಅವರನ್ನು ನೋಡಿದ್ದೇವೆ ಎಂದು ಮನೆಯ ಬಹುತೇಕರು ಅಶ್ವಿನಿ ಅವರಿಗೆ ವೋಟ್ ಹಾಕಿದ್ದಾರೆ.
ಬಿಗ್ ಬಾಸ್ ಕನ್ನಡ -
ಮಾಳು ನಿಪನಾಳ (Malu Nipanal) ಅವರು ಕಳೆದ ವಾರ ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಹಾಗಾಗಿ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕಿದ್ದವು. ತಮ್ಮ ಅಧಿಕಾರ ಬಳಸಿಕೊಂಡು 6 ಜನರನ್ನು ಅವರು ನಾಮಿನೇಟ್ ಮಾಡಿದ್ದರು. ನಾಮಿನೇಟ್ ಮಾಡುವಾಗ, ಮಾಳು ಕೊಟ್ಟ ಕಾರಣವೇ ಇಂದು ಕಳಪೆ ಪಟ್ಟ ಹೊತ್ತು ಜೈಲು ಸೇರಿದ್ದಾರೆ. ಆದರೆ ಗ್ರೂಪಿಸಮ್ ಮಾಡಿ ಕಳಪೆ ಕೊಟ್ಟ ಸ್ಪರ್ಧಿಗಳ ಮುಂದೆ ಗಿಲ್ಲಿ ಕೊಟ್ಟ ಕಾರಣಗಳಿಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ. ಈ ವಾರ ಅಶ್ವಿನಿ ಗೌಡ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ.
ಮಾಳುಗೆ ಕೊಟ್ಟ ಕಾರಣವೇನು?
ಬಹುತೇಕ ಮನೆಯ ಎಲ್ಲ ಸದಸ್ಯರು ಮಾಳು ಅವರಿಗೆ ಕಳಪೆ ಕೊಟ್ಟರು. ಕ್ಯಾಪ್ಟನ್ ಆಗಿದ್ದವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅಡುಗೆ ಮಾಡಬೇಕು ಎಂದರೆ, ಅವರ ಕಡೆಗೆ ಕ್ಯಾಮೆರಾ ಟರ್ನ್ ಆಗಬೇಕು, ಬ್ಯಾಟರಿ ಹಾಕಿಕೊಳ್ಳಬೇಕು ಎಂದರೆ, ಅವರ ಕಡೆ ಕ್ಯಾಮೆರಾ ಟರ್ನ್ ಆಗಬೇಕು ಎಂದು ಕಾರಣ ನೀಡಿದ್ರಿ ನೋಡಿ, ಆಗ ನನಗೆ ತುಂಬಾ ಹರ್ಟ್ ಆಯ್ತು. ಅಹಂಕಾರಿ ಆದರೂ ಒಪ್ಪಿಕೊಳ್ಳಬಹುದು, ಆದರೆ ಆತ ದಡ್ಡನಾದರೆ ಅದರಿಂದ ಸಮರ್ಥರ ಆಟಕ್ಕೂ ತೊಂದರೆ ಆಗುತ್ತದೆ’ ಎಂದು ಜಾಹ್ನವಿ ಹೇಳಿದರು.
Yes Malu made several mistakes this week but he understood that and was in a healing process.
— ÀŔÜÑ (@ArunKumarJV2000) November 14, 2025
The way Gilli framed the words towards malu was very natural ♥️
In between he bodied rashika 🤡 and gang 👊😭#BBK12 #BBKSeason12 #Gilli pic.twitter.com/EWfSuc6Ao4
ಇದನ್ನೂ ಓದಿ: Bigg Boss Kannada 12: ರಘು ಕೊಟ್ಟ ಟಾರ್ಚರ್‌ಗೆ ಸುಸ್ತಾದ ಗಿಲ್ಲಿ! 'ಮೋಟು ಪತ್ಲು' ಜೋಡಿ ಕಂಡು ಬಿದ್ದು ಬಿದ್ದು ನಕ್ಕ ಮನೆಮಂದಿ
ಕ್ಯಾಪ್ಟನ್ ಎನ್ನುವುದಕ್ಕಿಂತ ಅವರೊಬ್ಬರು ಕಂಟ್ರಾಕ್ಟರ್ ಅನ್ನಿಸ್ತು. ನಾಮಿನೇಟ್ ಮಾಡುವಾಗ ಸರಿಯಾದ ಕಾರಣಗಳನ್ನ ನೀಡಬೇಕು ಅಂತ ಸುಧಿ ಎಂದರು. ಆರು ಕಾರಣಗಳಲ್ಲಿ ನೀವು ಕೊಟ್ಟಂತಹ ಒಂದು ಕಾರಣವೂ ನನಗೆ ಸರಿ ಅನ್ನಿಸಲಿಲ್ಲ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡ್ರಿ ಅಂತ ಅನ್ನಿಸ್ತು ಅಂತ ಅಶ್ವಿನಿ ಮಾಳು ಬಗ್ಗೆ ಹೇಳಿದರು.
ಗಿಲ್ಲಿ ಕೊಟ್ಟ ಕಾರಣ ಹೀಗಿತ್ತು
ʻಉತ್ತಮವನ್ನು ಮಾಳು ಅವರಿಗೆ ಕೊಡಲು ಇಷ್ಟ ಪಡುತ್ತೇನೆ. ನನಗೂ ಅನ್ನಿಸಿತ್ತು. 6 ಜನಕ್ಕೆ ನಾಮಿನೇಟ್ ಮಾಡುವಾಗ, ಯಾಕೆ ಇವರು ಈ ರೀತಿ ಕಾರಣ ಕೊಡುತ್ತಿದ್ದಾರೆ ಅಂತ. ಬಹುಶಃ, ಅವರು ಯಾತಕ್ಕಾಗಿ ನಾಮಿನೇಟ್ ಮಾಡಿದೆ ಅಂತ ಹಿಂಟ್ ಕೊಡಲು ಹಾಗೆ ಮಾಡಿರಬೇಕು. ಆಮೇಲೆ ಮಾಳು ಅವರ ನಿರ್ಧಾರ ಸರಿ ಅನ್ನಿಸಿತು.
ಏನಕ್ಕೆ ಅಂದ್ರೆ ಈ ನಾಮಿನೇಟ್ ಆದವರು, ತಾವು ಸೇಫ್ ಆಗಬೇಕು ಅಂತ ಕಿತ್ತಾಡ್ತಾ ಇರಲಿಲ್ಲ. ಮುಂದಿನ ಅಪೋಸಿಟ್ ತಂಡದವರು ನಾಮಿನೇಟ್ ಆಗಬೇಕು ಅಂತ ತಲೆ ಕೆಡಿಸಿಕೊಳ್ತಾ ಇದ್ದರು. ಅದು ಎದ್ದು ಕಾಣಿಸ್ತಾ ಇತ್ತು ಎಂದರು.
ಇನ್ನು ಕಳಪೆ ರಾಶಿಕಾ ಎಂದರು. ನಾನು ಉದಾಹರಣೆ ಕೊಟ್ಟು ಹೇಳ್ತಿನಿ. ನೀನು ಕಸ ಅಲ್ಲ ರಸ. ಆದರೆ ರಸ ಆಗದೇ ಇದ್ದರೂ ಪರವಾಗಿಲ್ಲ. ಸ್ಪಂದನಾ ಕಸ ಆಗಬೇಕು ಅಂತ ತಲೆ ಕೆಡಿಸಿಕೊಳ್ತಾ ಇದ್ದರು. ಹಾಗೇ ರಾಶಿಕಾ ಅವರು ಗೇಮ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂಬ ಕಾರಣವನ್ನು ನೀಡಿದರು.
ಈ ವಾರ ಅಶ್ವಿನಿ ಗೌಡ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ. ಈ ವಾರ ಬೇರೆ ರೀತಿಯ ಅಶ್ವಿನಿ ಅವರನ್ನು ನೋಡಿದ್ದೇವೆ ಎಂದು ಮನೆಯ ಬಹುತೇಕರು ಅಶ್ವಿನಿ ಅವರಿಗೆ ವೋಟ್ ಹಾಕಿದ್ದಾರೆ.